ಡೆಲ್ಟಾ ಬೋಯಿಂಗ್ ವಿಮಾನದಲ್ಲಿ ಬೆಂಕಿ: ಲಾಸ್ ಏಂಜಲೀಸ್‌ನಲ್ಲಿ ತುರ್ತು ಭೂಸ್ಪರ್ಶ
x

ಡೆಲ್ಟಾ ಬೋಯಿಂಗ್ ವಿಮಾನದಲ್ಲಿ ಬೆಂಕಿ: ಲಾಸ್ ಏಂಜಲೀಸ್‌ನಲ್ಲಿ ತುರ್ತು ಭೂಸ್ಪರ್ಶ

ಪೆಸಿಫಿಕ್ ಮಹಾಸಾಗರದ ಮೇಲೆ ಹಾರಾಟ ನಡೆಸಿ, ಸುರಕ್ಷತಾ ಪರಿಶೀಲನಾಪಟ್ಟಿಗಳನ್ನು ಪೂರ್ಣಗೊಳಿಸಿದ ನಂತರ, ವಿಮಾನವು ಲಾಸ್ ಏಂಜಲೀಸ್‌ಗೆ ಯಶಸ್ವಿಯಾಗಿ ವಾಪಸ್ಸಾಗಿ ತುರ್ತು ಭೂಸ್ಪರ್ಶ ಮಾಡಿತು.


ಅಟ್ಲಾಂಟಾಗೆ ತೆರಳುತ್ತಿದ್ದ ಡೆಲ್ಟಾ ಏರ್‌ಲೈನ್ಸ್‌ನ ಬೋಯಿಂಗ್ 767-400 ವಿಮಾನ ಶುಕ್ರವಾರ ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (LAX) ಟೇಕ್‌ ಆಫ್‌ ಆದ ಸ್ವಲ್ಪ ಸಮಯದ ನಂತರ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದ ಎಡ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದೇ ಈ ತುರ್ತು ಪರಿಸ್ಥಿತಿಗೆ ಕಾರಣ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ವಿಮಾನದ ಎಡ ಇಂಜಿನ್‌ನಿಂದ ಜ್ವಾಲೆಗಳು ಬರುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ 24 ವರ್ಷ ಹಳೆಯ ವಿಮಾನವು ಟೇಕ್‌ಆಫ್ ಆದ ಕೂಡಲೇ ಪೈಲಟ್‌ಗಳು ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.

ಸುರಕ್ಷತಾ ಕ್ರಮವಾಗಿ, ಪೈಲಟ್‌ಗಳು ಏರ್ ಟ್ರಾಫಿಕ್ ಕಂಟ್ರೋಲ್ (ATC) ಜೊತೆ ಸಮನ್ವಯ ಸಾಧಿಸಿ, ಆರಂಭದಲ್ಲಿ ಪೆಸಿಫಿಕ್ ಮಹಾಸಾಗರದ ಮೇಲೆ ಹಾರಾಟ ನಡೆಸಿ, ಸುರಕ್ಷತಾ ಪರಿಶೀಲನಾಪಟ್ಟಿಗಳನ್ನು ಪೂರ್ಣಗೊಳಿಸಿದರು. ನಂತರ, ವಿಮಾನವು ಲಾಸ್ ಏಂಜಲೀಸ್‌ಗೆ ಯಶಸ್ವಿಯಾಗಿ ವಾಪಸ್ಸಾಗಿ ತುರ್ತು ಭೂಸ್ಪರ್ಶ ಮಾಡಿತು. ಇಳಿಯುವಾಗ ತುರ್ತು ಸಿಬ್ಬಂದಿ ಸನ್ನದ್ಧ ಸ್ಥಿತಿಯಲ್ಲಿದ್ದು, ಬೆಂಕಿಯನ್ನು ನಂದಿಸಲಾಯಿತು. ಅದೃಷ್ಟವಶಾತ್, ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಡೆಲ್ಟಾ ವಕ್ತಾರರು ದೃಢಪಡಿಸಿದ್ದಾರೆ. "ಫ್ಲೈಟ್ 446 ಹೊರಟ ಸ್ವಲ್ಪ ಸಮಯದ ನಂತರ ವಿಮಾನದ ಎಡ ಇಂಜಿನ್‌ನಲ್ಲಿ ಸಮಸ್ಯೆ ಕಂಡುಬಂದ ನಂತರ ಲಾಸ್ ಏಂಜಲೀಸ್‌ಗೆ ಹಿಂತಿರುಗಿತು" ಎಂದು ಅವರು ತಿಳಿಸಿದ್ದಾರೆ.

ತನಿಖೆ ಆರಂಭ:

ಈ ಘಟನೆಗೆ ಸಂಬಂಧಿಸಿದಂತೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ತನಿಖೆ ಆರಂಭಿಸಿದೆ. ವಿಮಾನವು ಎರಡು ಜನರಲ್ ಎಲೆಕ್ಟ್ರಿಕ್ CF6 ಇಂಜಿನ್‌ಗಳಿಂದ ನಿಯಂತ್ರಿಸಲ್ಪಡುತ್ತದೆ.

ಇದು ಈ ವರ್ಷ ಡೆಲ್ಟಾ ಏರ್‌ಲೈನ್ಸ್‌ಗೆ ಸಂಬಂಧಿಸಿದಂತೆ ವರದಿಯಾದ ಎರಡನೇ ಇಂಜಿನ್ ಸಮಸ್ಯೆಯಾಗಿದೆ. ಜನವರಿ 1 ರಂದು, ಸಾo ಪಾಲೊದ ಗೌರುಲ್ಹೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಮತ್ತೊಂದು ಡೆಲ್ಟಾ ವಿಮಾನದಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅದರ ಎಡ ಇಂಜಿನ್‌ನಲ್ಲಿ ಸಮಸ್ಯೆಗಳು ಕಂಡುಬಂದಿದ್ದವು.

Read More
Next Story