Donald Trump : ವಿದೇಶಗಳಿಗೆ ನೀಡುತ್ತಿದ್ದ ಧನ ಸಹಾಯಗಳನ್ನು ನಿಲ್ಲಿಸಿದ ಟ್ರಂಪ್, ಉಕ್ರೇನ್‌ಗೆ ಆತಂಕ
Donald Trump : ಟ್ರಂಪ್ ಅಧಿಕಾರ ವಹಿಸಿಕೊಂಡ ಕೆಲ ದಿನಗಳಲ್ಲಿಯೇ ಅಮೆರಿಕದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ನೂತನ ಕಾಯಿದೆ ಜಾರಿಗೆ ತರುವ ಜತೆಗೆ ಹಳೆ ಕಾಯಿದೆಯನ್ನು ರದ್ದು ಮಾಡಿದ್ದಾರೆ.
ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಡೊನಾಲ್ಡ್ ಟ್ರಂಪ್ ಒಂದರ ಮೇಲೊಂದರಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದೀಗ ಅವರು ವಿದೇಶಗಳಿಗೆ ನೀಡುತ್ತಿದ್ದ ಆರ್ಥಿಕ ನೆರವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಈಜಿಪ್ಟ್ ಮತ್ತು ಇಸ್ರೇಲ್ ಹೊರತುಪಡಿಸಿ ಇನ್ಯಾರಿಗೂ ಇಲ್ಲ ಎಂದಿದ್ದಾರೆ. ಇದು ಅಮೆರಿಕವನ್ನೇ ನಂಬಿ ರಷ್ಯಾ ವಿರುದ್ಧ ಯುದ್ಧಕ್ಕೆ ನಿಂತಿದ್ದ ಯುಕ್ರೇನ್‌ಗೆ ದೊಡ್ಡ ಆಘಾತವಾಗಿದೆ. ಆ ದೇಶ ಅತಂತ್ರವಾಗುವುದು ಬಹುತೇಕ ನಿಶ್ಚಿತ.
ಟ್ರಂಪ್ ಅಧಿಕಾರ ವಹಿಸಿಕೊಂಡ ಕೆಲ ದಿನಗಳಲ್ಲಿಯೇ ಅಮೆರಿಕದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ನೂತನ ಕಾಯಿದೆ ಜಾರಿಗೆ ತರುವ ಜತೆಗೆ ಹಳೆ ಕಾಯಿದೆಯನ್ನು ರದ್ದು ಮಾಡಿದ್ದಾರೆ. ಅವರುವಿಶ್ವಸಂಸ್ಥೆಗೆ ನೀಡುವ ಅನುದಾನವನ್ನು ಕಡಿತಗೊಳಿಸಿ ಸುದ್ದಿಯಾಗಿದ್ದರು. ಇದೀಗ ಇಸ್ರೇಲ್ ಮತ್ತು ಈಜಿಪ್ಟ್ ಅನ್ನು ಹೊರತುಪಡಿಸಿ ಉಕ್ರೇನ್ ಸೇರಿದಂತೆ ಎಲ್ಲಾ ವಿದೇಶಿ ನೆರವನ್ನು ಸ್ಥಗಿತಗೊಳಿಸಿದೆ ಎಂದು ತಿಳಿದು ಬಂದಿದೆ.
ಜಗತ್ತಿನ ಅತೀ ದೊಡ್ಡ ದಾನಿಯಾಗಿರುವ ಅಮೆರಿಕ, ರಷ್ಯಾ ವಿರುದ್ಧ ಸಮರ ಸಾರಿರುವ ಉಕ್ರೇನ್‌ಗೆ ಅಮೆರಿಕ ನೀಡುತ್ತಿದ್ದ ಎಲ್ಲಾ ರೀತಿಯ ವಿದೇಶಿ ನೆರವು ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದರೆ ಇಸ್ರೇಲ್ ಮತ್ತು ಈಜಿಪ್ಟ್‌ಗೆ ತುರ್ತು ಆಹಾರ ಮತ್ತು ಮಿಲಿಟರಿ ನಿಧಿಯನ್ನು ಸ್ಥಗಿತಗೊಳಿಸಿಲ್ಲ. ಹೊಸ ಆರ್ಥಿಕ ನೆರವನ್ನು ನೀಡದಂತೆ ಅಮೆರಿಕದ ರಾಜ್ಯಗಳಿಗೆ ಅಮೆರಿಕದ ವಿದೇಶಾಂಗ ಇಲಾಖೆಯಿಂದ ನಿರ್ದೇಶನ ನೀಡಲಾಗಿದೆ.ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಈ ಆದೇಶದ ಪ್ರತಿಯನ್ನು ಹೊರಡಿಸಿದ್ದಾರೆ.
ಎಚ್‌ಐವಿ ವಿರುದ್ಧದ ಹೋರಾಟಕ್ಕೆ ಹಿನ್ನಡೆ
ಮಾನವೀಯ ದೃಷ್ಟಿಯಿಂದ ಕೆಲವೊಂದು ತುರ್ತು ಹಾಗೂ ಆರೋಗ್ಯ ಸೇವೆಗಳಿಗೆ ನೀಡುವ ನೆರವನ್ನು ಮುಂದುವರಿಸಲು ಅಮೆರಿಕ ನಿರ್ಧರಿಸಿದೆ. ಆಸ್ಪತ್ರೆಗಳು, ಔಷಧಿ ಸೇರಿದಂತೆ ತುರ್ತು ಆರೋಗ್ಯ ಸೇವೆಗಳಿಗೆ ನಿರ್ದಿಷ್ಟ ವಿನಾಯಿತಿ ಕೊಡುವುದಾಗಿ ಅಮೆರಿಕ ಹೇಳಿದೆ. ಆದರೆ, ಏಡ್ಸ್ ಜಾಗೃತಿ ಹಾಗೂ ಪರಿಹಾರ ಮೊತ್ತವನ್ನು ಸಹ ತಡೆಹಿಡಿಯಲಾಗಿದೆ. ಈ ಹಿಂದೆ 2003 ರಲ್ಲಿ ಜಾರ್ಜ್ ಬುಷ್ ಅವರು ಅಧ್ಯಕ್ಷರಾಗಿದ್ದಾಗ, ಮಾನವೀಯ ದೃಷ್ಟಿಯಲ್ಲಿ ನೆರವು ನೀಡುವ ಕ್ರಮವನ್ನು ಜಾರಿಗೆ ತಂದಿದ್ದರು. ಇದೀಗ ಟ್ರಂಪ್ ಅದಕ್ಕೆ ಕೋಕ್ ನೀಡಿದ್ದಾರೆ.
ಉಕ್ರೇನ್ ಅತಂತ್ರ
2023ನೇ ಸಾಲಿನಲ್ಲಿ 60 ಶತಕೋಟಿ ಡಾಲರ್ ನೆರವನ್ನು ಅಮೆರಿಕ ಕೊಟ್ಟಿತ್ತು. ಇದು ಅಮೆರಿಕದ ಬಜೆಟ್‌ನ ಶೇ 1ರಷ್ಟು. ಬೈಡನ್ ಅಧ್ಯಕ್ಷರಾಗಿದ್ದಾಗ ಯುಕ್ರೇನ್ ನ್ಯಾಟೊ ಸದಸ್ಯತ್ವ ಕೋರಿತ್ತು. ಅದಕ್ಕೆ ನೆರೆಯ ರಷ್ಯಾ ವಿರೋಧ ವ್ಯಕ್ತಪಡಿಸಿದ್ದ ಹೊರತಾಗಿಯೂ ಅಮೆರಿಕ ಬೆಂಬಲ ಪಡೆದುಕೊಂಡಿತ್ತು. ಹೀಗಾಗಿ ರಷ್ಯಾದ ವಿರುದ್ಧ ದಾಳಿ ಮಾಡಿತ್ತು. ಆದರೆ, ಟ್ರಂಪ್ ಈ ಯುದ್ಧದ ಬಗ್ಗೆ ಒಲವು ಹೊಂದಿಲ್ಲ. ರಷ್ಯಾ ಮೇಲೆ ದಾಳಿ ಮಾಡಲು ಅಮೆರಿಕದ ಸಂಪತ್ತು ಬಳಕೆಯಾಗಬಾರದು ಎಂಬ ನಿಲುವನ್ನು ಹೊಂದಿದ್ದಾರೆ. ಹೀಗಾಗಿ ಆ ಯುಕ್ರೇನ್‌ಗೆ ನೀಡುವ ಅನುದಾನ ನಿಲ್ಲಿಸಿದ್ದಾರೆ.