Indian passport : ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವವರಿಗೆ ಈ 57 ದೇಶಗಳಿಗೆ ವೀಸಾ ಬೇಕಾಗಿಲ್ಲ
x
ಭಾರತೀಯ ಪಾಸ್‌ಪೋರ್ಟ್‌

Indian passport : ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವವರಿಗೆ ಈ 57 ದೇಶಗಳಿಗೆ ವೀಸಾ ಬೇಕಾಗಿಲ್ಲ

Indian passport: ಮಲೇಷ್ಯಾ, ಕತಾರ್, ಶ್ರೀಲಂಕಾ, ಥೈಲ್ಯಾಂಡ್, ಭೂತಾನ್, ಮಾಲ್ಡೀವ್ಸ್, ಮಾರಿಷಸ್ ಮತ್ತು ಇತರ ದೇಶಗಳಲ್ಲಿ ಭಾರತೀಯ ಪ್ರಜೆಗಳು ವೀಸಾ ಇಲ್ಲದೇ ಭೇಟಿ ನೀಡಬಹುದು.


ಹೆನ್ಲಿ ಪಾಸ್‌ಪೋರ್ಟ್‌ ಸೂಚ್ಯಂಕ 2025ರ ಇತ್ತೀಚಿ ವರದಿ ಪ್ರಕಾರ, ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವವರು ವೀಸಾ ಮುಕ್ತವಾಗಿ 57 ದೇಶಗಳಿಗೆ ಪ್ರಯಾಣಿಸಬಹುದು. ಪ್ರತಿ ತಿಂಗಳು ನವೀಕರಿಸಲಾಗುವ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್‌ ಪಟ್ಟಿಯಲ್ಲಿ ಭಾರತವು ಐದು ಸ್ಥಾನಗಳನ್ನು ಕಳೆದುಕೊಂಡು 85ಕ್ಕೆ ತಲುಪಿದೆ. ಭಾರತ ಈಗ 57 ಅಂಕಗಳನ್ನು ಗಳಿಸಿದೆ.

ಮಲೇಷ್ಯಾ, ಕತಾರ್, ಶ್ರೀಲಂಕಾ, ಥೈಲ್ಯಾಂಡ್, ಭೂತಾನ್, ಮಾಲ್ಡೀವ್ಸ್, ಮಾರಿಷಸ್ ಮತ್ತು ಇತರ ದೇಶಗಳಿಗೆ ಭಾರತದ ಪಾಸ್‌ಪೋರ್ಟ್‌ ಹೊಂದಿರುವವರು ವೀಸಾ ರಹಿತವಾಗಿ ಭೇಟಿ ನೀಡಲು ಸಾಧ್ಯವಿದೆ.

ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕವು 199 ವಿವಿಧ ಪಾಸ್‌ಪೋರ್ಟ್‌ಗಳ ವೀಸಾ ಮುಕ್ತ ಪ್ರವೇಶವನ್ನು 227 ಪ್ರಯಾಣ ಸ್ಥಳಗಳಿಗೆ ಹೋಲಿಸುತ್ತದೆ. ಯಾವುದೇ ವೀಸಾ ಅಗತ್ಯವಿಲ್ಲದಿದ್ದರೆ ಆ ಪಾಸ್‌ಪೋರ್ಟ್‌ ಮೌಲ್ಯ = 1 ಸ್ಕೋರ್ ನೀಡುತ್ತದೆ. ಗಮ್ಯಸ್ಥಾನ ಪ್ರವೇಶಿಸುವಾಗ ನೀವು ವೀಸಾ ಆನ್ ಅರೈವಲ್ (ವಿಒಎ), ಸಂದರ್ಶಕರ ಪರವಾನಗಿ ಅಥವಾ ಎಲೆಕ್ಟ್ರಾನಿಕ್ ಟ್ರಾವೆಲ್ ಅಥಾರಿಟಿ (ಇಟಿಎ) ಪಡೆಯಬಹುದಾದರೆ ಇದು ಅನ್ವಯಿಸುತ್ತದೆ ಎಂದು ಹೆನ್ಲಿ ಮತ್ತು ಪಾರ್ಟ್‌ನರ್ಸ್‌ ಹೇಳಿದೆ.

ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌

ಇತ್ತೀಚಿನ ಹೆನ್ಲಿ ಪಾಸ್ಪೋರ್ಟ್‌ ಸೂಚ್ಯಂಕದ ಪ್ರಕಾರ, ಸಿಂಗಾಪುರವು ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್ ಅನ್ನು ಹೊಂದಿದೆ. ತನ್ನ ನಾಗರಿಕರಿಗೆ 195 ದೇಶಗಳಿಗೆ ವೀಸಾ ಮುಕ್ತ ಪ್ರವೇಶ ನೀಡುತ್ತದೆ. ಜಪಾನ್ 193 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಫಿನ್‌ಲೆಂಡ್‌ ಫ್ರಾನ್ಸ್, ಜರ್ಮನಿ, ಇಟಲಿ, ದಕ್ಷಿಣ ಕೊರಿಯಾ ಮತ್ತು ಸ್ಪೇನ್ 192 ಅಂಕಗಳೊಂದಿಗೆ ಮೂರನೇ ಸ್ಥಾನ ಹಂಚಿಕೊಂಡಿವೆ.

ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ವೀಸಾ ಮುಕ್ತ 57 ದೇಶಗಳ ಸಂಪೂರ್ಣ ಪಟ್ಟಿ ಇಲ್ಲಿದೆ

1. ಅಂಗೋಲಾ

2. ಬಾರ್ಬಡೋಸ್

3. ಭೂತಾನ್

4. ಬೊಲಿವಿಯಾ

5. ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್

6. ಬುರುಂಡಿ

7. ಕಾಂಬೋಡಿಯಾ

8. ಕೇಪ್ ವರ್ಡೆ ದ್ವೀಪಗಳು

9. ಕೊಮೊರೊ ದ್ವೀಪಗಳು

10. ಕುಕ್ ದ್ವೀಪಗಳು

11. ಜಿಬೌಟಿ

12. ಡೊಮಿನಿಕಾ

13. ಇಥಿಯೋಪಿಯಾ

14. ಫಿಜಿ

15. ಗ್ರೆನಡಾ

16. ಗಿನಿಯಾ-ಬಿಸ್ಸಾವ್

17. ಹೈಟಿ

18. ಇಂಡೋನೇಷ್ಯಾ

19. ಇರಾನ್

20. ಜಮೈಕಾ

21. ಜೋರ್ಡಾನ್

22. ಕಜಕಸ್ತಾನ್

23. ಕೀನ್ಯಾ

24. ಕಿರಿಬಾಟಿ

25. ಲಾವೋಸ್

26. ಮಕಾವೊ (ಎಸ್ಎಆರ್ ಚೀನಾ)

27. ಮಡಗಾಸ್ಕರ್

28. ಮಲೇಷ್ಯಾ

29. ಮಾಲ್ಡೀವ್ಸ್

30. ಮಾರ್ಷಲ್ ದ್ವೀಪಗಳು

31. ಮೌರಿಟಾನಿಯಾ

32. ಮಾರಿಷಸ್

33. ಮೈಕ್ರೊನೇಷಿಯಾ

34. ಮಾಂಟ್ಸೆರಾಟ್

35. ಮೊಜಾಂಬಿಕ್

36. ಮ್ಯಾನ್ಮಾರ್

37. ನೇಪಾಳ

38. ನಿಯು

39. ಪಲಾವ್ ಐಲ್ಯಾಂಡ್ಸ್‌

40. ಕತಾರ್

41. ರುವಾಂಡಾ

42. ಸಮೋವಾ

43. ಸೆನೆಗಲ್

44. ಸೀಶೆಲ್ಸ್

45. ಸಿಯೆರಾ ಲಿಯೋನ್

46. ಸೊಮಾಲಿಯಾ

47. ಶ್ರೀಲಂಕಾ

48. ಸೇಂಟ್ ಕಿಟ್ಸ್ ಮತ್ತು ನೆವಿಸ್

49. ಸೇಂಟ್ ಲೂಸಿಯಾ

50. ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್

51. ತಾಂಜೇನಿಯಾ

52. ಥೈಲ್ಯಾಂಡ್

53. ಟಿಮೋರ್-ಲೆಸ್ಟೆ

54. ಟ್ರಿನಿಡಾಡ್ ಮತ್ತು ಟೊಬಾಗೊ

55. ತುವಾಲು

56. ವನೌಟು

57. ಜಿಂಬಾಬ್ವೆ

Read More
Next Story