ಮನೆಗೆ ಬೆಂಕಿ ಹಚ್ಚಲು ಯತ್ನ; ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಅರೆಸ್ಟ್‌
x

ಮನೆಗೆ ಬೆಂಕಿ ಹಚ್ಚಲು ಯತ್ನ; ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಅರೆಸ್ಟ್‌

ಅಮೆರಿಕದ ಟೆಕ್ಸಾಸ್‌ನಲ್ಲಿ ಭಾರತೀಯ ಮೂಲದ ಮನೋಜ್ ಸಾಯಿ ಲಿಲ್ಲಾ ಎಂಬ ವಿದ್ಯಾರ್ಥಿಯನ್ನು ಫ್ರಿಸ್ಕೋ ಪೊಲೀಸರು ಬಂಧಿಸಿದ್ದಾರೆ. ಕುಟುಂಬಸ್ಥರಿಗೆ ಬೆದರಿಕೆ ಮತ್ತು ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ ಗಂಭೀರ ಆರೋಪ ಆತನ ಮೇಲಿದೆ.


ಅಮೆರಿಕದಲ್ಲಿ ಭಾರತೀಯ ಮೂಲದ 22 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಿ, ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ ಆರೋಪದ ಮೇಲೆ ಪೊಲೀಸರ ಅತಿಥಿಯಾಗಿದ್ದಾನೆ. ಬಂಧಿತನನ್ನು ಟೆಕ್ಸಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮನೋಜ್ ಸಾಯಿ ಲಿಲ್ಲಾ ಎಂದು ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆ

ಡಲ್ಲಾಸ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಸೀನಿಯರ್ ವಿದ್ಯಾರ್ಥಿಯಾಗಿರುವ ಮನೋಜ್‌ನನ್ನು ಫ್ರಿಸ್ಕೋ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮನೋಜ್ ಮಾನಸಿಕ ಅಸ್ವಸ್ಥತೆಯಿಂದ (Mental Health Episode) ಬಳಲುತ್ತಿದ್ದಾನೆ ಮತ್ತು ಕುಟುಂಬ ಸದಸ್ಯರಿಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾನೆ ಎಂಬ ದೂರಿನ ಮೇರೆಗೆ ಪೊಲೀಸರು ಆತನ ಮನೆಗೆ ಧಾವಿಸಿದ್ದರು. ಕೆಲವು ದಿನಗಳ ಹಿಂದೆ ಆತ ತನ್ನ ಮನೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ದಾಖಲಾದ ಪ್ರಕರಣಗಳು

ಮನೋಜ್ ವಿರುದ್ಧ ಪೊಲೀಸರು ಈ ಕೆಳಗಿನ ಪ್ರಮುಖ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ.

• ಆರ್ಸನ್ (Arson): ವಾಸದ ಮನೆಗೆ ಹಾನಿ ಮಾಡುವ ಉದ್ದೇಶದಿಂದ ಬೆಂಕಿ ಹಚ್ಚಲು ಯತ್ನಿಸಿದ ಆರೋಪ (ಇದು ಮೊದಲ ದರ್ಜೆಯ ಅಪರಾಧವಾಗಿದೆ).

• ಭಯೋತ್ಪಾದಕ ಬೆದರಿಕೆ (Terroristic Threat): ಕುಟುಂಬದ ಸದಸ್ಯರಿಗೆ ಬೆದರಿಕೆ ಹಾಕಿದ ಆರೋಪ. ಆದರೆ, ಯಾವುದೇ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಸಲು ಯತ್ನಿಸಿದ ಪುರಾವೆಗಳಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಜಾಮೀನು ವಿವರ:

ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 1,03,500 ಅಮೆರಿಕನ್ ಡಾಲರ್ (ಸುಮಾರು ₹86 ಲಕ್ಷಕ್ಕೂ ಹೆಚ್ಚು) ಜಾಮೀನು ಮೊತ್ತವನ್ನು ನಿಗದಿಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More
Next Story