ಶ್ರೀಲಂಕಾದಲ್ಲಿ ಮತ್ತೆ ಎಲ್‌ಟಿಟಿಇ ಸಂಘಟಿಸಲು ವಿದೇಶಗಳಲ್ಲಿರುವ ಮಾಜಿ ಹುಲಿಗಳ  ಶತಪ್ರಯತ್ನ
x
ಎಲ್‌ಟಿಟಿಐ ಹೋರಾಟಗಾರರ ಸಾಂಧರ್ಭಿಕ ಚಿತ್ರ.

ಶ್ರೀಲಂಕಾದಲ್ಲಿ ಮತ್ತೆ ಎಲ್‌ಟಿಟಿಇ ಸಂಘಟಿಸಲು ವಿದೇಶಗಳಲ್ಲಿರುವ ಮಾಜಿ 'ಹುಲಿ'ಗಳ ಶತಪ್ರಯತ್ನ


ಬಹುತೇಕ ನಿರ್ಮೂಲನೆಯಾಗಿರುವ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಉಗ್ರ ಸಂಘಟನೆಯನ್ನು ಮತ್ತೆ ಕಟ್ಟಲು ಈ ಸಂಘಟನೆಯ ಮಾಜಿ ಸದಸ್ಯರು ಶತ ಪ್ರಯತ್ನ ಮಾಡುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ. ಶ್ರೀಲಂಕಾದಲ್ಲಿ ಈ ಹಿಂದೆ ಶರಣಾಗಿರುವ ಎಲ್‌ಟಿಟಿಐ ಗೆರಿಲ್ಲಾ ಹೋರಾಟಗಾರ ಆರ್ಥಿಕ ಸಂಕಷ್ಟಗಳನ್ನೇ ದಾಳವಾಗಿ ಬಳಸಿಕೊಂಡು ಮತ್ತೆ ಸಂಘಟನೆ ಕಟ್ಟುವ ಯೋಜನೆ ಅವರದ್ದಾಗಿದೆ. ಈ ನಾಯಕರೆಲ್ಲವೂ ಲಂಕಾದಿಂದ ಪಲಾಯನ ಮಾಡಿ ವಿದೇಶಗಳಲ್ಲಿ ನೆಲೆಯಾಗಿದ್ದು ಅಲ್ಲಿಂದಲೇ ಕಾರ್ಯಾಚರಣೆ ಆರಂಸಿದ್ದಾರೆ ಎಂಬುದಾಗಿ ಜಾಫ್ನಾ ಮೂಲದ ಪತ್ರಿಕೆಯೊಂದು ವರದಿ ಮಾಡಿದೆ.

ಎಲ್‌ಟಿಟಿಇಯ ವಾಯುದಳದ ಮಾಜಿ ಪೈಲಟ್ ಮತ್ತು ಈಗ ಫ್ರೆಂಚ್ ಪ್ರಜೆಯಾಗಿರುವ ಶಿವರಸ ಪಿರುಂತಪನ್ ಮತ್ತು ಎಲ್‌ಟಿಟಿಇ ಗುಪ್ತಚರ ವಿಭಾಗದಲ್ಲಿದ್ದ ಪುಕಲೆಂತಿ ಮಾಸ್ಟರ್ ಈ ರಹಸ್ಯ ಕಾರ್ಯಾಚರಣೆಯ ʼಮಾಸ್ಟರ್ ಮೈಂಡ್‌ಗಳುʼ ಎಂಬುದಾಗಿ ʼಜಾಫ್ನಾ ಮಾನಿಟರ್ ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ.

ಈ ಇಬ್ಬರು ಮಾಜಿ ನಾಯಕರು "ವಿದೇಶದಿಂದ ಸಂಪರ್ಕ ಸಾಧಿಸುತ್ತಿದ್ದು ಲಂಕಾದಲ್ಲಿ ಉಳಿದುಕೊಂಡಿರುವ ಎಲ್‌ಟಿಟಿಇ ಮಾಜಿ ಸದಸ್ಯರನ್ನು ಒಟ್ಟುಗೂಡಿಸುತ್ತಿದ್ದಾರೆ ಎಂದು ವರದಿಯಲ್ಲಿ ಬರೆಯಲಾಗಿದೆ. ಈ ಹಿರಿಯ ನಾಯಕರು ಬೀಸುವ ದೊಡ್ಡ ಬಲೆಗೆ ಆರ್ಥಿಕ ಸಂಕಷ್ಟದಲ್ಲಿರುವ ಎಲ್‌ಟಿಟಿಇ ಮಾಜಿ ಸದಸ್ಯರು ಸುಲಭವಾಗಿ ಬೀಳುತ್ತಿದ್ದಾರೆ ಎಂದು ಜಾಫ್ನಾ ಮಾನಿಟರ್‌ ತನ್ನ ವರದಿಯಲ್ಲಿ ಹೇಳಿದೆ.

ಗತಕಾಲವನ್ನು ನೆನಪಿಸಿಕೊಳ್ಳುವುದು

ತಮಿಳು ಟೈಗರ್ಸ್ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಅವರನ್ನು ತಮಿಳುನಾಡು ಸೇನೆ 2009ರಲ್ಲಿ ಹತ್ಯೆ ಮಾಡುವ ನಂತರ ಸುಮಾರು 12,000 ಎಲ್‌ಟಿಟಿಇ ಗೆರಿಲ್ಲಾ ಹೋರಾಟಗಾರರು ಶ್ರೀಲಂಕಾ ಮಿಲಿಟರಿಗೆ ಶರಣಾಗಿದ್ದರು. ಇನ್ನೂ ನೂರಾರು ಹೋರಾಟಗಾರರು ದ್ವೀಪ ರಾಷ್ಟ್ರದಿಂದ ತಪ್ಪಿಸಿಕೊಂಡು ಹೋಗಿದ್ದರು. ಕೆಲವರು ಸಮುದ್ರದ ಮಾರ್ಗದ ಮೂಲಕ ಹಾಗೂ ಇತರರು ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ಬೇರೆ ಬೇರೆ ರಾಷ್ಟ್ರ ಸೇರಿಕೊಂಡಿದ್ದರು. ಇನ್ನೂ ಕೆಲವರು ಸಂಬಂಧಿಕರು ಮತ್ತು ತಮಿಳು ವಲಸೆಗಾರರ ಸಹಾಯದಿಂದ ಅಲ್ಲಿಯೇ ಹೊಸದಾಗಿ ಜೀವನ ಪ್ರಾರಂಭಿಸಿದ್ದರು.

ಅಚ್ಚುತನ್ ಎಂದೂ ಹೆಸರಿರುವ ಪಿರುಂತಪನ್ ಏರೋಸ್ಪೇಸ್ ಎಂಜಿನಿಯರಿಂಗ್ ಅಧ್ಯಯನ ಮಾಡಿದವರು. ಯುದ್ಧದ ಸಮಯದಲ್ಲಿ ಎಲ್‌ಟಿಟಿಇ ಆತ್ಮಹತ್ಯಾ ದಳಕ್ಕೆ ವಿಮಾನ ತರಬೇತಿ ನೀಡಿದವರು ಅವರೇ. 2001ರಿಂದ ಎಲ್‌ಟಿಟಿಇ ವಾಯು ವಿಭಾಗದ ಮುಖ್ಯಸ್ಥರಾಗಿದ್ದರು.

ಕಾರ್ಯವಿಧಾನ ಹೀಗಿದೆ

ಜಾಫ್ನಾ ಮಾನಿಟರ್ ಪತ್ರಿಕೆ ಪ್ರಕಾರ, ಪಿರುಂತಪನ್ ತಮಿಳುನಾಡಿನಲ್ಲಿರುವ ಎಲ್‌ಟಿಟಿಈ ಮಾಜಿ ಮಹಿಳಾ ಹೋರಾಟಗಾರ್ತಿಯೊಬ್ಬರಿಗೆ ದೊಡ್ಡ ಮೊತ್ತದ ಹಣ ವರ್ಗಾಯಿಸುತ್ತಿದ್ದಾರೆ. ಆ ನಾಯಕಿ ಶರಣಾಗಿರುವ ಗೆರಿಲ್ಲಾಗಳೊಂದಿಗೆ ಸಂಪರ್ಕ ಸಾಧಿಸಿ ಸಂಘಟನೆ ಮಾಡುತ್ತಿದ್ದಾಳೆ. ಪ್ರಮುಖವಾಗಿ ಅವರೆಲ್ಲರಿಗೂ ಆಕೆ ಹಣ ವಿತರಣೆ ಮಾಡುತ್ತಿದ್ದಾಳೆ. ಬಡತನದ ಬೇಗೆಯಲ್ಲಿರುವ ಅವರಿಗೆ ಈ ಮೊತ್ತ ಆಸರೆಯಾಗುವ ಸೂಚನೆ ಕಂಡ ತಕ್ಷಣ ಎಲ್‌ಟಿಟಿಇ ಸಂಘಟಿಸುವ ಆಸೆ ಚಿಗುರೊಡೆಸುತ್ತಾಳೆ.

‌ಎಲ್‌ಟಿಟಿಯ ಸೋಥಿಯಾ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದ ಬಳಿಕ ಶರಣಾಗತಿಯಾಗಿ ಪುನರ್ವಸತಿ ಕಾರ್ಯಕ್ರಮಕ್ಕೆ ಒಳಗಾಗಿರುವ ಪ್ರಸ್ತುತ ಜಾಫ್ನಾದ ಹೊರವಲಯದಲ್ಲಿ ವಾಸಿಸುತ್ತಿರುವ ತೆನ್ಮೋಳಿ (ಹೆಸರು ಹಾಗೆಂದು ಭಾವಿಸಲಾಗಿದೆ) ನಾಯಕಿಯ ಆಮಿಷಕ್ಕೆ ಒಳಗಾದವರಲ್ಲಿ ಒಬ್ಬರು. ತನ್ಮೋಳಿ ತನ್ನ ಮಕ್ಕಳನ್ನು ಬೆಳೆಸಲು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾಳೆ. 2023ರ ಆರಂಭದಲ್ಲಿ, ತೆನ್ಮೋಳಿಗೆ ರೆಜಿಮೆಂಟ್‌ನಲ್ಲಿ ಹಿರಿಯ ಕಮಾಂಡರ್ ಒಬ್ಬಾಕೆಯಿಂದ ಕರೆ ಬಂದಿತ್ತು. ಬಡತನದಿಂದ ಹೊರಬರಲು ಮಾಜಿ ಎಲ್‌ಟಿಟಿಐ ಹೋರಾಟಗಾರರಿಗೆ ಸಹಾಯ ಮಾಡುವುದಾಗಿ ಆಕೆ ತನ್ಮೋಳಿಗೆ ಹೇಳಿದ್ದಳು. ಅದಕ್ಕಾಗಿ ಹಣ ಕೊಟ್ಟಿದ್ದಳು ಎಂದು ಪತ್ರಿಕೆಯಲ್ಲಿ ಬರೆಯಲಾಗಿದೆ.

ಹಣ ತಲುಪಿಸಲು ತೆನ್ಮೋಳಿ ಒಪ್ಪಿದ್ದಳು. ಅವಳ ಬ್ಯಾಂಕ್ ಖಾತೆಗೆ ಹಣ ಬಂದಿತ್ತು. ತನ್ನ ಹಳ್ಳಿ ಮತ್ತು ಹತ್ತಿರದ ಪ್ರದೇಶಗಳಲ್ಲಿನ ಇತರ ಮಾಜಿ ಹೋರಾಟಗಾರರೊಂದಿಗೆ ಸಂಪರ್ಕ ಸಾಧಿಸಿದ್ದ ತನ್ಮೋಳಿ ಸುಮಾರು 30 ಜನರ ಜಾಲ ನಿರ್ಮಿಸಿದ್ದಳು. ಬಡತನದ ನಡುವೆ ಜೀವನ ನಡೆಸುತ್ತಿದ್ದ ಅವರೆಲ್ಲರಿಗೂ ದುಡ್ಡು ಹಂಚಿದ್ದಳು

ರಾಜಕೀಯಕ್ಕೆ ಪ್ರೇರಣೆ

ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಗೆ ಮೊದಲು ತೆನ್ಮೋಳಿ ಮತ್ತು ಇತರರಿಗೆ ತಮಿಳು ಅಭ್ಯರ್ಥಿಯ ಪರವಾಗಿ ರ್ಯಾಲಿ ಮಾಡಲು ಹಣ ಕೊಟ್ಟ ನಾಯಕಿ ಆದೇಶಿಸಿದ್ದಳು. ಈ ಹಂತದಲ್ಲಿ ತನ್ಮೋಳಿಗೆ ಈ ನಾಯಕರ ಉದ್ದೇಶ ಗೊತ್ತಾಗಿತ್ತು. ಬಳಿಕ ಆಕೆ ಸಂಪರ್ಕ ಕಡಿದುಕೊಂಡಿದ್ದಳು.

ಒಂದು ಕಾಲದಲ್ಲಿ ಮಾಲತಿ ರೆಜಿಮೆಂಟ್‌ನಲ್ಲಿದ್ದ ಕಾಯಲ್ವಿಜಿ (ಹೆಸರು ಎಂದು ಭಾವಿಸಲಾಗಿದೆ) ಅವರನ್ನು ಎಲ್‌ಟಿಟಿಐ ಹೋರಾಟಗಾರರರ ವಿಭಾಗದ ಮಾಜಿ ನಾಯಕರೊಬ್ಬರು ದೂರವಾಣಿಯಲ್ಲಿ ಸಂಪರ್ಕಿಸಿ ಹಣದ ಆಮಿಷ ಒಡ್ಡಿದ್ದಳು. ಕಾಯಲ್ವಿಜಿ ಒಲ್ಲದ ಮನಸ್ಸಿನಿಂದ ಅದನ್ನು ಒಪ್ಪಿಕೊಂಡಿದ್ದಳು. ಶಾಂತ ಜೀವನ ನಡೆಸುತ್ತಿರುವ ಮಾಜಿ ಎಲ್‌ಟಿಟಿಐ ಹೋರಾಟಗಾರರ ಜಾಲ ನಿರ್ಮಿಸಲು ಆಕೆಗೆ ಆದೇಶಿಸಲಾಗಿತ್ತು.

ಚುನಾವಣೆ ಸಮಯದಲ್ಲಿ ತಮಿಳು ಅಧ್ಯಕ್ಷೀಯ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೇಳಿಕೊಂಡಾಗ ಕಾಯಲ್ವಿಝಿ ನಿರಾಕರಿಸಿದ್ದಳು. ಈ ವೇಳೆ ಹಣ ವಾಪಸ್‌ ಕೊಡುವಂತೆ ಒತ್ತಾಯ ಶುರುವಾಗಿತ್ತು. ಆಕೆಯೂ ಈಗ ಸಂಪರ್ಕ ಕಡಿತ ಮಾಡಿಕೊಂಡಿದ್ದಾಳೆ.

ಗುಪ್ತ ಕಾರ್ಯಸೂಚಿ

ಶ್ರೀಲಂಕಾದಲ್ಲಿ ಅಶಾಂತಿ ಪ್ರಚೋದಿಸುವ ಉದ್ದೇಶ ಹೊಂದಿರುವ ಎಲ್‌ಟಿಟಿಇ ಪರ ವಲಸಿಗ ಶಕ್ತಿಗಳ ಗುಪ್ತ ಕಾರ್ಯಸೂಚಿಯನ್ನು ಮುನ್ನಡೆಸಲು ಜಾಲವೊಂದನ್ನು ಸಕ್ರಿಯಗೊಳಿಸಲಾಗುತ್ತಿದೆ ಎಂದು ಕಾಯಲ್ವಿಝಿ ಜಾಫ್ನಾ ಮಾನಿಟರ್‌ಗೆ ತಿಳಿಸಿದ್ದಾಳೆ. ಅಪಾಯವನ್ನು ಅರಿತೇ ಹಣ ಕೊಟ್ಟವರ ಜತೆಗಿನ ಎಲ್ಲ ಸಂಪರ್ಕ ಕಡಿತಗೊಳಿಸಿದ್ದೇನೆ ಎಂದು ಆಕೆ ಹೇಳಿದ್ದಾಳೆ.

2009ರಲ್ಲಿ ಶರಣಾದ ಮತ್ತೊಬ್ಬ ಮಾಜಿ ಎಲ್ಟಿಟಿಇ ಗೆರಿಲ್ಲಾ ತುಯಾವನ್ (ಹೆಸರು ಭಾವಿಸಲಾಗಿದೆ.),ಕೂಡ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ. ಪ್ರಸ್ತುತ ಚೆನ್ನೈನಲ್ಲಿ ವಾಸಿಸುತ್ತಿರುವ ಸೋಥಿಯಾ ರೆಜಿಮೆಂಟ್‌ನ ಮಾಜಿ ಆಡಳಿತ ಮುಖ್ಯಸ್ಥೆ ಜಾನಕಿ ಕೂಡ ತಮ್ಮನ್ನೂ ಸಂಪರ್ಕಿಸಿದ್ದಾರೆ ಎಂದು ಹೇಳಿದ್ದಾರೆ.

ಜಾನಕಿ ರಚಿಸಿದ ವಾಟ್ಸಾಪ್ ಗುಂಪಿನಲ್ಲಿದ್ದ ಪಿರುಂತಪನ್ ಅವರ ಫ್ರೆಂಚ್ ದೂರವಾಣಿ ಸಂಖ್ಯೆ ಪತ್ತೆಹಚ್ಚಿದ್ದ ತುಯಾವನ್, ಅವರೆಲ್ಲರೂ ಎಲ್ಟಿಟಿಇಯನ್ನು ಮತ್ತೆ ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ವಾಟ್ಸ್‌ಆಪ್‌ ಗುಂಪು ರಚಿಸಿದ್ದರು ಎಂದು ಹೇಳಲಾಗಿದೆ. ಅವರಿಗೆ ಮಾಜಿ ಹೋರಾಟಗಾರರಿಗೆ ಸಹಾಯ ಮಾಡುವ ಉದ್ದೇಶ ಇರಲಿಲ್ಲ ಎಂದು ನಾನು ಅರಿತುಕೊಂಡೆ. ದೂರಗಾಮಿ ಕಾರ್ಯಸೂಚಿ ಇರುವುದು ಗೊತ್ತಾಯಿತು. ಇದು ಅಪಾಯಕಾರಿ ಎಂದು ತುವಾಯನ್‌ ಜಾಫ್ನಾ ಮಾನಿಟರ್‌ಗೆ ಹೇಳಿಕೆ ನೀಡಿದ್ದಾರೆ.

ಮಾಹಿತಿ ಅಸ್ಪಷ್ಟ

ಯದ್ಧದಿಂದ ತಪ್ಪಿಸಿಕೊಂಡು ಈಗ ವಿದೇಶದಲ್ಲಿ ವಾಸಿಸುತ್ತಿರುವ ಪ್ರಭಾವಿ ಎಲ್‌ಟಿಟಿಇ ವ್ಯಕ್ತಿಗಳು ಮಾಜಿ ಹೋರಾಟಗಾರರ ಸುಸಂಘಟಿತ ಜಾಲ ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ಶರಣಾದ ಎಷ್ಟು ಗೆರಿಲ್ಲಾಗಳನ್ನು ಸಂಪರ್ಕಿಸಲಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ.

ಪ್ರಭಾಕರನ್ ಇಲ್ಲದೆ ಎಲ್‌ಟಿಟಿಯನ್ನು ಮರು ಸಂಘಟಿಸಲು ನಿವಾಗಿಯೂ ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ. ಆದರೆ ಉಳಿದಿರುವ ಸಂಪತ್ತು ಮತ್ತು ಹೊಸ ವಲಸಿಗರ ಹಣದಿಂದ ಲಾಭ ಪಡೆಯುತ್ತಿರುವ ಈ ವ್ಯಕ್ತಿಗಳು ಶ್ರೀಲಂಕಾದಲ್ಲಿ ಅಶಾಂತಿ ಉಂಟುಮಾಡಲು ಬಯಸುತ್ತಾರೆ" ಎಂದು ತುಯಾವನ್ ಬೇಸರ ವ್ಯಕ್ತಪಡಿಸಿದ್ದಾರೆ.

ಸುಖ ಜೀವನದ ಯೋಜನೆ

ಶರಣಾಗತಿ ನಂತರ ಹೆಚ್ಚಿನ ಮಾಜಿ ಎಲ್‌ಟಿಟಿಇ ಹೋರಾಟಗಾರರು ಶಾಂತ ಜೀವನ ಬಯಸಿದ್ದಾರೆ. ಕಡು ಬಡತನ ಮತ್ತು ಆರ್ಥಿಕ ಅವಕಾಶಗಳ ಕೊರತೆಯ ನಡುವೆಯೂ ಸಂಘರ್ಷ ರಹಿತ ಜೀವನ ಇರಬೇಕು ಎಂದು ಅಂದುಕೊಂಡಿದ್ದಾರೆ.

ಎಲ್‌ಟಿಟಿಐ ಪರ ವಲಸಿಗರ ಒಂದು ವಿಭಾಗವು ತನ್ನ ಕಾರ್ಯಸೂಚಿಯನ್ನು ಮುಂದುವರಿಸಲು ಮಾಜಿ ಗೆರಿಲ್ಲಾಗಳ ದೌರ್ಬಲ್ಯವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ತಮಿಳು ಮೂಲಗಳು ತಿಳಿಸಿವೆ.

ಜಾಫ್ನಾ ಮಾನಿಟರ್ ಪ್ರಕಾರ, ಈ ರಹಸ್ಯ ಕಾರ್ಯಾಚರಣೆಗಳ ಕೇಂದ್ರಬಿಂದುವಾಗಿರುವ ಒಬ್ಬಾಕೆ ಜಾನಕಿ. ಈ ಹಿಂದೆ ಸೋಥಿಯಾ ರೆಜಿಮೆಂಟ್‌ ಅಧಿಕಾರಿಯಾಗಿದ್ದವಳು . ಈಗ ಚೆನ್ನೈನಲ್ಲಿ ವಾಸಿಸುತ್ತಿರುವ ಆಕೆ ಈ ಹಿಂದೆ ಪ್ರಭಾಕರನ್ ಜತೆಗಿದ್ದ ಅತ್ಯಂತ ವಿಶ್ವಾಸಾರ್ಹ ಮಿಲಿಟರಿ ಸಲಹೆಗಾರರಲ್ಲಿ ಒಬ್ಬರನ್ನು ವಿವಾಹವಾಗಿದ್ದಾಳೆ.

ಮಾರ್ಚ್ 2009ರಲ್ಲಿ ಯುದ್ಧವು ಕೊನೆಗೊಳ್ಳುತ್ತಿದ್ದಂತೆ, ಜಾನಕಿ ತನ್ನ ಮತ್ತು ಪತಿಯ ಪ್ರಭಾವವನ್ನು ಬಳಸಿಕೊಂಡು ಶ್ರೀಲಂಕಾದಿಂದ ತಪ್ಪಿಸಿಕೊಂಡಿದ್ದಳು . ಆಕೆ ಸೇನೆ ಮುಂದೆ ಶರಣಾಗಿದ್ದರೂ ಆರೇ ತಿಂಗಳಲ್ಲಿ ಜೈಲು ವಾಸ ಮುಕ್ತಾಯವಾಗಿತ್ತು.ಅಲ್ಲಿಂದ ಚೆನ್ನೈ ತಲುಪಿದ್ದಳು.

ಅವರ ಪ್ರಾಥಮಿಕ ಆದಾಯವು ಕೆನಡಾದ ಸಂಬಂಧಿಕರ ಮೂಲಕ ಬರುತ್ತಿದೆ. ಜಾನಕಿ ಲಾಜಿಸ್ಟಿಕ್ಸ್ ಸಂಸ್ಥೆ ಮತ್ತು ತನ್ನದೇ ಆದ ವ್ಯವಹಾರ ಉದ್ಯಮಗಳನ್ನು ಸಹ ಹೊಂದಿದ್ದಾಳೆ. ತನ್ನ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿದ ಎಲ್‌ಟಿಟಿಇ ಬಗ್ಗೆ ತನ್ನ ಗೀಳು ಮುಂದುವರಿಸಿದ್ದಾಳೆ ಎಂದು ಜಾಫ್ನಾ ಮಾನಿಟರ್‌ ವರದಿ ಮಾಡಿದೆ.

ವಲಸಿಗರಿಗೆ ಬಲಿ ಬೀಳಬಾರದು

ಮಾಜಿ ಹೋರಾಟಗಾರರೊಬ್ಬರು ಮಾತನಾಡಿ "ನಾವು ಹೋರಾಡಿದ್ದೇವೆ. ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ನಮಗೆ ಈಗ ಬೇಕಾಗಿರುವುದು ಶಾಂತಿ ಮಾತ್ರ. ಈ ವಲಸಿಗರು ಮಾಡುವ ಯೋಜನೆಗಳಿಗೆ ನಾವು ಅಥವಾ ನಮ್ಮ ಮಕ್ಕಳು ಏಕೆ ಬೆಲೆ ತೆರಬೇಕು ಎಂದು ಪ್ರಶ್ನಿಸಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ, ಜಾನಕಿಯನ್ನು ಶ್ರೀಲಂಕಾದ ಕಿಲಿನೊಚ್ಚಿಯಲ್ಲಿ ವಾಸಿಸುತ್ತಿರುವ ಆಕೆ ತಾಯಿ ಮತ್ತು ಸಹೋದರಿ ಹತ್ತಿರ ಬಿಟ್ಟುಕೊಳ್ಳುತ್ತಿಲ್ಲ. ಅದು ಅಪಾಯ ಎಂಬುದೇ ಅವ್ರ ಅಭಿಪ್ರಾಯ.

ಮಾಜಿ ಎಲ್ಟಿಟಿಇ ಹೋರಾಟಗಾರರ ಜಾಲ ನಿರ್ಮಿಸಲು ಮತ್ತು ವಿಸ್ತರಿಸಲು ಪಿರುಂತಪನ್ ಜಾನಕಿಗೆ ದೊಡ್ಡ ಮೊತ್ತದ ಹಣ ನೀಡುತ್ತಿದ್ದಾನೆ ಎಂದು ಪತ್ರಿಕೆಯಲ್ಲಿ ಬರೆಯಲಾಗಿದೆ.

ಪಿರುಂತಪನ್ ಗೆ ರೆಡ್ ಕಾರ್ನರ್‌ ನೋಟಿಸ್

2010ರಲ್ಲಿ ಪತ್ತೆಯಾದ ಎಲ್ಟಿಟಿಇ ದಾಖಲೆಗಳ ಆಧಾರದ ಮೇಲೆ ಇಂಟರ್ಪೋಲ್ ಪಿರುಂತಪನನ್ನು ಬಂಧಿಸುವಂತೆ ರೆಡ್ ಕಾರ್ನರ್‌ ನೋಟಿಸ್ ಹೊರಡಿಸಿತ್ತು. ಆದಾಗ್ಯೂ ಆ ವ್ಯಕ್ತಿ ತನ್ನ ಚಟುವಟಿಕೆಗಳನ್ನು ಅಡೆತಡೆಯಿಲ್ಲದೆ ಮುಂದುವರಿಸುತ್ತಿದ್ದಾನೆ. ಫ್ರಾನ್ಸ್‌ನಲ್ಲಿ ಹಲವಾರು ವ್ಯವಹಾರಗಳನ್ನು ನಡೆಸುತ್ತಿದ್ದಾನೆ ಎಂದು ಪತ್ರಿಕೆಯಲ್ಲಿ ಬರೆಯಲಾಗಿದೆ.

2014 ರಲ್ಲಿ ದ್ವೀಪದಲ್ಲಿ ಶ್ರೀಲಂಕಾ ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟ ಮೂವರು ಮಾಜಿ ಎಲ್‌ಟಿಟಿಈ ಗೆರಿಲ್ಲಾಗಳು ಪಿರುಂತಪನ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಜಾಫ್ನಾ ಮಾನಿಟರ್ ಹೇಳಿದೆ.

ಶ್ರೀಲಂಕಾ ಮೂಲದ ಲಕ್ಷಾಂತರ ತಮಿಳರು ಈಗ ಪಾಶ್ಚಿಮಾತ್ಯ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ವಲಸಿಗರ ಒಂದು ವಿಭಾಗವು ಪ್ರಭಾಕರನ್ ಅವರ ಸಾವನ್ನು ಸ್ವೀಕರಿಸಲು ನಿರಾಕರಿಸಿದೆ ಮತ್ತು ಶ್ರೀಲಂಕಾದ ವಿಭಜನೆಯನ್ನು ಸಮರ್ಥಿಸುತ್ತಲೇ ಇದೆ.

Read More
Next Story