ಎಚ್‌-1ಬಿ, ಗ್ರೀನ್ ಕಾರ್ಡ್ ಬದಲಾವಣೆ: ಆತಂಕ ಹೆಚ್ಚಿಸಿದ ಟ್ರಂಪ್ ಆಡಳಿತದ ಹೊಸ ಯೋಜನೆ
x

ಎಚ್‌-1ಬಿ, ಗ್ರೀನ್ ಕಾರ್ಡ್ ಬದಲಾವಣೆ: ಆತಂಕ ಹೆಚ್ಚಿಸಿದ ಟ್ರಂಪ್ ಆಡಳಿತದ ಹೊಸ ಯೋಜನೆ

ಜಾಗತಿಕ ಸಮುದಾಯ ಆತಂಕಕ್ಕೆ ಕಾರಣವಾಗಿರುವ ಆರ್ಥಿಕ ಸುಂಕ ವೈಫಲ್ಯದ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಎಚ್‌-1ಬಿ ವೀಸಾ, ಗ್ರೀನ್ ಕಾರ್ಡ್ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಯೋಜನೆ ರೂಪಿಸಿದೆ.


ಭಾರತದ ಮೇಲೆ ಅಧಿಕ ಸುಂಕ ಹೇರಿದ ಉಪಕ್ರಮದ ಬೆನ್ನಲ್ಲೇ ಎಚ್‌-1ಬಿ ವೀಸಾ ಮತ್ತು ಗ್ರೀನ್ ಕಾರ್ಡ್ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ತರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಯೋಜನೆ ರೂಪಿಸಿದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ.

ವಿದೇಶಿಗರು ಹೆಚ್ಚಾಗಿ ಬರುತ್ತಿರುವುದರಿಂದ ಅಮೆರಿಕದ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳಲು ಸಾಧ್ಯತೆ ಇದೆ. ಅಮೆರಿಕದ ಸಂಸ್ಥೆಗಳು ಅಮೆರಿಕನ್ನರ ನೇಮಕಾತಿಗೆ ಆದ್ಯತೆಯಾಗಿರಬೇಕು. ಈಗ ಅಮೆರಿಕನ್ನರನ್ನು ನೇಮಕ ಮಾಡಿಕೊಳ್ಳುವ ಸಮಯ ಬಂದಿದೆ ಎಂದು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿದ್ದಾರೆ.

ವೇತನ ಅಸಮಾನತೆ ಪ್ರಶ್ನೆ

ಎಚ್‌-1ಬಿ ಮತ್ತು ಗ್ರೀನ್ ಕಾರ್ಡ್ ಬದಲಾವಣೆಗಳಲ್ಲಿ ರಾಷ್ಟ್ರವು ನೇರವಾಗಿ ಪಾಲ್ಗೊಂಡಿದೆ. ಪ್ರಸ್ತುತ ಸರಾಸರಿ ಅಮೆರಿಕನ್ನರು ವರ್ಷಕ್ಕೆ 75 ಸಾವಿರ ಡಾಲರ್‌ ಗಳಿಸುತ್ತಿದ್ದಾರೆ. ಗ್ರೀನ್ ಕಾರ್ಡ್ ಪಡೆದವರು ಸರಾಸರಿ 66 ಸಾವಿರ ಮಾತ್ರ ಪಡೆಯುತ್ತಿರುವುದು ಅಸಮಾನತೆಗೆ ಕಾರಣವಾಗಿದೆ. ಅದಕ್ಕಾಗಿಯೇ ಟ್ರಂಪ್ ಸರ್ಕಾರವು ಕಠಿಣ ಕ್ರಮಗಳ ಜಾರಿಗೆ ಮುಂದಾಗಿದ್ದು, ಮುಂದೆ ‘ಗೋಲ್ಡ್ ಕಾರ್ಡ್’ ಬರಲಿದೆ ಎಂದರು.

ಟ್ರಂಪ್ ಗೋಲ್ಡ್ ಕಾರ್ಡ್ ಕಲ್ಪನೆ

ಪ್ರಸ್ತುತ ಇಬಿ-5 ವೀಸಾ ಕಾರ್ಯಕ್ರಮ ಬದಲಿಸಲು ಟ್ರಂಪ್ ಆಡಳಿತವು ‘ಗೋಲ್ಡ್ ಕಾರ್ಡ್’ ಯೋಜನೆ ತರುವ ಪ್ರಸ್ತಾವನೆ ಮಾಡಿದೆ. ಇದನ್ನು 5 ಡಾಲರ್ ಮಿಲಿಯನ್ ಹೂಡಿಕೆ ಮಾಡುವ ವಿದೇಶಿ ಹೂಡಿಕೆದಾರರು ಖರೀದಿಸಬಹುದಾಗಿದೆ. ಇದರ ಮೂಲಕ ಶಾಶ್ವತ ವಾಸಸ್ಥಾನ ಹಾಗೂ ಪೌರತ್ವಕ್ಕೆ ಮಾರ್ಗ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಭಾರತೀಯರಿಗೆ ಹೆಚ್ಚುವರಿ ಆತಂಕ

ಲುಟ್ನಿಕ್ ಹೇಳಿಕೆಯು ಅಮೆರಿಕಾದಲ್ಲಿ ಉದ್ಯೋಗ ಮತ್ತು ವಿದ್ಯಾಭ್ಯಾಸಕ್ಕಾಗಿ ವಲಸೆ ಹೋಗಿರುವ ಲಕ್ಷಾಂತರ ಭಾರತೀಯರ ಮೇಲೆ ಹೆಚ್ಚಿನ ಪರಿಣಾಮ ಬೀರಲಿವೆ. ಏಕೆಂದರೆ, ಎಚ್‌-1ಬಿ ವೀಸಾ ಹಂಚಿಕೆಗಳಲ್ಲಿ ಭಾರತೀಯರ ಪಾಲು ಕಳೆದ ಹಲವು ವರ್ಷಗಳಿಂದ ಅತಿ ಹೆಚ್ಚಿದೆ.

ಟ್ರಂಪ್ ಅವರ ಎರಡನೇ ಅವಧಿಯಲ್ಲಿ ಶ್ವೇತಭವನವು ವಿದೇಶಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳ ಮೇಲಿನ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ. ಕೆಲವು ತಿಂಗಳ ಹಿಂದೆ, ವೀಸಾ ಸಂಬಂಧಿತ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುತ್ತಿದ್ದ ಸಿಐಎಸ್‌ ಒಂಬುಡ್ಸ್‌ಮನ್ ಕಚೇರಿ ಮುಚ್ಚುವ ನಿರ್ಧಾರ ಕೂಡ ಕೈಗೊಳ್ಳಲಾಯಿತು. ಇದರಿಂದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಹಾಗೂ ಗ್ರೀನ್ ಕಾರ್ಡ್ ಅರ್ಜಿದಾರರು ತೊಂದರೆಗೊಳಗಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Read More
Next Story