Israel-Hamas ceasefire: ಗಾಜಾ ಪಟ್ಟಿಯಲ್ಲಿ ಕದನ ವಿರಾಮ ಘೋಷಣೆ: ಮೂವರು ಒತ್ತೆಯಾಳುಗಳ ಬಿಡುಗಡೆ
x
ಗಾಜಾಪಟ್ಟಿಯಲ್ಲಿ ಹೊಗೆ ತುಂಬಿದ ಆಕಾಶ.

Israel-Hamas ceasefire: ಗಾಜಾ ಪಟ್ಟಿಯಲ್ಲಿ ಕದನ ವಿರಾಮ ಘೋಷಣೆ: ಮೂವರು ಒತ್ತೆಯಾಳುಗಳ ಬಿಡುಗಡೆ

Israel-Hamas ceasefire: ಯುನೈಟೆಡ್ ಸ್ಟೇಟ್ಸ್, ಕತಾರ್ ಮತ್ತು ಈಜಿಪ್ಟ್‌ನ ಒಂದು ವರ್ಷದ ತೀವ್ರ ಮಧ್ಯಸ್ಥಿಕೆಯ ಬಳಿಕ ಯುದ್ಧ ವಿರಾಮ ಘೋಷಿಸಲಾಗಿದೆ. 15 ತಿಂಗಳ ಭೀಕರ ಸಮರವನ್ನು ಕೊನೆಗೊಳಿಸುವ ಗುರಿಯಲ್ಲಿ ಮೊದಲ ಹೆಜ್ಜೆಯಾಗಿದೆ.


ಮೂರು ಗಂಟೆಗಳ ವಿಳಂಬದ ಬಳಿಕ ಗಾಜಾ ಪಟ್ಟಿಯಲ್ಲಿನ ಕದನ ವಿರಾಮ ಭಾನುವಾರ (ಜನವರಿ 19) ಜಾರಿಗೆ ಬಂದಿದೆ. , ಹಮಾಸ್ ಉಗ್ರರು. ಬಿಡುಗಡೆ ಮಾಡಲಿರುವ ಮೊದಲ ಮೂವರು ಇಸ್ರೇಲಿ ಒತ್ತೆಯಾಳುಗಳ ಹೆಸರುಗಳನ್ನು ಬಿಡುಗಡೆ ಮಾಡಿದೆ.

ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶದ ಮೇರೆಗೆ ಕೊನೆಯ ಕ್ಷಣದ ವಿಳಂಬದ ಹೊರತಾಗಿಯೂ ಗಾಜಾಪಟ್ಟಿಯಲ್ಲಿ 09:15 ಜಿಎಂಟಿಗೆ (ಭಾರತೀಯ ಕಾಲಮಾನ ಮಧ್ಯಾಹ್ನ 2:45ಕ್ಕೆ) ಹಮಾಸ್ ಜೊತೆ ಕದನ ವಿರಾಮ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ಅದಕ್ಕಿಂತ ಮೊದಲು ಭಾನುವಾರದ ನಂತರ ಬಿಡುಗಡೆ ಮಾಡಲು ಯೋಜಿಸಿರುವ ಮೂವರು ಒತ್ತೆಯಾಳುಗಳನ್ನು ಹೆಸರನ್ನು ಹಮಾಸ್‌ ತಕ್ಷಣವೇ ಪ್ರಕಟಿಸದ ಕಾರಣ ಇಸ್ರೇಲ್‌ ಮತ್ತೆ ಕೆರಳಿತ್ತು.

"ಹೆಸರುಗಳನ್ನು ಸ್ವೀಕರಿಸುವವರೆಗೂ ಹೋರಾಡುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿತು. ೩ ಗಂಟೆಗಳ ವಿಳಂಬದ ನಂತರ ಹಮಾಸ್‌ನ ಸಶಸ್ತ್ರ ವಿಭಾಗವು ಸಾಮಾಜಿಕ ಮಾಧ್ಯಮದಲ್ಲಿ ಹೆಸರುಗಳನ್ನು ಪೋಸ್ಟ್ ಮಾಡಿತು" ಎಂದು ಮಾಧ್ಯಗಳಗಳ ವರದಿ ತಿಳಿಸಿದೆ.

ವಹಮಾಸ್ ವಶದಲ್ಲಿರುವ ಮೂವರು ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ಭಾನುವಾರ ಭಾರತೀಯ ಕಾಲಮಾನ ಸಂಜೆ 7:30 ನಂತರ ನಡೆಯಲಿದೆ ಎಂದು ಇಸ್ರೇಲ್ ಹೇಳಿದೆ. ಇತರ ನಾಲ್ವರು ಜೀವಂತ ಮಹಿಳಾ ಒತ್ತೆಯಾಳುಗಳನ್ನು ಏಳು ದಿನಗಳಲ್ಲಿ ಬಿಡುಗಡೆಯಾಗಲಿದ್ದಾರೆ ನೆತನ್ಯಾಹು ಅವರ ಕಚೇರಿ ಹೇಳಿಕೆ ತಿಳಿಸಿದೆ.

ಕದನ ವಿರಾಮದ ಮೊದಲ ಹಂತ

ಯುನೈಟೆಡ್ ಸ್ಟೇಟ್ಸ್, ಕತಾರ್ ಮತ್ತು ಈಜಿಪ್ಟ್‌ನ ಒಂದು ವರ್ಷದ ಮಧ್ಯಸ್ಥಿಕೆಯ ನಂತರ ಈ ಕದನ ವಿರಾಮ ಪ್ರಕಟಗೊಂಡಿದೆ. ಈ ಮೂಲಕ 15 ತಿಂಗಳ ಭೀಕರ ಶಸಸ್ತ್ರ ಸಮರಕ್ಕೆ ಬಿಡುವು ಸಿಗುವ ಲಕ್ಷಣ.

ದಿನಗಳ ಕದನ ವಿರಾಮದ ಮೊದಲ ಹಂತದಲ್ಲಿ 33 ಇಸ್ರೇಲಿ ಒತ್ತೆಯಾಳುಗಳು ಬಿಡುಗಡೆಗೊಂಡರೆ ನೂರಾರು ಪ್ಯಾಲೆಸ್ತೀನ್ ಕೈದಿಗಳು ‌ಬಂಧಮುಕ್ತರಾಗಲಿದ್ದಾರೆ.

ಈ ಕದನ ವಿರಾಮದ ಪ್ರಕ್ರಿಯೆಯಲ್ಲಿ ಹೆಚ್ಚು ಕಷ್ಟಕರ ಎನಿಸಿರುವ ಎರಡನೇ ಹಂತದ ಮಾತುಕತೆಗಳು ಎರಡು ವಾರಗಳಲ್ಲಿ ಪ್ರಾರಂಭವಾಗಲಿದೆ. ಈ ವೇಳೆ ಗಾಜಾದ ವಶದಲ್ಲಿರುವ 100 ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. ಹೀಗಾಗಿ ಈ ಮಾತುಕತೆ ಎಷ್ಟು ಫಲಪ್ರದವಾಗುತ್ತದೆ ಎಂಬ ಚರ್ಚೆಗಳು ಉಂಟಾಗಿವೆ.

ಒತ್ತೆಯಾಳುಗಳ ಬಗ್ಗೆ

ಹಮಾಸ್‌ನ ಸಶಸ್ತ್ರ ವಿಭಾಗವು ಮೂವರು ಮಹಿಳಾ ಒತ್ತೆಯಾಳುಗಳ ಹೆಸರುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಇಸ್ರೇಲ್‌ ತಕ್ಷಣವೇ ಪ್ರತಿಕ್ರಿಯೆ ಕೊಟ್ಟಿಲ್ಲ. ಭಾನುವಾರ ಬಿಡುಗಡೆಯಾಗಬೇಕಿದ್ದ ಒತ್ತೆಯಾಳುಗಳನ್ನು ರೋಮಿ ಗೊನೆನ್, ಡೋರಾನ್ ಸ್ಟೈನ್ಬ್ರೆಚರ್ ಮತ್ತು ಎಮಿಲಿ ದಮರಿ ಎಂದು ಹಮಾಸ್ ಹೆಸರಿಸಿದೆ.

ಇಬ್ಬರು ಮಹಿಳೆಯರನ್ನು ಇಂದು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ದಮರಿ ಮತ್ತು ಸ್ಟೈನ್ ಬ್ರೆಚರ್ ಅವರ ಕುಟುಂಬಗಳು ಖಚಿತಪಡಿಸಿವೆ.

2023ರ ಅಕ್ಟೋಬರ್ 7ರಂದು ಕಿಬ್ಬುಟ್ಜ್ ಕಫರ್ ಅಝಾದಲ್ಲಿರುವ ತಮ್ಮ ಮನೆಗಳಿಂದ ದಮರಿ ಮತ್ತು ಸ್ಟೈನ್ಬ್ರೆಚರ್ ಇಬ್ಬರನ್ನೂ ಒತ್ತೆಯಾಳುಗಳನ್ನಾಗಿ ಕರೆದೊಯ್ಯಲಾಗಿತ್ತು. ದಮರಿಯನ್ನು ಭಯೋತ್ಪಾದಕರು ಗುಂಡಿಕ್ಕಿ ಗಾಯಗೊಳಿಸಿದ್ದರು.

ಗಾಜಾದಲ್ಲಿ ಸಂಭ್ರಮ

ಯುದ್ಧದಿಂದ ತತ್ತರಿಸಿ ಹೋಗಿದ್ದ ಗಾಜಾ ಪಟ್ಟಿಯ ಪ್ರದೇಶದಾದ್ಯಂತ ಸಂಭ್ರಮಾಚರಣೆಗಳು ನಡೆಯುತ್ತಿವೆ. ಕೆಲವು ಪ್ಯಾಲೆಸ್ತೀನಿಯರು ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ. ಈ ಒಪ್ಪಂದವು ಯುದ್ಧ ಕೊನೆಗೊಳಿಸುವ ಉದ್ದೇಶ ಹೊಂದಿದೆ. ಆದರೆ, ಅಕ್ಟೋಬರ್ 7, 2023 ರ ಹಮಾಸ್ ದಾಳಿ ವೇಳೆ ಅಪಹರಣಕ್ಕೊಳಗಾದ ಸುಮಾರು 100 ಒತ್ತೆಯಾಳುಗಳನ್ನು ದೇಶಕ್ಕೆ ಮರಳಿ ಕರೆ ತರಲೂ ಇಸ್ರೇಲ್‌ ಯತ್ನಿಸುತ್ತಿದೆ.

ಕದನ ವಿರಾಮ ಪ್ರಾರಂಭವಾಗುವ ಒಂದು ಗಂಟೆ ಮೊದಲು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ನೆತನ್ಯಾಹು ಅವರ ಕಚೇರಿ "ಕದನ ವಿರಾಮಕ್ಕೆ ಐಡಿಎಫ್ (ಮಿಲಿಟರಿ) ಗೆ ಸೂಚನೆ ನೀಡಿದ್ದೇನೆ ... ಬಿಡುಗಡೆಗೊಳ್ಳಬೇಕಾದ ಒತ್ತೆಯಾಳುಗಳ ಪಟ್ಟಿಯನ್ನು ಇಸ್ರೇಲ್ ಪಡೆಯುವವರೆಗೂ ಪ್ರಕ್ರಿಯೆ ಪ್ರಾರಂಭವಾಗುವುದಿಲ್ಲ ಎಂದು ಹೇಳಲಾಗಿತ್ತು.

Read More
Next Story