Immediate Ban on Streaming Content Originating from Pakistan
x

ಪಾಕಿಸ್ತಾನ ಮೂಲದ ಎಲ್ಲಾ ಒಟಿಟಿ ಶೋಗಳಿಗೆ ಭಾರತದಲ್ಲಿ ನಿಷೇಧ

ಭಾರತವು ಈಗಾಗಲೇ ಪಾಕಿಸ್ತಾನದ ಹಲವಾರು ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದೆ. ಅವೆಲ್ಲವೂ ಭಾರತದ ವಿರುದ್ಧ "ಪ್ರಚೋದನಕಾರಿ, ಸಮುದಾಯ ಸೂಕ್ಷ್ಮ ಮತ್ತು ತಪ್ಪು ಮಾಹಿತಿ" ಹರಡುತ್ತವೆ ಎಂದು ಆರೋಪಿಸಲಾಗಿತ್ತು


ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಒಟಿಟಿ ಪ್ಲಾಟ್‌ಫಾರ್ಮ್‌ಗಳು, ಮೀಡಿಯಾ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು, ಪಾಕಿಸ್ತಾನ ಮೂಲದ ವೆಬ್ ಸೀರಿಸ್, ಚಲನಚಿತ್ರಗಳು, ಹಾಡುಗಳು, ಪಾಡ್‌ಕಾಸ್ಟ್‌ಗಳು ಮತ್ತು ಇತರ ಸ್ಟ್ರೀಮಿಂಗ್ ವಿಷಯಗಳ ಪ್ರಸಾರವನ್ನು ತಕ್ಷಣವೇ ನಿಲ್ಲಿಸುವಂತೆ ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚನೆ ನೀಡಿದೆ.

ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಪಹಲ್ಗಾಮ್​ ಭಯೋತ್ಪಾದಕರ ದಾಳಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದ್ದು ಈ ನಡುವೆ ಪ್ರಸಾರ ಸಚಿವಾಲಯ ಪಾಕಿಸ್ತಾನದ ಒಟಿಟಿ ಕಂಟೆಂಟ್​ಗಳಿಗೆ ನಿಷೇಧ ಹೇರಿದೆ.

ಭಾರತವು ಈಗಾಗಲೇ ಪಾಕಿಸ್ತಾನದ ಹಲವಾರು ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದೆ. ಅವೆಲ್ಲವೂ ಭಾರತದ ವಿರುದ್ಧ "ಪ್ರಚೋದನಕಾರಿ, ಸಮುದಾಯ ಸೂಕ್ಷ್ಮ ಮತ್ತು ತಪ್ಪು ಮಾಹಿತಿ" ಹರಡುತ್ತವೆ ಎಂದು ಆರೋಪಿಸಲಾಗಿತ್ತು. ನಿಷೇಧವನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೂ ವಿಸ್ತರಿಸಲಾಗಿದೆ.

ಸೀರಿಯಲ್​​ಗಳು​ ಫೇಮಸ್​

ಪಾಕಿಸ್ತಾನದ ಜನಪ್ರಿಯ ಧಾರಾವಾಹಿಗಳಾದ ಜಿಂದಗಿ ಗುಲ್ಜಾರ್ ಹೈ, ಹಮ್‌ಸಫರ್, ಮೇರೆ ಹಮ್‌ಸಫರ್ ಮತ್ತು ತೇರೆ ಬಿನ್ ಭಾರತೀಯ ಪ್ರೇಕ್ಷಕರಲ್ಲಿ ಬಹಳ ಜನಪ್ರಿಯವಾಗಿದ್ದವು. ಅವೆಲ್ಲವೂ ಈಗ ಭಾರತದಲ್ಲಿ ಲಭ್ಯವಿಲ್ಲ.

ಪಾಕಿಸ್ತಾನದ ಹಲವಾರು ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಖಾತೆಗಳು ಭಾರತದಲ್ಲಿ ಪ್ರವೇಶಿಸಲಾಗದಂತಾಗಿವೆ. ಮಾಹಿರಾ ಖಾನ್, ಹನಿಯಾ ಅಮೀರ್, ಅಲಿ ಜಾಫರ್ ಮತ್ತು ಸನಮ್ ಸಯೀದ್ ಸೇರಿದಂತೆ ಹಲವರ ಇನ್‌ಸ್ಟಾಗ್ರಾಮ್ ಖಾತೆಗಳು ಭಾರತೀಯ ಬಳಕೆದಾರರಿಗೆ ಲಭ್ಯವಿಲ್ಲ

ಪಾಕಿಸ್ತಾನದಲ್ಲಿ ಚಿತ್ರೀಕರಣಗೊಂಡಿದ್ದ ಭಾರತೀಯ ನಟಿ ವಾಣಿ ಕಪೂರ್ ಮತ್ತು ಪಾಕಿಸ್ತಾನಿ ನಟ ಫವಾದ್ ಖಾನ್ ಅಭಿನಯದ ಅಬೀರ್ ಗುಲಾಲ್ ಚಲನಚಿತ್ರದ ಭಾರತದ ಬಿಡುಗಡೆಯನ್ನೂ ರದ್ದುಗೊಳಿಸಲಾಗಿದೆ. ಈ ಚಿತ್ರವನ್ನು ಈಗಾಗಲೇ ಪಾಕಿಸ್ತಾನದಲ್ಲಿ ನಿಷೇಧಿಸಲಾಗಿತ್ತು.

ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, "ಪಾಕಿಸ್ತಾನದಿಂದ ಬರುವ ವಿಷಯಗಳು ಭಾರತದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ ಮತ್ತು ಇವು ಸಾಮಾಜಿಕ ಅಶಾಂತಿಯನ್ನು ಉಂಟುಮಾಡಬಹುದು ಎಂದು ಹೇಳಿದೆ.

Read More
Next Story