
ಚಾಟ್‌ಜಿಪಿಟಿ ಸ್ಥಗಿತ| ವಿಶ್ವಾದ್ಯಂತ ಬಳಕೆದಾರರಿಗೆ ತೊಂದರೆ; ಇಲ್ಲಿವೆ ನೋಡಿ ಪರ್ಯಾಯ ಆಯ್ಕೆಗಳು
ಆನ್‌ಲೈನ್ ಸೇವೆಗಳ ಸ್ಥಿತಿಗತಿಯನ್ನು ಪತ್ತೆಹಚ್ಚುವ "ಡೌನ್‌ಡಿಟೆಕ್ಟರ್ (Downdetector) ವೆಬ್‌ಸೈಟ್‌ನ ಪ್ರಕಾರ, ಬುಧವಾರ ಮಧ್ಯಾಹ್ನ 12.58ರ ಹೊತ್ತಿಗೆ, ಚಾಟ್‌ಜಿಪಿಟಿ ಸ್ಥಗಿತಗೊಂಡಿರುವ ಬಗ್ಗೆ 500ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.
ಓಪನ್‌ಎಐ (OpenAI) ಸಂಸ್ಥೆಯ ಜನಪ್ರಿಯ ಕೃತಕ ಬುದ್ಧಿಮತ್ತೆ (AI) ಆಧಾರಿತ ಚಾಟ್‌ಬಾಟ್, ಚಾಟ್‌ಜಿಪಿಟಿ (ChatGPT), ವಿಶ್ವಾದ್ಯಂತ ತಾಂತ್ರಿಕ ದೋಷ ಎದುರಿಸುತ್ತಿದ್ದು, ಲಕ್ಷಾಂತರ ಬಳಕೆದಾರರು ಸಮಸ್ಯೆಗೆ ಸಿಲುಕಿದ್ದಾರೆ. ಚಾಟ್‌ಜಿಪಿಟಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಆನ್‌ಲೈನ್ ಸೇವೆಗಳ ಸ್ಥಿತಿಗತಿಯನ್ನು ಪತ್ತೆಹಚ್ಚುವ "ಡೌನ್‌ಡಿಟೆಕ್ಟರ್ (Downdetector) ವೆಬ್‌ಸೈಟ್‌ನ ಪ್ರಕಾರ, ಬುಧವಾರ ಮಧ್ಯಾಹ್ನ 12.58ರ ಹೊತ್ತಿಗೆ, ಚಾಟ್‌ಜಿಪಿಟಿ ಸ್ಥಗಿತಗೊಂಡಿರುವ ಬಗ್ಗೆ 500ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.
ಓಪನ್‌ಎಐ ಸಂಸ್ಥೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ, "ಚಾಟ್‌ಜಿಪಿಟಿಯಲ್ಲಿ ಪ್ರತಿಕ್ರಿಯೆಗಳು ಪ್ರದರ್ಶನಗೊಳ್ಳುತ್ತಿಲ್ಲ. ನಾವು ಈ ಸಮಸ್ಯೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ" ಎಂದು ತಿಳಿಸಿದೆ. ಆದಾಗ್ಯೂ, ಈ ತಾಂತ್ರಿಕ ದೋಷಕ್ಕೆ ನಿಖರ ಕಾರಣವನ್ನು ಸಂಸ್ಥೆಯು ಇನ್ನೂ ಬಹಿರಂಗಪಡಿಸಿಲ್ಲ.
ಕೆಲವು ಬಳಕೆದಾರರು ವೆಬ್‌ಸೈಟ್ ಮತ್ತು ಮೊಬೈಲ್ ಆವೃತ್ತಿ ಎರಡರಲ್ಲೂ ನೆಟ್‌ವರ್ಕ್ ದೋಷಗಳು ಸೇರಿದಂತೆ ಹಲವು ಸಮಸ್ಯೆಗಳನ್ನು ವರದಿ ಮಾಡಿದ್ದರೆ, ಇನ್ನು ಕೆಲವರಿಗೆ ಇದು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಹಿಂದೆಯೂ ಚಾಟ್‌ಜಿಪಿಟಿ ಇಂತಹ ತಾಂತ್ರಿಕ ದೋಷಗಳನ್ನು ಎದುರಿಸಿತ್ತು. ಸೆಪ್ಟೆಂಬರ್ 1 ಮತ್ತು 2 ರಂದು ಕೂಡ ಸಣ್ಣ ಪ್ರಮಾಣದ ವ್ಯತ್ಯಯಗಳು ಕಂಡುಬಂದಿದ್ದವು.
ಪರ್ಯಾಯಗಳತ್ತ ಮುಖ ಮಾಡಿದ ಬಳಕೆದಾರರು
ಚಾಟ್‌ಜಿಪಿಟಿ ಸ್ಥಗಿತಗೊಂಡಿದ್ದರಿಂದ, ಬಳಕೆದಾರರು ತಮ್ಮ ಕೆಲಸಗಳನ್ನು ಮುಂದುವರಿಸಲು ಗೂಗಲ್ ಜೆಮಿನಿ (Google Gemini) ಮತ್ತು ಮೈಕ್ರೋಸಾಫ್ಟ್ ಕೋಪೈಲಟ್ (Microsoft Copilot) ನಂತಹ ಪರ್ಯಾಯಗಳತ್ತ ಮುಖ ಮಾಡಿದ್ದಾರೆ.
ಪಠ್ಯ ಆಧಾರಿತ ವಿಷಯ ರಚನೆಗೆ ಇದು ಅತ್ಯುತ್ತಮ ಆಯ್ಕೆಯಾಗಳಾಗಿವೆ
ಮೈಕ್ರೋಸಾಫ್ಟ್ ಕೋಪೈಲಟ್: ಇದು ಚಾಟ್‌ಜಿಪಿಟಿಯ ಪ್ರೀಮಿಯಂ ಆವೃತ್ತಿಗೆ ಸಮಾನವಾದ ಅನುಭವವನ್ನು ನೀಡುವುದಲ್ಲದೆ, ಚಿತ್ರಗಳನ್ನು ರಚಿಸುವ ಸಾಮರ್ಥ್ಯವನ್ನೂ ಹೊಂದಿದೆ.
ಪರ್ಪ್ಲೆಕ್ಸಿಟಿ ಎಐ (Perplexity AI): ಶೈಕ್ಷಣಿಕ ಮತ್ತು ಆಳವಾದ ಸಂಶೋಧನೆ ನಡೆಸುವವರಿಗೆ ಇದು ಅತ್ಯಂತ ಉಪಯುಕ್ತವಾಗಿದ್ದು, ನಿಖರವಾದ ಉಲ್ಲೇಖಗಳನ್ನು (citations) ಒದಗಿಸುತ್ತದೆ.
ಜಾಸ್ಪರ್ ಚಾಟ್ (Jasper Chat): ಕಂಟೆಂಟ್ ಕ್ರಿಯೇಟರ್‌ಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಎಸ್‌ಇಒ (SEO) ಆಪ್ಟಿಮೈಸೇಶನ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಯೂಚಾಟ್ (YouChat): ತನ್ನ ಪ್ರಬಲ ಸರ್ಚ್ ಇಂಜಿನ್ ಮೂಲಕ ಇತ್ತೀಚಿನ ಮತ್ತು ಸಂಬಂಧಿತ ಮಾಹಿತಿಗಳನ್ನು ಒದಗಿಸುತ್ತದೆ.
ಈ ಪರ್ಯಾಯಗಳು ಚಾಟ್‌ಜಿಪಿಟಿ ಸ್ಥಗಿತಗೊಂಡಾಗಲೂ ಬಳಕೆದಾರರು ತಮ್ಮ ಕೆಲಸವನ್ನು ಅಡೆತಡೆಯಿಲ್ಲದೆ ಮುಂದುವರಿಸಲು ಸಹಾಯ ಮಾಡುತ್ತವೆ.