ಹಿಜ್ಬುಲ್ಲಾ ಮುಖ್ಯಸ್ಥ ಸಯ್ಯದ್ ಹಸನ್ ನಸ್ರಲ್ಲಾ  ಹತ್ಯೆ
x

ಹಿಜ್ಬುಲ್ಲಾ ಮುಖ್ಯಸ್ಥ ಸಯ್ಯದ್ ಹಸನ್ ನಸ್ರಲ್ಲಾ ಹತ್ಯೆ

ಬೈರೂತಿನಲ್ಲಿ ಶುಕ್ರವಾರ ನಡೆದ ವೈಮಾನಿಕ ದಾಳಿಯಲ್ಲಿ ಅವರ ಮಗಳು ಜೈನಾಬ್ ನಸ್ರಲ್ಲಾ ಕೊಲ್ಲಲ್ಪಟ್ಟರು ಎಂದು ವರದಿಯಾಗಿತ್ತು. ಅದೇ ದಾಳಿಯಲ್ಲಿ ಹಸನ್‌ ನಸ್ರಲ್ಲಾ ಕೊಲ್ಲಲ್ಪಟ್ಟರು ಎಂದು ಹೇಳಲಾಗಿದೆ.


ಮಧ್ಯಪ್ರಾಚ್ಯದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದ ಹಿಜ್ಬುಲ್ಲಾ ಮುಖ್ಯಸ್ಥ ಸಯ್ಯದ್ ಹಸನ್ ನಸ್ರಲ್ಲಾ ಅವರು ಲೆಬನಾನ್‌ನ ಬೈರೂತ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹತ್ಯೆಯಾಗಿದ್ದಾರೆ ಎಂದು ಇಸ್ರೇಲಿ ಸೇನೆ ಶನಿವಾರ (ಸೆಪ್ಟೆಂಬರ್ 28) ಹೇಳಿದೆ.

ಬೈರೂತಿನಲ್ಲಿ ಶುಕ್ರವಾರ ನಡೆದ ವೈಮಾನಿಕ ದಾಳಿಯಲ್ಲಿ ಅವರ ಮಗಳು ಜೈನಾಬ್ ನಸ್ರಲ್ಲಾ ಕೊಲ್ಲಲ್ಪಟ್ಟರು ಎಂದು ವರದಿಯಾಗಿದೆ. ಅದೇ ದಾಳಿಯಲ್ಲಿ ಹಸನ್‌ ನಸ್ರಲ್ಲಾ ಕೊಲ್ಲಲ್ಪಟ್ಟರು ಎಂದು ಹೇಳಲಾಗಿದೆ.

ಇಸ್ರೇಲಿ ಸೇನೆ ವಕ್ತಾರ ಲೆಫ್ಟಿನೆಂಟ್ ಕರ್ನಲ್ ನಡಾವ್ ಶೋಶಾನಿ,ʼ ಹಸನ್ ನಸ್ರಲ್ಲಾ ಅವರು ಸತ್ತಿದ್ದಾರೆ,ʼ ಎಂದು ಎಕ್ಸ್‌ ನಲ್ಲಿ ಬರೆದಿದ್ದರು. ಮತ್ತೊಬ್ಬ ಸೇನಾ ವಕ್ತಾರ ಕ್ಯಾಪ್ಟನ್ ಡೇವಿಡ್ ಅವ್ರಹಾಮ್ ಕೂಡ, ʻಶುಕ್ರವಾರದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥನನ್ನು ನಿರ್ಮೂಲಗೊಳಿಸಲಾಗಿದೆ,ʼ ಎಂದು ದೃಢಪಡಿಸಿದ್ದಾರೆ.

ಇಸ್ರೇಲ್ ಗುರಿ: ಲೆಬನಾನ್‌ ಸಾವನ್ನು ದೃಢೀಕರಿಸಿಲ್ಲ. ಈ ಸಾವು ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆಯಿದೆ.

ನಸ್ರಲ್ಲಾ ಅವರನ್ನು ಇಸ್ರೇಲ್‌ ಬಹಳ ಕಾಲದಿಂದ ಗುರಿಯಾಗಿಸಿಕೊಂಡಿತ್ತು. ಇದರಿಂದಾಗಿ ಅವರು ಹಲವು ವರ್ಷಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಅವರು ಹಿಜ್ಬುಲ್ಲಾವನ್ನು ಭಯ ಹುಟ್ಟಿಸುವಂಥ ರಾಜಕೀಯ ಮತ್ತು ಮಿಲಿಟರಿ ಶಕ್ತಿಯಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಹಿಜ್ಬುಲ್ಲಾ ಪಡೆಯಿಂದ ಪ್ಯಾಲೆಸ್ಟೀನಿನ ಹಮಾಸ್ ಹೋರಾಟಗಾರರಿಗೆ ಹಾಗೂ ಇರಾಕ್ ಮತ್ತು ಯೆಮೆನ್‌ನಲ್ಲಿನ ಸಶಸ್ತ್ರ ಸೇನಾಪಡೆಗಳಿಗೆ ತರಬೇತಿ ಕೊಡಿಸಿದರು. ಇರಾನ್‌ನೊಂದಿಗೆ ನಿಕಟ ವೈಯಕ್ತಿಕ ಸಂಪರ್ಕ ಹೊಂದಿದ್ದು, ಇರಾನ್‌ನಿಂದ ಕ್ಷಿಪಣಿ ಮತ್ತು ರಾಕೆಟ್‌ ಸಂಗ್ರಹಿಸಿ, ಇಸ್ರೇಲ್‌ ಮೇಲೆ ಬಳಸಿದರು.

Read More
Next Story