ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ, ಅಪಾಯದಿಂದ ಪಾರು
"ಜುಲೈ 13 ರ (ಶನಿವಾರ) ಸಂಜೆ ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ಅಧ್ಯಕ್ಷೀಯ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮಾಜಿ ಅಧ್ಯಕ್ಷರು ಸುರಕ್ಷಿತವಾಗಿದ್ದಾರೆ ಎಂದು ರಹಸ್ಯ ಸೇವೆಯ ವಕ್ತಾರ ಆಂಥೋನಿ ಗುಗ್ಲಿಯೆಲ್ಮಿ ಹೇಳಿದ್ದಾರೆ. ಅಮೆರಿಕದ ಅತ್ಯುನ್ನತ ತನಿಖಾ ಸಂಸ್ಥೆ ಫೆಡೆರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ ತನಿಖೆ ಆರಂಭಿಸಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಮುಂದಿನ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಪೆನ್ಸಿಲ್ವೇನಿಯಾದಲ್ಲಿ ತಮ್ಮ ಚುನಾವಣಾ ಪ್ರಚಾರ ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳಿಂದ ಗುಂಡಿನ ದಾಳಿಗೆ ಒಳಗಾಗಿದ್ದಾರೆ. ಅವರು ಗಾಯಗೊಂಡಿದ್ದಾರೆ ಅದರೆ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಮೆರಿಕದ ಅತ್ಯುನ್ನತ ತನಿಖಾ ಸಂಸ್ಥೆ ಫೆಡೆರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ ತನಿಖೆ ಆರಂಭಿಸಿದೆ.
ಬೆನ್ನಲ್ಲೇ ಯುಎಸ್ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಚುನಾವಣಾ ಸ್ಥಳದಲ್ಲಿ ಶಂಕಿತ ಶೂಟರ್ ಅನ್ನು ಹೊಡೆದುರುಳಿಸಿದೆ ಎಂದು ಅಮೆರಿಕನ್ ಅಧಿಕಾರಿಗಳು ತಿಳಿಸಿದ್ದಾರೆ. "ಜುಲೈ 13 ರ (ಶನಿವಾರ) ಸಂಜೆ ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ಭಾಷಣ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮಾಜಿ ಅಧ್ಯಕ್ಷರು ಸುರಕ್ಷಿತವಾಗಿದ್ದಾರೆ ಎಂದು ರಹಸ್ಯ ಸೇವೆಯ ವಕ್ತಾರ ಆಂಥೋನಿ ಗುಗ್ಲಿಯೆಲ್ಮಿ ಹೇಳಿದ್ದಾರೆ.
"ಟ್ರಂಪ್ ಅವರು ಈಗ ಆರೋಗ್ಯವಾಗಿದ್ದಾರೆ ಮತ್ತು ಸ್ಥಳೀಯ ವೈದ್ಯಕೀಯ ನೆರವು ನೀಡಲಾಗುತ್ತಿದೆ ಎಂದು ಟ್ರಂಪ್ ಅವರ ವಕ್ತಾರ ಸ್ಟೀವನ್ ಚೆಯುಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೇ ನವೆಂಬರ್‌ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಸ್ತುತ ಬಿಡೆನ್ ಟ್ರಂಪ್ ಅವರನ್ನು ಎದುರಿಸುತ್ತಾರೆ.
ಟ್ರಂಪ್ ನಂತರ ಮಾತನಾಡಿ, ದುಷ್ಕರ್ಮಿಗಳ ಗುಂಡಿನ ದಾಳಿ ಬಳಿಕ ಬುಲೆಟ್ ತನ್ನ ಬಲ ಕಿವಿಯ ಮೇಲ್ಭಾಗವನ್ನು ಗಾಯಗೊಳಿಸಿದೆ ಎಂದು ಹೇಳಿದರು. "ನಮ್ಮ ದೇಶದಲ್ಲಿ ಇಂತಹ ಕೃತ್ಯ ನಡೆಯುವುದು ನಂಬಲಸಾಧ್ಯವಾಗಿದೆ. ಶೂಟರ್ ಬಗ್ಗೆ ಮಾಹಿತಿಯಿಲ್ಲ ನನ್ನ ಬಲ ಕಿವಿಯ ಮೇಲ್ಭಾಗವನ್ನು ಚುಚ್ಚುವಂತೆ ಗುಂಡು ಹಾರಿಸಲಾಗಿದೆ, ನನಗೆ ತಕ್ಷಣ ಗುಂಡಿನ ದಾಳಿ ಬಗ್ಗೆ ಗೊತ್ತಾಯಿತು. ನಾನು ಗುಂಡು ಹಾರಿಸುವ ಶಬ್ದವನ್ನು ಕೇಳಿದೆ, ಮತ್ತು ತಕ್ಷಣವೇ ಕಿವಿಯ ಬಳಿ ರಕ್ತಸ್ರಾವವಾಗುತ್ತಿರುವುದನ್ನು ನಾನು ಅರಿತುಕೊಂಡೆ," ಎಂದವರು ಹೇಳಿದ್ದಾರೆ.
ಸೀಕ್ರೆಟ್ ಸರ್ವಿಸಸ್ ಸಿಬಂದಿಯಿಂದ ಕೊಲ್ಲಲ್ಪಟ್ಟ ವ್ಯಕ್ತಿ ಮತ್ತು ಗಾಯಗೊಂಡ ಇನ್ನೊಬ್ಬರ ಕುಟುಂಬಕ್ಕೆ ಸಂತಾಪ ಸೂಚಿಸಿದ ಅವರು ತಮ್ಮ ಭದ್ರತೆಗಾಗಿ ಕ್ಷಿಪ್ರ ಪ್ರತಿಕ್ರಿಯೆ ತೋರಿದ US ರಹಸ್ಯ ಸೇವೆ ಮತ್ತು ಎಲ್ಲಾ ಕಾನೂನು ಜಾರಿ ಸಂಸ್ಥೆಗಳಿಗೆ ಧನ್ಯವಾದ ಅರ್ಪಿಸಿದರು.
ಟ್ರಂಪ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಹಲವು ಗುಂಡಿನ ಸದ್ದುಗಳು ಕೇಳಿಬಂದವು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ತಕ್ಷಣವೇ ಮಾಜಿ ಅಧ್ಯಕ್ಷರನ್ನು ಅಧಿಕಾರಿಗಳು ಹೊರಕ್ಕೆ ಕರೆದೊಯ್ದು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಆ ನಡುವೆಯೂ ಅವರು ಸುರಕ್ಷಿತವಾಗಿರುವ ಬಗ್ಗೆ ಪ್ರೇಕ್ಷಕರು ಹರ್ಷೋದ್ಗಾರ ಮಾಡುವವಾಗ ಟ್ರಂಪ್ ಅವರು ತನ್ನ ಮುಷ್ಟಿ ತೋರಿಸಿ ತಾನು ಸುರಕ್ಷಿತ ಎಂಬ ಸಂದೇಶವನ್ನು ನೀಡುತ್ತಿರುವುದು ಕಂಡುಬಂತು..
ಬಿಡೆನ್ ಘಟನೆಯನ್ನು ಖಂಡಿಸಿದ್ದಾರೆ
ಶೂಟರ್ ಸತ್ತಿದ್ದಾನೆ ಎಂದು ಕಾನೂನು ಜಾರಿ ಇಲಾಖೆ ಮೂಲವು ಫಾಕ್ಸ್ ನ್ಯೂಸ್‌ಗೆ ತಿಳಿಸಿದೆ. ಅಧ್ಯಕ್ಷ ಜೋ ಬಿಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಇಬ್ಬರೂ ಘಟನೆಯನ್ನು ಖಂಡಿಸಿದ್ದಾರೆ.
"ಟ್ರಂಪ್ ಅವರನ್ನು ರಕ್ಷಿಸಿದ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳಿಗೆ ಕೃತಜ್ಞರಾಗಿದ್ದೇವೆ. ಅಮೆರಿಕದಲ್ಲಿ ಇಂತಹ ಹಿಂಸಾಚಾರಕ್ಕೆ ಜಾಗವಿಲ್ಲ. ಇದನ್ನು ಖಂಡಿಸಲು ನಾವು ಒಂದು ರಾಷ್ಟ್ರವಾಗಿ ಒಂದಾಗಬೇಕು,'' ಎಂದು ಬೈಡನ್ ಹೇಳಿದ್ದಾರೆ.
"ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ರ್ಯಾಲಿಯಲ್ಲಿ ಏನಾಯಿತು ಎಂದು ನಾನು ಗಾಬರಿಗೊಂಡಿದ್ದೇನೆ ಮತ್ತು ಮಾಜಿ ಅಧ್ಯಕ್ಷ ಟ್ರಂಪ್ ಸುರಕ್ಷಿತವಾಗಿದ್ದಾರೆ ಎಂದು ಸಮಾಧಾನಪಡಿಸಿದೆ. ನಮ್ಮ ದೇಶದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಸ್ಥಾನವಿಲ್ಲ ಎಂದು ಸೆನೆಟ್ ಬಹುಮತದ ನಾಯಕ ಚಕ್ ಶುಮರ್ ಹೇಳಿದ್ದಾರೆ.
"ಇದು ಪ್ರತಿಯೊಬ್ಬ ಸ್ವಾತಂತ್ರ್ಯವನ್ನು ಪ್ರೀತಿಸುವ ಅಮೆರಿಕನ್ನರನ್ನು ಭಯಭೀತಗೊಳಿಸಿದೆ. ಅಧ್ಯಕ್ಷೀಯ ಅಭ್ಯರ್ಥಿಗಳ ವಿರುದ್ಧದ ಹಿಂಸಾಚಾರವನ್ನು ಎಂದಿಗೂ ಸಾಮಾನ್ಯಗೊಳಿಸಬಾರದು ರಿಪಬ್ಲಿಕನ್ ಪಕ್ಷದ ಮಾಜಿ ಅಧ್ಯಕ್ಷೀಯ ಅಭ್ಯರ್ಥಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ.
ಮೋದಿ ಕಳವಳ
ಅಮೆರಿಕದ ಮಾಜಿ ಅಧ್ಯಕ್ಷರ ಮೇಲಿನ ದಾಳಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದು, ರಾಜಕೀಯ ಮತ್ತು ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಸ್ಥಾನವಿಲ್ಲ ಎಂದು ಹೇಳಿದ್ದಾರೆ.
"ನನ್ನ ಸ್ನೇಹಿತ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ದಾಳಿಯಿಂದ ತೀವ್ರ ಕಳವಳಗೊಂಡಿದ್ದೇನೆ. ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ರಾಜಕೀಯ ಮತ್ತು ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಳವಿಲ್ಲ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ ಎಂದವರು ಪ್ರತಿಕ್ರಿಯೆ ನೀಡಿದ್ದಾರೆ.