x

ದುಬೈಗೆ ತೆರಳುವ ಭಾರತೀಯ ಗಮನಕ್ಕೆ: ತುರ್ತು ವೈದ್ಯಕೀಯ ವೆಚ್ಚದಿಂದ ಪಾರಾಗಲು ಇಂದೇ ವೈದ್ಯಕೀಯ ವಿಮೆ ಮಾಡಿಸಿಕೊಳ್ಳಿ!

ವಿದೇಶದಲ್ಲಿ ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳು ಎದುರಾದಾಗ ಆರ್ಥಿಕ ಸಂಕಷ್ಟವನ್ನು ತಪ್ಪಿಸಲು ಸೂಕ್ತ ವೈದ್ಯಕೀಯ ವಿಮೆ ನೆರವಾಗಬಹುದು. ಹೀಗಾಗಿ ಯುಎಇಗೆ ತೆರಳುವ ಭಾರತೀಯರು ಪ್ರಯಾಣದ ಸಿದ್ಧತೆಯ ಭಾಗವಾಗಿ ವೈದ್ಯಕೀಯ ವಿಮೆಗೂ ಆದ್ಯತೆ ನೀಡುವಂತೆ ಸಲಹೆ ನೀಡಲಾಗಿದೆ.


Click the Play button to hear this message in audio format

ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ಗೆ ಪ್ರವಾಸ ಅಥವಾ ಭೇಟಿ ನೀಡಲು ಯೋಜಿಸುತ್ತಿರುವ ಭಾರತೀಯರಿಗೆ ಅಲ್ಲಿನ ಭಾರತೀಯ ರಾಯಭಾರ ಕಚೇರಿ ಮತ್ತು ದುಬೈನ ಭಾರತೀಯ ದೂತಾವಾಸ ಮಹತ್ವದ ಸಲಹೆ ನೀಡಿವೆ. ಪ್ರಯಾಣಕ್ಕೂ ಮುನ್ನ ಸೂಕ್ತ ವೈದ್ಯಕೀಯ ವಿಮೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಯುಎಇಯಲ್ಲಿ ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳು ಅಥವಾ ತುರ್ತು ವೈದ್ಯಕೀಯ ಪರಿಸ್ಥಿತಿಗಳು ಎದುರಾದಾಗ ಆಸ್ಪತ್ರೆ ವೆಚ್ಚ ಭರಿಸುವುದು ದುಬಾರಿಯಾಗಬಹುದು. ಇಂತಹ ಸಂದರ್ಭಗಳಲ್ಲಿ ವೈದ್ಯಕೀಯ ವೆಚ್ಚವನ್ನು ನಿಭಾಯಿಸಲು ಸಾಧ್ಯವಾಗದೆ ಭಾರತೀಯರು ಮತ್ತು ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಸಲಹೆ ನೀಡಲಾಗಿದೆ. ದುಬೈ ಸೇರಿದಂತೆ ಯುಎಇಗೆ ಪ್ರಯಾಣಿಸುವವರು ತಮ್ಮ ಪ್ರಯಾಣದ ಅವಧಿಗೆ ಹೊಂದಿಕೆಯಾಗುವ ವೈದ್ಯಕೀಯ ವಿಮೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ವಿಮೆಯು ತುರ್ತು ಚಿಕಿತ್ಸೆ, ಆಸ್ಪತ್ರೆಗೆ ದಾಖಲಾಗುವ ವೆಚ್ಚ ಮತ್ತು ಅಗತ್ಯ ವೈದ್ಯಕೀಯ ಸೇವೆಗಳನ್ನು ಒಳಗೊಂಡಿದೆಯೇ ಎಂಬುದನ್ನು ಮುಂಚಿತವಾಗಿ ಪರಿಶೀಲಿಸುವುದು ಮುಖ್ಯ.

Read More
Next Story