
ನಾಪತ್ತೆಯಾಗಿದ್ದ ಭಾರತೀಯ ಸಂಜಾತೆ, ಪಿಟ್ಸ್‌ಬರ್ಗ್ ವಿ.ವಿ. ವಿದ್ಯಾರ್ಥಿನಿ ಸುದೀಕ್ಷಾ ಕೋನಂಕಿ ಬಟ್ಟೆಗಳು ಬೀಚ್ನಲ್ಲಿ ಪತ್ತೆ
ಇತ್ತೀಚೆಗೆ ಬಿಡುಗಡೆ ಮಾಡಿದ ಚಿತ್ರಗಳಲ್ಲಿ ಕುರ್ಚಿಯ ಮೇಲೆ ಇರಿಸಲಾದ ಬಿಳಿ ಬಲೆಯ ವೇಲ್ಗಳು ಮತ್ತು ಅದರ ಪಕ್ಕದಲ್ಲಿ ಮರಳಿನಿಂದ ಮುಚ್ಚಿದ ಒಂದು ಜೋಡಿ ಚಪ್ಪಲಿಗಳು ಕಂಡುಬಂದಿವೆ.
ಡೊಮೆನಿಕಾ ರಿಪಬ್ಲಿಕ್ನಲ್ಲಿ ಕಾಣೆಯಾಗಿರುವ ಭಾರತ ಮೂಲಕ 20 ವರ್ಷದ ವಿದ್ಯಾರ್ಥಿನಿ ಸುದೀಕ್ಷಾ ಕೋನಂಕಿ ಅವರಿಗೆ ಸೇರಿದೆ ಎನ್ನಲಾದ ಬಟ್ಟೆಗಳು ಸಿಕ್ಕಿವೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಡೊಮಿನಿಕನ್ ರಿಪಬ್ಲಿಕ್ ಬೀಚ್ನ ಲಾಂಜ್ ಕುರ್ಚಿಯಲ್ಲಿ ಬಟ್ಟೆಗಳು ಇದ್ದವು ಎಂದು ಹೇಳಲಾಗಿದೆ. ಮಾರ್ಚ್ 6ರಂದು ಕೋನಂಕಿ ಕಣ್ಮರೆಯಾಗಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಇತ್ತೀಚೆಗೆ ಬಿಡುಗಡೆ ಮಾಡಿದ ಚಿತ್ರಗಳಲ್ಲಿ ಕುರ್ಚಿಯ ಮೇಲೆ ಇರಿಸಲಾದ ಬಿಳಿ ಬಲೆಯ ವೇಲ್ಗಳು ಮತ್ತು ಅದರ ಪಕ್ಕದಲ್ಲಿ ಮರಳಿನಿಂದ ಮುಚ್ಚಿದ ಒಂದು ಜೋಡಿ ಚಪ್ಪಲಿಗಳು ಕಂಡುಬಂದಿವೆ.
ಕೊನಂಕಿ ಕೊನೆಯ ಬಾರಿಗೆ ಮಾರ್ಚ್ 6 ರ ಬೆಳಿಗ್ಗೆ 5: 50 ರ ಸುಮಾರಿಗೆ ಜೋಶ್ ರಿಬೆ ಎಂಬ ವ್ಯಕ್ತಿಯ ಜತೆ ಪುಂಟಾ ಕಾನಾದ ಬೀಚ್ ರೆಸಾರ್ಟ್ನಲ್ಲಿ ಕಾಣಿಸಿಕೊಂಡಿದ್ದರು. ಮುಂಜಾನೆ 4:15 ರ ಸುಮಾರಿಗೆ ರಿಬೆ ಕೈ ಹಿಡಿದು ನಡೆಯುತ್ತಿರುವುದನ್ನು ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು.
ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದ ಸುದೀಕ್ಷಾ, ಅವರು ಮಾರ್ಚ್ 3ರಿಂದ ಕೆರಿಬಿಯನ್ಗೆ ರಜೆ ಕಳೆಯಲು ಹೋಗಿದ್ದರು. ಈ ವೇಳೆ ಅವರು ರಿಬೆ ಜತೆಗಿದ್ದರು. ಕೊನಂಕಿ ಸಮುದ್ರದಲ್ಲಿ ಮುಳುಗಿರಬಹುದು ಎಂದು ಅಧಿಕಾರಿಗಳು ಊಹಿಸಿದ್ದಾರೆ. ಇಲ್ಲಿಯೂ ಮೋಸ ಇರಬಹುದು ಎಂದು ಅಂದಾಜಿಸಿದ್ದಾರೆ. ಆದರೆ ಆಕೆಯ ಕುಟುಂಬವು ಅಪಹರಣವಾಗಿರಬಹುದು ಎಂದೇ ಹೇಳುತ್ತಿದೆ.