
ರನ್‌ವೇನಲ್ಲಿ ವಿಮಾನಕ್ಕೆ ಸಿಲುಕಿ ವ್ಯಕ್ತಿ ಛಿದ್ರ ಛಿದ್ರ: ಇಂಜಿನ್‌ನಲ್ಲಿ ನೇತಾಡುತ್ತಿದ್ದ ಕಾಲುಗಳು! ಬೆಚ್ಚಿಬೀಳಿಸುವ ವಿಡಿಯೋ ವೈರಲ್
ಅಮೆರಿಕದ ಡೆನ್ವರ್ ವಿಮಾನ ನಿಲ್ದಾಣದಲ್ಲಿ ರನ್‌ವೇಗೆ ನುಗ್ಗಿದ ವ್ಯಕ್ತಿ ವಿಮಾನಕ್ಕೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾನೆ. ಈ ಘಟನೆಯ ಭೀಕರ ವಿವರಗಳು ಇಲ್ಲಿವೆ.
ಅಮೆರಿಕದ ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೈ ಜುಂ ಎನ್ನಿಸುವಂತಹ ಭೀಕರ ದುರಂತವೊಂದು ಸಂಭವಿಸಿದೆ. ಭದ್ರತಾ ಬೇಲಿಯನ್ನು ಜಿಗಿದು ರನ್‌ವೇಗೆ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ವಿಮಾನಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾನೆ. ಈ ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ವ್ಯಕ್ತಿಯ ದೇಹದ ಭಾಗಗಳು ರನ್‌ವೇ ಉದ್ದಕ್ಕೂ ಹರಡಿಕೊಂಡಿವೆ.
ನಡೆದಿದ್ದೇನು?
ರಾತ್ರಿ ಸುಮಾರು 11:19ರ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವಿಮಾನ ನಿಲ್ದಾಣದ ಭದ್ರತಾ ಗೋಡೆಯನ್ನು ಜಿಗಿದು ನೇರವಾಗಿ ವಿಮಾನಗಳು ಸಂಚರಿಸುವ ರನ್‌ವೇಗೆ ನುಗ್ಗಿದ್ದಾನೆ. ಅದೇ ಸಮಯದಲ್ಲಿ ಟೇಕ್ ಆಫ್ ಆಗಲು ಸಜ್ಜಾಗುತ್ತಿದ್ದ ಫ್ರಾಂಟಿಯರ್ ಫ್ಲೈಟ್ 4345 (Frontier Flight 4345) ವಿಮಾನವು ಸುಮಾರು 149 mph ವೇಗದಲ್ಲಿ ಚಲಿಸುತ್ತಿತ್ತು. ಈ ವೇಳೆ ವಿಮಾನವು ವ್ಯಕ್ತಿಗೆ ಬಲವಾಗಿ ಡಿಕ್ಕಿ ಹೊಡೆದಿದೆ.
Frontier hit a person walking on the runway on takeoff at Denver tonight. Frontier rejected the takeoff with and engine fire and evacuated everyone on the runway. Absolutely a nightmare scenario. pic.twitter.com/MtSYgrKYL0
— Combat Learjet (@Combat_learjet) May 9, 2026
ಇಂಜಿನ್‌ನಲ್ಲಿ ಬೆಂಕಿ, ಪ್ರಯಾಣಿಕರ ಚೀರಾಟ
ಘರ್ಷಣೆಯ ನಂತರ ವಿಮಾನದ ಇಂಜಿನ್‌ನಲ್ಲಿ ಸ್ಫೋಟದ ಶಬ್ದ ಕೇಳಿಬಂದಿದ್ದು, ಬೆಂಕಿ ಕಾಣಿಸಿಕೊಂಡಿದೆ. ವಿಮಾನದ ಒಳಗೆ ದಟ್ಟವಾದ ಹೊಗೆ ತುಂಬಿಕೊಂಡಿದ್ದರಿಂದ ಪ್ರಯಾಣಿಕರು ಭಯಭೀತರಾಗಿ ಕಿರುಚಾಡಲು ಆರಂಭಿಸಿದ್ದಾರೆ.
ಜಾನ್ ಅಂಥೆನ್ಸ್ ಎಂಬ ಪ್ರಯಾಣಿಕ ಈ ಭೀಕರ ಕ್ಷಣವನ್ನು ವಿವರಿಸುತ್ತಾ, "ಯಾವುದೋ ಬಾಂಬ್ ಸ್ಫೋಟವಾದಂತೆ ಶಬ್ದ ಕೇಳಿಸಿತು. ಇಂಜಿನ್ ಒಳಗೆ ಮನುಷ್ಯನ ಕಾಲುಗಳು ಸುತ್ತುತ್ತಿರುವುದು ಕಂಡಿತು" ಎಂದು ಹೇಳಿರುವುದು ಘಟನೆಯ ಭೀಕರತೆಯನ್ನು ಸಾರುತ್ತಿದೆ.
⚠️🇺🇸 Scènes horribles après qu'un Airbus A321neo de Frontier Airlines a percuté et tué un piéton sur la piste de l'aéroport international de Denver, forçant l'équipage à interrompre le décollage et à évacuer les passagers. pic.twitter.com/yFh2XwnWgZ
— Press TV Français (@fr_presstv) May 10, 2026
ATC ಆಡಿಯೋದಲ್ಲಿ ಸೆರೆಯಾದ ಆತಂಕಕಾರಿ ಮಾತುಗಳು
ಏರ್ ಟ್ರಾಫಿಕ್ ಕಂಟ್ರೋಲ್ (ATC) ಆಡಿಯೋ ಸಂಭಾಷಣೆಯಲ್ಲಿ ಪೈಲಟ್ ಆತಂಕದಿಂದ ಮಾತನಾಡುತ್ತಾ, "ನಾವು ಯಾರೋ ಒಬ್ಬರಿಗೆ ಡಿಕ್ಕಿ ಹೊಡೆದಿದ್ದೇವೆ, ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ" ಎಂದು ಮಾಹಿತಿ ನೀಡಿದ್ದಾನೆ. ನಂತರ ಸ್ಥಳಕ್ಕೆ ಬಂದ ವಿಮಾನ ನಿಲ್ದಾಣದ ಸಿಬ್ಬಂದಿ, "ರನ್‌ವೇ ಮೇಲೆ ಮನುಷ್ಯನ ದೇಹದ ಭಾಗಗಳು ಸಿಕ್ಕಿವೆ" ಎಂದು ದೃಢಪಡಿಸಿದ್ದಾರೆ.
ತನಿಖೆ ಆರಂಭ
ಈ ಘಟನೆಯ ನಂತರ ಫ್ರಾಂಟಿಯರ್ ಏರ್ಲೈನ್ಸ್ ಪ್ರಕಟಣೆ ಹೊರಡಿಸಿದ್ದು, ವಿಮಾನ ನಿಲ್ದಾಣ ಮತ್ತು ಭದ್ರತಾ ಸಂಸ್ಥೆಗಳ ಜೊತೆಗೂಡಿ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದೆ. ಭದ್ರತಾ ಬೇಲಿಯನ್ನು ದಾಟಿ ಆ ವ್ಯಕ್ತಿ ಒಳಗೆ ಹೇಗೆ ಬಂದ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಈ ಘಟನೆಯಿಂದಾಗಿ ವಿಮಾನದಲ್ಲಿದ್ದ ಪ್ರಯಾಣಿಕರು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ.

