ಬಿಬಿಸಿಗೆ ಮೊದಲ ಭಾರತೀಯ ಅಧ್ಯಕ್ಷ
x

ಬಿಬಿಸಿಗೆ ಮೊದಲ ಭಾರತೀಯ ಅಧ್ಯಕ್ಷ


ಲಂಡನ್, ಫೆಬ್ರವರಿ 22-ಭಾರತೀಯ ಸಂಜಾತ ಮಾಧ್ಯಮ ಕಾರ್ಯನಿರ್ವಾಹಕ ಡಾ. ಸಮೀರ್ ಶಾ ಅವರನ್ನು ಗುರುವಾರ ಬಿಬಿಸಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಕಿಂಗ್ ಚಾರ್ಲ್ಸ್ III ಅವರು ಶಾ ಅವರ ಆಯ್ಕೆಯನ್ನು ಅನುಮೋದಿಸಿದ ಬಳಿಕ ನೇಮಕ ಅಧಿಕೃತಗೊಂಡಿದೆ.

ಶಾ(72) ಅವರು 40 ವರ್ಷ ಕಾಲ ಇಂಗ್ಲೆಂಡಿನಲ್ಲಿ ಪ್ರಸಾರ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು, ಕಳೆದ ಡಿಸೆಂಬರ್‌ನಲ್ಲಿ ಸರ್ಕಾರದ ಆದ್ಯತೆಯ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು. ಹೌಸ್ ಆಫ್ ಕಾಮನ್ಸ್ ಮೀಡಿಯಾ ಕಲ್ಚರ್, ಮೀಡಿಯಾ ಮತ್ತು ಸ್ಪೋರ್ಟ್ ಆಯ್ಕೆ ಸಮಿತಿ ನೇಮಕ ಪೂರ್ವ ಪರಿಶೀಲನೆ ನಡೆಸಿತು.

ಅವರು ವಾರ್ಷಿಕ 1,60,000 ಪೌಂಡ್‌ ವೇತನ ಪಡೆಯಲಿದ್ದು, ಮಾರ್ಚ್ 2028 ರವರೆಗೆ ಸೇವೆ ಸಲ್ಲಿಸಲಿದ್ದಾರೆ.

Read More
Next Story