Kazakhstan Plane Crash | ಖಜಕಿಸ್ತಾನ ವಿಮಾನ ಪತನ: 110 ಮಂದಿ ಸಾವು ಶಂಕೆ
x
ಖಜಕಿಸ್ತಾನದ ಅಕ್ಟೌ ಬಳಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದೆ.

Kazakhstan Plane Crash | ಖಜಕಿಸ್ತಾನ ವಿಮಾನ ಪತನ: 110 ಮಂದಿ ಸಾವು ಶಂಕೆ

ವಿಮಾನದಲ್ಲಿ110 ಜನರು ಇದ್ದರು ಎನ್ನಲಾಗಿದೆ. ವಿಮಾನವು ಅಜರ್‌ಬೈಜಾನ್‌ನ ರಾಜಧಾನಿ ಬಾಕುದಿಂದ ರಷ್ಯಾದ ಚೆಚೆನ್ಯಾದ ಗ್ರೋಜ್ನಿಗೆ ಹೋಗುತ್ತಿತ್ತು. ಆದರೆ ಗ್ರೋಜ್ನಿಯಲ್ಲಿ ದಟ್ಟ ಮಂಜಿನಿಂದಾಗಿ ಅದರ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ಖಜಕಿಸ್ತಾನದ ಸಚಿವಾಲಯ ಹೇಳಿದೆ.


Click the Play button to hear this message in audio format

ಅಜರ್‌ಬೈಜಾನ್ ಏರ್‌ಲೈನ್ಸ್‌ನ ಪ್ರಯಾಣಿಕ ವಿಮಾನವು ಖಜಕಿಸ್ತಾನ್‌ನ ಅಕ್ಟೌ ನಗರದ ಬಳಿ ಪತನಗೊಂಡಿದೆ. ಅಪಘಾತದ ರಭಸಕ್ಕೆ ವಿಮಾನ ಬೆಂಕಿ ಹೊತ್ತಿಕೊಂಡಿದೆ. ವಿಮಾನದಲ್ಲಿ110 ಜನರು ಇದ್ದರು ಎನ್ನಲಾಗಿದೆ.

ವಿಮಾನವು ಅಜರ್‌ಬೈಜಾನ್‌ನ ರಾಜಧಾನಿ ಬಾಕುದಿಂದ ರಷ್ಯಾದ ಚೆಚೆನ್ಯಾದ ಗ್ರೋಜ್ನಿಗೆ ಹೋಗುತ್ತಿತ್ತು. ಆದರೆ ಗ್ರೋಜ್ನಿಯಲ್ಲಿ ದಟ್ಟ ಮಂಜಿನಿಂದಾಗಿ ಅದರ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ಖಜಕಿಸ್ತಾನದ ತುರ್ತು ಸಚಿವಾಲಯ ಹೇಳಿದೆ.

ಅಜರ್‌ಬೈಜಾನ್ ಏರ್‌ಲೈನ್ಸ್ ವಿಮಾನವು ಬಾಕುದಿಂದ ರಷ್ಯಾದ ಚೆಚೆನ್ಯಾದ ಗ್ರೋಜ್ನಿಗೆ ಪ್ರಯಾಣಿಸುತ್ತಿದ್ದು, ಆದರೆ ಗ್ರೋಜ್ನಿಯಲ್ಲಿ ಮಂಜಿನಿಂದಾಗಿ ಮಾರ್ಗವನ್ನು ಬದಲಾಯಿಸಲಾಯಿತು. ವಿಮಾನವು ವಿಮಾನ ನಿಲ್ದಾಣದ ಮೇಲೆ ಹಲವಾರು ಸುತ್ತುಗಳನ್ನು ಹಾಕಿದೆ ಎಂದು ಖಜಕ್ ಮಾಧ್ಯಮ ವರದಿಗಳು ಹೇಳಿವೆ. ಅಪಘಾತಕ್ಕೀಡಾದ ವಿಮಾನ ಎಂಬ್ರೇರ್ 190 ವಿಮಾನ ಎಂದು ಅಜರ್‌ಬೈಜಾನ್ ಏರ್‌ಲೈನ್ಸ್ ಹೇಳಿದೆ.

ವಿಮಾನದಲ್ಲಿ 105 ಪ್ರಯಾಣಿಕರು ಮತ್ತು ಐವರು ಸಿಬ್ಬಂದಿ ಇದ್ದರು ಎಂದು ಖಜಕ್ ಮಾಧ್ಯಮ ವರದಿ ಮಾಡಿದೆ. ಅಪಘಾತದ ಬಗ್ಗೆ ಅಜೆರ್ಬೈಜಾನ್ ಏರ್ಲೈನ್ಸ್ ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಅಪಘಾತದ ಕಾರಣದ ಬಗ್ಗೆ ತನಿಖೆ ಮುಂದುವರೆದಿದೆ. ಎಷ್ಟು ಮಂದಿ ಬದುಕುಳಿದಿದ್ದಾರೆ ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ವಿಮಾನ ಪತನಗೊಳ್ಳುವ ಮೊದಲು ಹಲವಾರು ಸುತ್ತು ಹಾಕಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಅಪಘಾತದ ಸ್ಥಳದಲ್ಲಿ ಬೆಂಕಿಯನ್ನು ನಂದಿಸಲು ತುರ್ತು ಸೇವೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವಾಲಯ ತಿಳಿಸಿದೆ. ಖಜಕಿಸ್ತಾನದ 52 ಅಗ್ನಿಶಾಮಕ ಸಿಬ್ಬಂದಿ ಮತ್ತು 11 ಅಗ್ನಿಶಾಮಕ ದಳಗಳು ರಕ್ಷಣೆಯಲ್ಲಿ ತೊಡಗಿವೆ. ಅಪಘಾತ ಸ್ಥಳದಲ್ಲಿ ಕಾರ್ಯಾಚರಣೆಯ ಪ್ರಧಾನ ಕಚೇರಿಯನ್ನು ಸ್ಥಾಪಿಸಲಾಗಿದೆ.

Read More
Next Story