ಹಾಂಗ್‌ಕಾಂಗ್‌ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅನಾಹುತ; 44 ಮಂದಿ ಸಾವು
x
ಹಾಂಗ್‌ಕಾಂಗ್‌ನಲ್ಲಿ ಬಹುಮಹಡಿ ಕಟ್ಟಡಗಳಿಗೆ ಬೆಂಕಿ ವ್ಯಾಪಿಸಿರುವುದು.

ಹಾಂಗ್‌ಕಾಂಗ್‌ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅನಾಹುತ; 44 ಮಂದಿ ಸಾವು

ಬಹುಮಹಡಿ ಕಟ್ಟಡಗಳನ್ನು ಒಳಗೊಂಡಿರುವ ಹಾಂಗ್‌ಕಾಂಗ್‌ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಅಗ್ನಿ ಅವಘಡವಾಗಿದೆ. ಘಟನೆಯಲ್ಲಿ 44 ಮಂದಿ ಮೃತಪಟ್ಟಿದ್ದು, 279 ಮಂದಿ ನಾಪತ್ತೆಯಾಗಿದ್ದಾರೆ ಎಂದು ಹಾಂಗ್‌ಕಾಂಗ್‌ ವಿಶೇಷ ಆಡಳಿತ ಪ್ರಾಂತ್ಯದ (HKSAR) ಮುಖ್ಯ ಕಾರ್ಯನಿರ್ವಾಹಕ ಜಾನ್ ಲೀ ಹೇಳಿದ್ದಾರೆ.

ಹಾಂಗ್‌ಕಾಂಗ್‌ನ ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಈವರೆಗೆ 44 ಜನರು ಮೃತಪಟ್ಟಿದ್ದು, 279 ಮಂದಿ ಕಾಣೆಯಾಗಿದ್ದಾರೆ.

ಇಲ್ಲಿನ ವಾಂಗ್‌ ಫುಕ್ ಕೋರ್ಟ್‌ನಲ್ಲಿ ಬುಧವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತ್ತು. ಕಟ್ಟಡದ ಲಿಫ್ಟ್ ಲಾಬಿಗಳ ಕಿಟಕಿಗಳಿಗೆ ಪಾಲಿ ಯುರೇಥೇನ್ ಫೋಮ್ ಬಳಸಿದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿ ಅಕ್ಕಪಕ್ಕದ ಕಟ್ಟಡಗಳಿಗೂ ಆವರಿಸಿ, ದೊಡ್ಡ ಅನಾಹುತಕ್ಕೆ ಕಾರಣವಾಗಿದೆ.

ಬಹುಮಹಡಿ ಕಟ್ಟಡಗಳಲ್ಲಿ ಬೆಂಕಿ ಅನಾಹುತಕ್ಕೆ ಸಂಬಂಧಿಸಿದಂತೆ ಹಾಂಗ್‌ಕಾಂಗ್‌ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ಗುರುವಾರ ಸರ್ಕಾರಿ ಮಾಧ್ಯಮ ಶಿಂಹುವಾ ವರದಿ ಮಾಡಿದೆ.

ಬಹುಮಹಡಿ ಕಟ್ಟಡಗಳನ್ನು ಒಳಗೊಂಡಿರುವ ಹಾಂಗ್‌ಕಾಂಗ್‌ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಅಗ್ನಿ ಅವಘಡವಾಗಿದೆ. ಘಟನೆಯಲ್ಲಿ 44 ಮಂದಿ ಮೃತಪಟ್ಟಿದ್ದು, 279 ಮಂದಿ ನಾಪತ್ತೆಯಾಗಿದ್ದಾರೆ ಎಂದು ಹಾಂಗ್‌ಕಾಂಗ್‌ ವಿಶೇಷ ಆಡಳಿತ ಪ್ರಾಂತ್ಯದ (HKSAR) ಮುಖ್ಯ ಕಾರ್ಯನಿರ್ವಾಹಕ ಜಾನ್ ಲೀ ಹೇಳಿದ್ದಾರೆ.

ಕಟ್ಟಡಗಳಲ್ಲಿ ಅಗ್ನಿನಿರೋಧಕ ಜಾಲ, ಜಲನಿರೋಧಕ ಕ್ಯಾನ್ವೆಸ್ ಅಗತ್ಯಕ್ಕೆ ಅನುಗುಣವಾಗಿ ಇರಲಿಲ್ಲ. ಕಟ್ಟಡ ನವೀಕರಣ ಸಂದರ್ಭದಲ್ಲಿ ಬಳಸಿದ ಪಾಲಿ ಯುರೇಥೇನ್‌ ಇತ್ಯಾದಿ ವಸ್ತುಗಳನ್ನು ಕಟ್ಟಡ ನಿರ್ವಾಹಕರು ಅಲ್ಲಿಯೇ ಬಿಟ್ಟಿದ್ದರಿಂದ ಬೆಂಕಿ ಕೆನ್ನಾಲಿಗೆ ವ್ಯಾಪಿಸಿದೆ. ಈ ವಸ್ತುಗಳನ್ನು ಬಳಸಿದ್ದ ನಿರ್ಮಾಣ ಕಂಪನಿಯ ಇಬ್ಬರು ನಿರ್ದೇಶಕರು ಮತ್ತು ಒಬ್ಬ ಯೋಜನಾ ಸಲಹೆಗಾರರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಅಗ್ನಿ ಅವಘಡಕ್ಕೆ ಕಳವಳ ವ್ಯಕ್ತಪಡಿಸಿದ್ದು, ಅಗ್ನಿ ನಂದಿಸುವ ಕಾರ್ಯಾಚರಣೆಯನ್ನು ತ್ವರಿತವಾಗಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಕ್ಷಣಾ ಕಾರ್ಯ ಹಾಗೂ ಸಾವುನೋವುಗಳ ತಕ್ಷಣ ವರದಿ ನೀಡುವಂತೆ ಹಾಂಗ್‌ಕಾಂಗ್‌ ವಿಶೇಷ ಆಡಳಿತ ಪ್ರಾಂತ್ಯದ ಮುಖ್ಯ ಕಾರ್ಯನಿರ್ವಾಹಕ ಜಾನ್ ಲೀ ಅವರಿಗೆ ಸೂಚಿಸಿದ್ದಾರೆ.

Read More
Next Story