ಇರಾನ್ ಮೇಲೆ ಇಸ್ರೇಲ್ ದಾಳಿ | ಏಟಿಗೆ ಎದಿರೇಟು ಶತಸಿದ್ಧ ಎಂದ ಇರಾನ್
ತಿಂಗಳ ಆರಂಭದಲ್ಲಿ (ಅ.1) ಇಸ್ರೇಲ್ ಮೇಲೆ ಇರಾನ್ ಮಾಡಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಶನಿವಾರ ಮುಂಜಾನೆ ಇರಾನ್‌ನ ರಾಜಧಾನಿ ಟೆಹ್ರಾನ್ ಮತ್ತು ಹತ್ತಿರದ ನಗರಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ.
ಅಕ್ಟೋಬರ್ ಆರಂಭದಲ್ಲಿ (ಅ.1) ಇರಾನ್ ನಡೆಸಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಶನಿವಾರ ಮುಂಜಾನೆ ಇರಾನ್ ರಾಜಧಾನಿ ಟೆಹ್ರಾನ್ ಮತ್ತು ಹತ್ತಿರದ ನಗರಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ.
ಈ ದಾಳಿಯನ್ನು ಇಸ್ರೇಲ್ ಸೇನೆಯೂ ದೃಢಪಡಿಸಿದೆ. ಮತ್ತೊಂದೆಡೆ, ಇರಾನ್ ಅರೆ ಸರ್ಕಾರಿ ಸುದ್ದಿ ಸಂಸ್ಥೆ ತಸ್ನಿಮ್ ಪ್ರಕಾರ, ಶನಿವಾರ (ಅ.26) ಇಸ್ರೇಲ್‌ನ ಯಾವುದೇ 'ಆಕ್ರಮಣ'ಕ್ಕೆ ಪ್ರತಿಕ್ರಿಯಿಸಲು ಸಿದ್ಧವಿರುವುದಾಗಿ ಎಂದು ಇರಾನ್ ಹೇಳಿದೆ.
ಇಸ್ರೇಲ್ ನಡೆಸುವ ಯಾವುದೇ ದಾಳಿಗೆ ಇಸ್ರೇಲ್ ತಕ್ಕ ತಿರುಗೇಟಿನ ಪ್ರತಿಫಲ ಪಡೆಯಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಸ್ನಿಮ್ ಮೂಲಗಳನ್ನು ಉಲ್ಲೇಖಿಸಿ ಹೇಳಿದೆ. ಟೆಹ್ರಾನ್ ಸುತ್ತಮುತ್ತ ಹಲವಾರು ಸ್ಫೋಟಗಳು ನಡೆದಿರುವ ಬಗ್ಗೆ ವರದಿಯಾಗಿವೆ. ಇಸ್ರೇಲಿ ಸೇನೆಯು ಇರಾನ್‌ಗೆ ಈ ಪ್ರದೇಶದಲ್ಲಿ ಹೊಸ ದಾಳಿ ಪ್ರಾರಂಭಿಸಿದರೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಸೀಮಿತ ಹಾನಿ: ಇರಾನ್
ಶನಿವಾರ ಇಸ್ರೇಲ್ ದಾಳಿಗಳು ʼಸೀಮಿತ ಹಾನಿʼಯನ್ನು ಉಂಟುಮಾಡಿದೆ ಎಂದು ಇರಾನ್ ಹೇಳಿದೆ. ಇರಾನಿನ ಸ್ಟೇಟ್ ಟಿವಿ, ಟೆಹ್ರಾನ್ ಸುತ್ತ ಸ್ಟೋಟ ಸಂಭವಿಸಿದ ಬಗ್ಗೆ ವರದಿ ಮಾಡಿದೆ. ಆದರೆ ವಿವರಗಳನ್ನು ನೀಡಲಿಲ್ಲ. ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದ್ದರಿಂದ ಟೆಹ್ರಾನ್‌ನ ಸುತ್ತ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ಅದು ಹೇಳಿಕೊಂಡಿದೆ. ಟೆಹ್ರಾನ್‌ನ ಸುತ್ತ ಕೇಳಿಬರುತ್ತಿರುವ ದೊಡ್ಡ ಸ್ಫೋಟಗಳು ಟೆಹ್ರಾನ್ ನಗರದ ಹೊರಗೆ ಮೂರು ಸ್ಥಳಗಳ ಮೇಲೆ ದಾಳಿ ಮಾಡಿದ ಜಿಯೋನಿಸ್ಟ್ ಆಡಳಿತದ ಕ್ರಮಗಳ ವಿರುದ್ಧ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸುವುದಕ್ಕೆ ಸಂಬಂಧಿಸಿದೆ ಎಂದು ಇರಾನ್‌ನ ಸ್ಟೇಟ್ ಟಿವಿ ಶನಿವಾರ ವರದಿ ಮಾಡಿದೆ. ಟೆಹ್ರಾನ್ ಬಳಿಯ ಕರಾಜ್ ನಗರದ ನಿವಾಸಿಗಳಿಗೆ ಸ್ಟೋಟದ ಸದ್ದು ಕೇಳಿಸಿದೆ. ಟೆಹ್ರಾನ್ ಬಳಿಯ ಹಲವಾರು ಸೇನಾ ಗುರಿಗಳನ್ನು ಇಸ್ರೇಲಿ ಪಡೆಗಳು ಗುರಿಯಾಗಿಸಿಕೊಂಡಿವೆ ಎಂದು ಇರಾನ್‌ನ ಫಾರ್ಸ್ ಸುದ್ದಿ ಸಂಸ್ಥೆ ಹೇಳಿದೆ.
'ಆತ್ಮರಕ್ಷಣೆಯ ಕ್ರಮಗಳು' ಎಂದು ಸಮರ್ಥನೆ
ಶನಿವಾರ ಇರಾನ್ ಮೇಲಿನ ದಾಳಿಯನ್ನು ಆತ್ಮರಕ್ಷಣೆಯ ಕ್ರಮ ಎಂದು ಸಮರ್ಥಿಸಲಾಗಿದೆ. ಅಕ್ಟೋಬರ್ 1 ರಂದು ಇರಾನ್ ಇಸ್ರೇಲ್‌ನಲ್ಲಿ ಉಡಾಯಿಸಿದ ಕ್ಷಿಪಣಿಗಳು ಮತ್ತು ರಾಕೆಟ್‌ಗಳ ದಾಳಿಗೆ ಪ್ರತಿಕ್ರಿಯೆ ಇದು ಎಂದು ಇಸ್ರೇಲಿ ಅಧಿಕಾರಿಗಳು ಹೇಳಿದ್ದಾರೆ. ಇಸ್ರೇಲಿ ರಕ್ಷಣಾ ಪಡೆಗಳ (ಐಡಿಎಫ್) ವಕ್ತಾರ ಡೇನಿಯಲ್ ಹಗರಿ ಇಸ್ರೇಲಿ ನಾಗರಿಕರಿಗೆ ಜಾಗರೂಕರಾಗಿರಲು ಎಚ್ಚರಿಸಿದ್ದಾರೆ.