
Baloch rebels: 214 ನಾಗರಿಕರನ್ನು ಕೊಂದಿದ್ದೇವೆ, ಪಾಕಿಸ್ತಾನ ಸರ್ಕಾರ ಸುಳ್ಳು ಹೇಳುತ್ತಿದೆ ಎಂದ ಬಲೂಚಿಸ್ತಾನ ಉಗ್ರರು
ಪಾಕಿಸ್ತಾನ ಸೇನೆ ತಾವು ನೀಡಿದ್ದ 48 ಗಂಟೆಗಳ ಕಾಲಮಿತಿಯನ್ನು ನಿರ್ಲಕ್ಷಿಸಿದ್ದರಿಂದ 214 ನಾಗರಿಕರನ್ನು ಹತ್ಯೆ ಮಾಡಿರುವುದಾಗಿ ಉಗ್ರ ಸಂಘಟನೆ ಹೇಳಿದೆ.
ಪಾಕಿಸ್ತಾನದಲ್ಲಿ ಇತ್ತೀಚೆಗೆ ಪ್ರಯಾಣಿಕರ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಅಪಹರಣ ಮಾಡಿದ್ದ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಉಗ್ರರು ಪ್ರಯಾಣಿಕರನನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು ಅಲ್ಲಿನ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿತ್ತು. ಆದರೆ ಪಾಕ್ ಸರ್ಕಾರ ಸೇನಾ ಕಾರ್ಯಾಚರಣೆ ನಡೆಸಿ ರೈಲನ್ನು ಮುಕ್ತಗೊಳಿಸಿದ್ದರು. ಈ ವೇಳೆ ನಾಗರಿಕರು, ಸೇನಾ ಸಿಬ್ಬಂದಿ ಹಾಗೂ ರೈಲು ಸಿಬ್ಬಂದಿಗಳು ಮೃತಪಟ್ಟಿದ್ದರು.
ಸರ್ಕಾರ ಒಟ್ಟು 31 ಮಂದಿ ಅಮಾಯಕರು ಹತ್ಯೆಯಾಗಿದ್ದಾರೆ. 34 ಜನ ಉಗ್ರರನ್ನು ಕೊಂದಿದ್ದೇವೆ ಎಂದು ಹೇಳಿಕೊಂಡಿದೆ. ಆದರೆ, ಬಲೂಚಿಸ್ತಾನ ಉಗ್ರರು ಹೊಸ ಹೇಳಿಕೆ ಬಿಡುಗಡೆ ಮಾಡಿದ್ದು 214 ನಾಗರಿಕನ್ನು ಕೊಂದಿದ್ದೇವೆ ಎಂದಿದ್ದಾರೆ .
ಪಾಕಿಸ್ತಾನ ಸೇನೆ ತಾವು ನೀಡಿದ್ದ 48 ಗಂಟೆಗಳ ಕಾಲಮಿತಿಯನ್ನು ನಿರ್ಲಕ್ಷಿಸಿದ್ದರಿಂದ 214 ನಾಗರಿಕರನ್ನು ಹತ್ಯೆ ಮಾಡಿರುವುದಾಗಿ ಉಗ್ರ ಸಂಘಟನೆ ಹೇಳಿದೆ. ಬಲೂಚಿಸ್ತಾನ ರಾಜಕೀಯ ಬಂಧಿತರ ಬಿಡುಗಡೆಗಾಗಿ ಬೇಡಿಕೆ ಇಟ್ಟಿದ್ದರೂ ಪಾಕಿಸ್ತಾನ ನಿರಾಕರಿಸಿದ ಕಾರಣ ಹತ್ಯೆ ಮಾಡಿದ್ದೇವೆ ಎಂದು ಹೇಳಿಕೊಂಡಿದೆ.
ಪಾಕಿಸ್ತಾನ ಸೇನೆಯ ಹಠಮಾರಿ ನಿಲುವಿನಿಂದಾಗಿ ನಾಗರಿಕರ ಸಾವು ಉಂಟಾಗಿದೆ ಎಂದು ಆರೋಪಿಸಿದೆ. ಆದರೆ, ಈ ಹೇಳಿಕೆಯನ್ನು ಖಾತರಿಪಡಿಸುವ ಯಾವುದೇ ಸಾಕ್ಷಿ ನೀಡಿಲ್ಲ.
ಪಾಕಿಸ್ತಾನದ ಸೇನೆ ಬಿಎಲ್‌ಎ ಹೇಳಿಕೆಯನ್ನು ತಳ್ಳಿಹಾಕಿದ್ದು 33 ಬಂಡುಕೋರರನ್ನು ಕೊಂಡಿದ್ದು , 354 ಅಪಹರಣಕ್ಕೀಡಾದವರನ್ನು ರಕ್ಷಿಸಿದ್ದೇವೆ ಎಂದು ಹೇಳಿದೆ. ಈ ಎನ್ಕೌಂಟರ್ನಲ್ಲಿ 31 ಅಮಾಯಕರು ಮೃತಪಟ್ಟಿರುವುದಾಗಿ ಹೇಳಿದೆ. ಅವರಲ್ಲಿ 23 ಜನ ಸೈನಿಕರು, ಮೂವರು ರೈಲು ಸಿಬ್ಬಂದಿ, ಐವರು ಪ್ರಯಾಣಿಕರು ಸೇರಿದ್ದಾರೆ.
ಮಾರ್ಚ್ 11 ರಂದು ಉಗ್ರರು, ಜಾಫರ್ ಎಕ್ಸ್‌ಪ್ರೆಸ್ ಸಾಗುವ ರೈಲು ಹಳಿಯನ್ನು ಸ್ಫೋಟಿಸಿ ರೈಲನ್ನು ಅಪಹರಣ ಮಾಡಿದ್ದರು. ಈ ಪ್ರದೇಶದಲ್ಲಿ ಇಂಟರ್‌ನೆಟ್ ಅಥವಾ ಮೊಬೈಲ್ ನೆಟ್‌ವರ್ಕ್‌ಗಳಿಲ್ಲದಿದ್ದುದರಿಂದ ಕಾರ್ಯಾಚರಣೆ ಕಷ್ಟವಾಗಿತ್ತು.
ಭಾರತ ಮತ್ತು ಆಫ್ಘಾನಿಸ್ತಾನದಲ್ಲಿ ಇರುವ ತಾಲಿಬಾನ್ ಬಂಡುಕೋರರನ್ನು ಬಲೂಚಿಸ್ತಾನ ಬಂಡುಕೋರರಿಗೆ ಬೆಂಬಲ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಆದರೆ ಭಾರತ ಮತ್ತು ತಾಲಿಬಾನ್ ಈ ಆರೋಪವನ್ನು ತಳ್ಳಿಹಾಕಿವೆ. ಭಾರತ ಪಾಕಿಸ್ತಾನವನ್ನು “ಜಾಗತಿಕ ಉಗ್ರಗಾಮಿ ಕೇಂದ್ರ” ಎಂದು ಕರೆಯುವ ಮೂಲಕ ಈ ಆರೋಪಗಳನ್ನು ನಿರಾಕರಿಸಿದೆ.