ಟ್ರಂಪ್ ಹತ್ಯೆ ಯತ್ನ: ಯುಎಸ್ ಸೀಕ್ರೆಟ್ ಸರ್ವೀಸ್ ನಿರ್ದೇಶಕಿ ರಾಜೀನಾಮೆ
x

ಟ್ರಂಪ್ ಹತ್ಯೆ ಯತ್ನ: ಯುಎಸ್ ಸೀಕ್ರೆಟ್ ಸರ್ವೀಸ್ ನಿರ್ದೇಶಕಿ ರಾಜೀನಾಮೆ


ವಾಷಿಂಗ್ಟನ್, ಜುಲೈ 24- ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಯ ವಿಫಲ ಯತ್ನದ ನಂತರ ರಹಸ್ಯ ಸೇವೆಗಳ ನಿರ್ದೇಶಕಿ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಮಾಜಿ ಅಧ್ಯಕ್ಷರನ್ನು ರಕ್ಷಿಸುವ ಉದ್ದೇಶದಲ್ಲಿ ಸಂಸ್ಥೆ ವಿಫಲವಾಗಿದೆ ಎಂಬ ಆಕ್ರೋಶದ ಹಿನ್ನೆಲೆಯಲ್ಲಿ ಈ ರಾಜೀನಾಮೆ ಬಂದಿದೆ. ಆಗಸ್ಟ್ 2022 ರಿಂದ ರಹಸ್ಯ ಸೇವೆಗಳ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಕಿಂಬರ್ಲಿ ಚೀಟಲ್, ಪೆನ್ಸಿಲ್ವೇನಿಯಾದಲ್ಲಿ ನಡೆದ ಸಭೆಯಲ್ಲಿ ರಿಪಬ್ಲಿ ಕನ್ ಅಧ್ಯಕ್ಷೀಯ ಅಭ್ಯರ್ಥಿಗೆ ಬಂದೂಕುಧಾರಿಯೊಬ್ಬರು ಹತ್ತಿರವಾಗಲು ಹೇಗೆ ಸಾಧ್ಯವಾಯಿತು ಎಂಬ ಕುರಿತು ಟೀಕೆ ಹಾಗೂ ಹಲವು ತನಿಖೆಗಳನ್ನು ಎದುರಿಸುತ್ತಿದ್ದಾರೆ.

ʻಸುರಕ್ಷತಾ ಲೋಪಕ್ಕೆ ನಾನು ಸಂಪೂರ್ಣ ಜವಾಬ್ದಾರಿ ಹೊರುತ್ತೇನೆ. ಇತ್ತೀಚಿನ ಘಟನೆಗಳ ಬೆಳಕಿನಲ್ಲಿ ನಿರ್ದೇಶಕ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಮಾಡಿದ್ದೇನೆ,ʼ ಎಂದು ಇಮೇಲ್‌ ನಲ್ಲಿ ಬರೆದಿದ್ದಾರೆ.

ವಿಫಲ ಹತ್ಯೆ ಪ್ರಯತ್ನ ಕುರಿತು ಇನ್ಸ್‌ಪೆಕ್ಟರ್ ಜನರಲ್ ತನಿಖೆಯಲ್ಲದೆ, ಅಧ್ಯಕ್ಷ ಜೋ ಬಿಡೆನ್ ಅವರ ಆದೇಶದ ಮೇರೆಗೆ ಸ್ವತಂತ್ರ, ದ್ವಿಪಕ್ಷೀಯ ಏಜೆನ್ಸಿಯ ತನಿಖೆ ನಡೆಯಲಿದೆ.

ಚೀಟಲ್ ಅವರು ಕಾಂಗ್ರೆಸ್ ಸಮಿತಿ ಮುಂದೆ ಹಾಜರಾಗಿದ್ದು, ಡೆಮೋಕ್ರಾಟ್ ಮತ್ತು ರಿಪಬ್ಲಿಕನ್ನರಿಂದ ಗಂಟೆಗಳ ಕಾಲ ನಿಂದನೆಗೆ ಒಳಗಾದರು. ಟ್ರಂಪ್ ಅವರ ಹತ್ಯೆ ಪ್ರಯತ್ನವು ರಹಸ್ಯ ಸೇವೆಗಳ ʻಅತ್ಯಂತ ಮಹತ್ವದ ಕಾರ್ಯಾಚರಣೆ ವೈಫಲ್ಯʼ ಎಂದು ಸಮಿತಿ ಹೇಳಿತು. ನಿರ್ದಿಷ್ಟ ಪ್ರಶ್ನೆ ಗಳಿಗೆ ಉತ್ತರಿಸಲು ವಿಫಲರಾದ ಚೀಟಲ್‌, ಜನಪ್ರತಿನಿಧೀಗಳ ಕೋಪಕ್ಕೆ ತುತ್ತಾದರು.

ಅಧ್ಯಕ್ಷ ಬಿಡೆನ್‌ ಮತ್ತು ಹೋಮ್‌ ಲ್ಯಾಂಡ್ ಸೆಕ್ರೆಟರಿ ಸೆಕ್ರೆಟರಿ ಅಲೆಜಾಂಡ್ರೊ ಮೇಯೊರ್ಕಾಸ್, ಚೀಟಲ್ ಅವರ ಸೇವೆಗೆ ಧನ್ಯವಾದ ಅರ್ಪಿಸಿದ್ದಾರೆ. 23 ವರ್ಷಗಳಿಂದ ಏಜೆನ್ಸಿಯಲ್ಲಿ ಕೆಲಸ ಮಾಡಿರುವ ಉಪ ನಿರ್ದೇಶಕ ರೊನಾಲ್ಡ್ ರೋವ್ ಅವರು ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

ಚೀಟಲ್ ಅವರ ರಾಜೀನಾಮೆ ನಂತರ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ,ʼ ಬಿಡೆನ್ / ಹ್ಯಾರಿಸ್ ಆಡಳಿತ ನನ್ನನ್ನು ಸರಿಯಾಗಿ ರಕ್ಷಿಸಲಿಲ್ಲ. ನಾನು ಪ್ರಜಾಪ್ರಭುತ್ವಕ್ಕಾಗಿ ಬುಲೆಟ್ ತೆಗೆದುಕೊಳ್ಳಬೇಕಾಯಿತು. ಇದದು ನನಗೆ ಸಂದ ದೊಡ್ಡ ಗೌರವ,ʼ ಎಂದು ಬರೆದಿದ್ದಾರೆ.

Read More
Next Story