ಈ ಬಾರಿಯ ವ್ಯಾಲೆಂಟೇನ್ ಡೇಗೆ ಕೆಂಪು ಗುಲಾಬಿಯೋ.. ಕೇಸರಿ ಶಾಲೋ…
x

ಈ ಬಾರಿಯ ವ್ಯಾಲೆಂಟೇನ್ ಡೇಗೆ ಕೆಂಪು ಗುಲಾಬಿಯೋ.. ಕೇಸರಿ ಶಾಲೋ…

ಪ್ರೇಮಿಗಳ ದಿನ ಪಾಶ್ಚಾತ್ಯ ಸಂಸ್ಕೃತಿಯಾಗಿದ್ದು, ಅದನ್ನೇ ಪಾಲನೆ ಮಾಡೋದು ಸರಿಯಲ್ಲ ಅಂತಾ ಹಿಂದೂ ಸಂಘಟನೆಗಳು ಪ್ರತೀ ವರ್ಷವೂ ವಿರೋಧಿಸುತ್ತಲೇ ಬಂದಿದೆ.


Click the Play button to hear this message in audio format

ಫೆಬ್ರವರಿ ತಿಂಗಳು ಬಂದ್ರೆ ಸಾಕು, ಟೀನೇಜ್ ಹುಡುಗ-ಹುಡುಗಿಯರಿಗೆ, ಪ್ರೇಮಿಗಳಿಗೆ ಹಬ್ಬವೇ ಹಬ್ಬ. ಫೆಬ್ರವರಿ 14 ರಂದು ಆಚರಿಸಲ್ಪಡುವ ಪ್ರೇಮಿಗಳ ದಿನಾಚರಣೆಯ ಮುಂಚಿತವಾಗಿ ಪ್ರೇಮಿಗಳಿಗಾಗಿಯೇ ರೋಸ್ ಡೇ, ಪ್ರಾಮಿಸ್ ಡೇ, ಪ್ರಪೋಸ್ ಡೇ, ಚಾಕೋಲೇಟ್ ಡೇ ಹೀಗೆ ಹಲವಾರು ಡೇಗಳನ್ನು ಒಂದು ವಾರ ಆಚರಿಸಲಾಗುತ್ತದೆ.

ಒಂದು ಕಡೆ ಈ ಪ್ರೇಮಿಗಳ ದಿನಾಚರಣೆಯನ್ನು ರೊಮ್ಯಾಂಟಿಕ್ ಆಗಿ ಆಚರಿಸುವಲ್ಲಿ ಜೋಡಿಗಳು ತೊಡಗಿಕೊಂಡ್ರೆ ಇನ್ನೊಂದೆಡೆ ಇದು ಪಾಶ್ಚಾತ್ಯ ಸಂಸ್ಕೃತಿಯಾಗಿದ್ದು, ಅದನ್ನು ಪಾಲನೆ ಮಾಡೋದು ಸರಿಯಲ್ಲ ಅಂತಾ ಹಿಂದೂ ಸಂಘಟನೆಗಳು ಪ್ರತೀ ವರ್ಷವೂ ವಿರೋಧಿಸುತ್ತಲೇ ಬಂದಿದೆ. ಪ್ರೇಮಿಗಳ ದಿನದ ಬದಲಾಗಿ ತಂದೆ ತಾಯಿಗಳ ದಿನಾಚರಣೆ ಮಾಡಿ, ಗೋವುಗಳ ದಿವನ್ನಾಗಿ ಆಚರಿಸಿ, ಪುಲ್ವಾಮ ದಾಳಿಯ ದಿನದಂದು ಪ್ರೇಮಿಗಳ ದಿನವನ್ನು ಆಚರಿಸಿ ಸಂಭ್ರಮ ಪಡುವುದು ಬೇಡ ಎಂಬುವುದು ಕೆಲ ಹಿಂದೂ ಸಂಘಟನೆಗಳು ಈ ಪ್ರೇಮಿಗಳ ದಿನಕ್ಕೆ ಸಮರ ಸಾರುತ್ತಲೇ ಬಂದಿದೆ;

ಫೆ.14 ರಂದು ಪ್ರೇಮಿಗಳು ತಮ್ಮ ದಿನವನ್ನು ತಮ್ಮ ಸಂಗಾತಿಗಳೊಂದಿಗೆ ಆಚರಿಸುತ್ತಿರಬೇಕಾದ್ರೆ ಇತ್ತ ಯಾವುದೋ ಇದರ ವಿರುದ್ಧ ಗುಂಪೊಂದು ಪ್ರೇಮಿಗಳಿರುವ ಸ್ಥಳಕ್ಕೆ ನುಗ್ಗಿ ದಾಳಿ, ಹಲ್ಲೆ, ಬಲವಂತವಾಗಿ ಮದುವೆ ಮಾಡಿಸಿರುವ ಸಾಕಷ್ಟು ಸುದ್ದಿಗಳನ್ನು ನಾವು ಕೇಳುತ್ತಲೇ ಇರುತ್ತೇವೆ.

ಇನ್ನು ಇಂಥ ಘಟನೆಗಳು ಕರ್ನಾಟಕದಲ್ಲಿ ಹೆಚ್ಚಾಗಿ ಕಾಣಬಹುದು. ಅದರಲ್ಲೂ ಕೋಮು ಗಲಭೆಯನ್ನು ಎದುರಿಸುತ್ತಲೇ ಬಂದಿರುವ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಇಂಥಹ ಸಾಕಷ್ಟು ಘಟನೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಮಂಗಳೂರು ಪಬ್ ಮೇಲೆ ನಡೆದ ದಾಳಿ ಪ್ರಕರಣ ಕೂಡ ಒಂದಾಗಿದೆ.

2009 ರ ಮಂಗಳೂರು ಪಬ್ ದಾಳಿ

2009 ರಲ್ಲಿ ಪ್ರೇಮಿಗಳ ದಿನದಂದು ಮಂಗಳೂರು ಪಂಬ್ವೊಂದರಲ್ಲಿ ನಡೆದ ದಾಳಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸುದ್ದಿಯಾಗಿತ್ತು. 2009ರಲ್ಲಿ ಮಂಗಳೂರಿನ ಅಮ್ನೇಶಿಯಾ ಪಬ್ನಲ್ಲಿ ಯುವಕ, ಯುವತಿಯರ ಪಾರ್ಟಿ ಮಾಡುವುದಲ್ಲದೆ, ಕುಡಿದು ಅರೆಬೆತ್ತಲೆ ನರ್ತನದಲ್ಲಿ ತೊಡಗಿದ್ದರು ಎಂದು ಆರೋಪಿಸಿ ಶ್ರೀರಾಮಸೇನೆಯ 25ಕ್ಕೂ ಹೆಚ್ಚು ಕಾರ್ಯಕರ್ತರು ದಾಳಿ ನಡೆಸಿದ್ದರು. ಇವರ ಈ ದಾಂಧಲೆ ಪ್ರಕರಣವು ಆಗ ಭಾರಿ ಸುದ್ದಿಯನ್ನು ಮಾಡಿದ್ದು, ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈ ದಾಳಿಗೆ ಸಂಬಂಧಿಸಿದಂತ ಶ್ರೀ ರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವನ್ನು ಆರೋಪಿ ಎಂದು ಗುರಿತಿಸಲ್ಪಟ್ಟಿತ್ತು.

ಪ್ರೇಮಿಗಳ ದಿನದಂದು ನಾಯಿಗಳಿಗೆ ಮದುವೆ

ಪ್ರೇಮಿಗಳ ದಿನವನ್ನು ವಿರೋಧಿಸಿ ತಮಿಳುನಾಡಿನಲ್ಲಿ ನಾಯಿಗಳಿಗೆ ಮದುವೆ ಮಾಡಿಸಿರುವ ಒಂದು ವಿತ್ರದವಾದ ಘಟನೆ ಕೂಡ ನಡೆದಿತ್ತು. ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿ ಹಿಂದಿ ಮುನ್ನಾನಿ ಸದಸ್ಯರು ತಮಿಳುನಾಡಿನ ಶಿವಗಂಗಾದಲ್ಲಿ ನಾಯಿಗಳ ನಡುವೆ ಅಣಕು ವಿವಾಹ ಕಾರ್ಯಕ್ರಮಗಳನ್ನು ನಡೆಸಿರುವ ಘಟನೆ ಕಳೆದ ವರ್ಷ ನಡೆದಿತ್ತು.

ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಇಂಥಹ ಸಾಕಷ್ಟು ಘಟನೆಗರಳು ನಡೆದಿವೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಹಾಗೂ ಇತರ ಪಾರ್ಕ್ಗಳಲ್ಲಿ, ಮಾಲ್, ಪಬ್ಗಳಲ್ಲಿ ಹಿಂದೂ ಸೇನೆಯ ಕಾರ್ಯಕರ್ತರು ನುಗ್ಗಿ ದಾಂದಲೆ ಮಾಡುವ ನಿಟ್ಟಿನಲ್ಲಿ ಹಲವಾರು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೂಡ ಪ್ರತೀ ವರ್ಷ ತೆಗೆದುಕೊಳ್ಳುತ್ತಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದಿದ್ದು, ಇಂಥಹ ಘಟನೆಗಳ ವಿರುದ್ಧ ಸರಕಾರ ಬಲಪಂಥೀಯ ಹಿಂದೂ ಸಂಘಟನೆಗಳ ಮೇಲೆ ನಿಯಂತ್ರಣ ಸಾಧಿಸುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ.

Read More
Next Story