Bangladesh: 29 ಅವಾಮಿ ಲೀಗ್ ನಾಯಕರು, ಕುಟುಂಬ ಸದಸ್ಯರ ಮೃತದೇಹ ಪತ್ತೆ
x

Bangladesh: 29 ಅವಾಮಿ ಲೀಗ್ ನಾಯಕರು, ಕುಟುಂಬ ಸದಸ್ಯರ ಮೃತದೇಹ ಪತ್ತೆ


ಮಾಜಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ನಂತರ, ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಮಂಗಳವಾರ ಸಂಸತ್ತನ್ನು ವಿಸರ್ಜಿಸಿದ್ದಾರೆ; ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ.

ಅಧ್ಯಕ್ಷ ಶಹಾಬುದ್ದೀನ್ ಅವರು ಮೂರು ಸೇವೆಗಳ ಮುಖ್ಯಸ್ಥರು ಮತ್ತು ತಾರತಮ್ಯ ವಿರೋಧಿ ವಿದ್ಯಾರ್ಥಿ ಆಂದೋಲನದ 13 ಸದಸ್ಯರ ನಿಯೋಗದೊಟ್ಟಿಗೆ ಬಂಗಬಾಬನ್ (ಅಧ್ಯಕ್ಷರ ಅರಮನೆ) ನಲ್ಲಿ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿ ಎಂ.ಡಿ. ಜಾಯ್ನಲ್ ಅಬೇದಿನ್ ತಡ ರಾತ್ರಿ ತಿಳಿಸಿದ್ದಾರೆ.

ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಧ್ಯಂತರ ಸರ್ಕಾರದ ಇತರ ಸದಸ್ಯರನ್ನು ಅಂತಿಮಗೊಳಿಸಲಾಗುವುದು ಎಂದು ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿ ತಿಳಿಸಿದ್ದಾರೆ.

ಸೇನೆ ಸೋಮವಾರ ಅಧಿಕಾರ ವಹಿಸಿಕೊಂಡ ಬಳಿಕ ದೇಶದ ಹಲವು ಭಾಗಗಳಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿವೆ. ಜುಲೈ ಮಧ್ಯದಿಂದ ಆರಮಭಗೊಂಡ ಸಂಘರ್ಷದಿಂದ ಮೃತಪಟ್ಟವರ ಸಂಖ್ಯೆ 440 ಕ್ಕೆ ಏರಿದೆ.

ಹಲವು ಹಿಂದೂ ದೇವಾಲಯಗಳು, ಮನೆಗಳು ಮತ್ತು ಮಳಿಗೆಗಳನ್ನು ಧ್ವಂಸಗೊಳಿಸಲಾಗಿದೆ. ಮಹಿಳೆಯರ ಮೇಲೆ ಹಲ್ಲೆ ನಡೆದಿದೆ. ಹಸೀನಾ ನೇತೃತ್ವದ ಅವಾಮಿ ಲೀಗ್ ಬೆಂಬಲಿಸುವ ಕನಿಷ್ಠ ಇಬ್ಬರು ಹಿಂದೂ ಮುಖಂಡರು ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟರು ಎಂದು ಢಾಕಾದ ಎರಡು ಸಮುದಾಯದ ಮುಖಂಡರು ತಿಳಿಸಿದ್ದಾರೆ.

ಯೂನಸ್(84) ಮಧ್ಯಂತರ ಸರ್ಕಾರದ ನೇತೃತ್ವ ವಹಿಸಲು ಒಪ್ಪಿಕೊಂಡಿದ್ದಾರೆ ಎಂದು ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾರತಮ್ಯ ವಿರೋಧಿ ವಿದ್ಯಾರ್ಥಿ ಚಳವಳಿ ಮುಖಂಡರು ಹೇಳಿದ್ದಾರೆ. ಪ್ರಸ್ತುತ ದೇಶದಿಂದ ಹೊರಗಿರುವ ಯೂನಸ್‌, ಶೇಖ್ ಹಸೀನಾ ಅವರ ಆಡಳಿತದಿಂದ ಇಳಿಸಿರುವುದನ್ನು ಸ್ವಾಗತಿಸಿದ್ದಾರೆ. ʻಈ ಬೆಳವಣಿಗೆ ದೇಶದ ಎರಡನೇ ವಿಮೋಚನೆ,ʼ ಎಂದು ವಿವರಿಸಿದರು.

ಸೋಮವಾರ ಭಾರತಕ್ಕೆ ಬಂದಿಳಿದ ಹಸೀನಾ ಅವರನ್ನು ಬಿಗಿ ಭದ್ರತೆಯಲ್ಲಿ ಅನಿರ್ದಿಷ್ಟ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಂಗಳವಾರ ನಡೆದ ಸರ್ವಪಕ್ಷ ಸಭೆಯಲ್ಲಿ, ನರೇಂದ್ರ ಮೋದಿ ಸರ್ಕಾರವು ಹಸೀನಾಗೆ ಸಹಾಯ ಮಾಡುವ ಭರವಸೆ ನೀಡಿದೆ. ಮುಂದಿನ ನಡೆಯನ್ನು ನಿರ್ಧರಿಸಲು ಅವರಿಗೆ ಸಮಯಾವಕಾಶ ನೀಡಿದೆ ಎಂದು ಹೇಳಿದರು.

ಅಧ್ಯಕ್ಷರು ಸಂಸತ್ತನ್ನು ವಿಸರ್ಜಿಸಿರುವುದರಿಂದ, ಹೊಸ ಚುನಾವಣೆ ನಡೆಯಬೇಕಿದೆ. ಜನವರಿ ಚುನಾವಣೆಯಲ್ಲಿ ಹಸೀನಾ ಅವರು ಸತತ ನಾಲ್ಕನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬಂದರು. ಆಗ ಪ್ರತಿಪಕ್ಷಗಳು ಮತದಾನ ಬಹಿಷ್ಕರಿಸಿದ್ದವು.

Read More
Next Story