Donald Trump : ಜನ್ಮಸಿದ್ಧ ಪೌರತ್ವಕ್ಕೆ ಅಂತ್ಯ ಹಾಡಿದ ಟ್ರಂಪ್, ಭಾರತೀಯರ ಮೇಲೆ ಪರಿಣಾಮ?
Donald Trump : ಆದೇಶದ ಪ್ರಕಾರ ನೀತಿಯು ಬದಲಾದರೆ, ತಾತ್ಕಾಲಿಕ ಕೆಲಸದ ವೀಸಾಗಳಲ್ಲಿ (ಎಚ್ -1 ಬಿ ವೀಸಾದಂತಹ) ಅಥವಾ ಗ್ರೀನ್ ಕಾರ್ಡ್ ಗಳಿಗಾಗಿ ಕಾಯುತ್ತಿರುವ ಭಾರತೀಯ ಪ್ರಜೆಗಳಿಗೆ ಜನಿಸಿದ ಮಕ್ಕಳು ಇನ್ನು ಮುಂದೆ ಸ್ವಯಂಚಾಲಿತವಾಗಿ ಯುಎಸ್ ಪೌರತ್ವ ಪಡೆಯುವುದಿಲ್ಲ.
ನಾಲ್ಕು ವರ್ಷಗಳ ನಂತರ ಶ್ವೇತಭವನಕ್ಕೆ ಮರಳಿದ ಅಮೆರಿಕದ 47 ನೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹಲವಾರು ಮಹತ್ವದ ಕಾರ್ಯನಿರ್ವಾಹಕ ಆದೇಶಗಳಿಗೆ ಸಹಿ ಹಾಕಿದ್ದಾರೆ. ಇದು ಯುಎಸ್‌ನಲ್ಲಿ ಜನಿಸಿದ ಮಕ್ಕಳ ಸ್ವಯಂಚಾಲಿತ ಪೌರತ್ವ ನೀಡುವ ಕಾನೂನು. ಆದರೆ, ಇದನ್ನು ವಾಪಸ್ ಪಡೆದ ಅಮೆರಿಕದಲ್ಲಿಯೇ ವಾಸ್ತವ್ಯ ಹೂಡುವ ಭಾರತದ ಅನೇಕರ ಆಸೆಗೆ ತಣ್ಣೀರು ಎರಚಲಿದೆ.
ಟ್ರಂಪ್ ಸಹಿ ಮಾಡಿದ ಕಾರ್ಯನಿರ್ವಾಹಕ ಆದೇಶವು ಅಮೆರಿಕದಲ್ಲಿ ಜನಿಸಿದ ಮಗು ಪೌರತ್ವ ಪಡೆಯಲು ಅದರ ಪೋಷಕರಲ್ಲಿ ಕನಿಷ್ಠ ಒಬ್ಬರು ಯುಎಸ್ ಪ್ರಜೆಯಾಗಿರಬೇಕು ಎಂಬ ಆದೇಶವಾಗಿದೆ. ಕಾನೂನುಬದ್ಧ ಶಾಶ್ವತ ನಿವಾಸಿ (ಗ್ರೀನ್ ಕಾರ್ಡ್ ಹೊಂದಿರುವವರು) ಅಥವಾ ಯುಎಸ್ ಮಿಲಿಟರಿಯ ಸದಸ್ಯರಾಗಿರಬೇಕು ಎಂಬುದಾಗಿ ಹೇಳಲಾಗಿದೆ.
"ಅಮೆರಿಕದಲ್ಲಿ ಜನಿಸಿದ ಅಕ್ರಮ ವಿದೇಶಿಯರ ಮಕ್ಕಳಿಗೆ ಸ್ವಯಂಚಾಲಿತ ಜನ್ಮಹಕ್ಕು ಪೌರತ್ವವನ್ನು ಫೆಡರಲ್ ಸರ್ಕಾರ ಮಾನ್ಯ ಮಾಡುವುದಿಲ್ಲ. ನಾವು ಅಕ್ರಮ ವಿದೇಶಿಯರ ಪರಿಶೀಲನೆ ಹೆಚ್ಚಿಸಲಿದ್ದೇವೆ" ಎಂದು ಟ್ರಂಪ್ ಸರ್ಕಾರದ ಅಧಿಕಾರಿಯೊಬ್ಬರು ಸೋಮವಾರ ಪ್ರಕಟಿಸಿದ್ದಾರೆ.
"ಎಲ್ಲಾ ಅಕ್ರಮ ವಲಸೆಯನ್ನು ತಕ್ಷಣವೇ ನಿಲ್ಲಿಸಲಾಗುವುದು. ಲಕ್ಷಾಂತರ ಅಕ್ರಮ ವಿದೇಶಿಯರನ್ನು ಅವರು ಬಂದ ಸ್ಥಳಗಳಿಗೆ ಹಿಂತಿರುಗಿಸುವ ಪ್ರಕ್ರಿಯೆಯನ್ನು ನಾವು ಪ್ರಾರಂಭಿಸುತ್ತೇವೆ" ಎಂದು ಟ್ರಂಪ್ ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು.
ಜನ್ಮಸಿದ್ಧ ಪೌರತ್ವ ಹಕ್ಕು ಎಂದರೇನು?
ಜನ್ಮಹಕ್ಕು ಪೌರತ್ವದ ಪ್ರಕಾರ, ಪೋಷಕರ ಪೌರತ್ವ ಅಥವಾ ವಲಸೆ ಸ್ಥಿತಿಯನ್ನು ಲೆಕ್ಕಿಸದೆ ಅಮೆರಿಕದ ನೆಲದಲ್ಲಿ ಜನಿಸಿದ ತಕ್ಷಣ ಸ್ವಯಂಚಾಲಿತವಾಗಿ ಯುಎಸ್ ಪೌರತ್ವ ನೀಡುವುದಾಗಿದೆ. ಈ ಕಾನೂನನ್ನು 1868ರಲ್ಲಿ ಜಾರಿಗೆ ತರಲಾಗಿತ್ತು. ಅಮೆರಿಕದಲ್ಲಿ ಜನಿಸಿದ ಎಲ್ಲಾ ವ್ಯಕ್ತಿಗಳಿಗೆ ಪೌರತ್ವ ನೀಡಲು ಈ ಕಾಯಿದೆ ಬಂದಿತ್ತು.
ಜನ್ಮಸಿದ್ಧ ಹಕ್ಕು ಪೌರತ್ವವು ಸಂವಿಧಾನದ 14 ನೇ ತಿದ್ದುಪಡಿಯಿಂದ ತಂದಿರುವಂಥದ್ದು. ಇದು ದಕ್ಷಿಣದ ರಾಜ್ಯಗಳಲ್ಲಿ ಕಪ್ಪು ಜನರನ್ನು ಗುಲಾಮರನ್ನಾಗಿ ಮಾಡುವ ಅಭ್ಯಾಸವನ್ನು ಕೊನೆಗೊಳಿಸಿದ ಕಾನೂನಾಗಿದೆ.
birthright citizenship,birthright citizenship trump,trump birthright citizenship,donald trump birthright citizenship,citizenship,us birthright citizenship,birthright citizenship usa,birthright citzenship,birthright citizenship donald trump,trump ending birthright citizenship,executive order on birthright citizenship,us birthright citizenship ap explains (cr),executive order to end birthright citizenship,why does the u.s. have birthright citizenship?,birthright
ಅಮೆರಿಕದಲ್ಲಿ ವಲಸಿಗರಲ್ಲಿ ಭಾರತೀಯರ ಸಂಖ್ಯೆ ದೊಡ್ಡದು. ಟ್ರಂಪ್ ಆದೇಶದಿಂದ ಅಮೆರಿಕದಲ್ಲಿಯೇ ಉಳಿಯುವ ಮತ್ತು ತಮ್ಮ ಮಕ್ಕಳಿಗೆ ಅಮೆರಿಕದ ಪೌರತ್ವ ಕೊಡಿಸುವ ಭಾರತೀಯ ತಂದೆ- ತಾಯಿಯರಿಗೆ ಹಿನ್ನಡೆ ಉಂಟು ಮಾಡಲಿದೆ. 2024 ರ ಹೊತ್ತಿಗೆ, ಭಾರತೀಯ ಅಮೆರಿಕನ್ನರು 54 ಲಕ್ಷ ಇದ್ದರು. ಇದು ಅಮೆರಿಕದ ಜನಸಂಖ್ಯೆಯ 1.47%/.
ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶದ ಪ್ರಕಾರ ನೀತಿಯು ಬದಲಾದರೆ, ತಾತ್ಕಾಲಿಕ ಕೆಲಸದ ವೀಸಾಗಳಲ್ಲಿ (ಎಚ್ -1 ಬಿ ವೀಸಾದಂತಹ) ಅಥವಾ ಗ್ರೀನ್ ಕಾರ್ಡ್ ಗಳಿಗಾಗಿ ಕಾಯುತ್ತಿರುವ ಭಾರತೀಯ ಪ್ರಜೆಗಳಿಗೆ ಜನಿಸಿದ ಮಕ್ಕಳು ಇನ್ನು ಮುಂದೆ ಸ್ವಯಂಚಾಲಿತವಾಗಿ ಯುಎಸ್ ಪೌರತ್ವ ಪಡೆಯುವುದಿಲ್ಲ.