ನಾಳೆ ಯುವ - ಶ್ರೀದೇವಿ ಭೈರಪ್ಪ  ಅವರ ವಿಚ್ಛೇದನ ಅರ್ಜಿ ವಿಚಾರಣೆ
x
ಯುವರಾಜ್‌ಕುಮಾರ್‌ ದಂಪತಿ

ನಾಳೆ ಯುವ - ಶ್ರೀದೇವಿ ಭೈರಪ್ಪ ಅವರ ವಿಚ್ಛೇದನ ಅರ್ಜಿ ವಿಚಾರಣೆ

ವರನಟ ಡಾ.ರಾಜ್‌ಕುಮಾರ್‌ ಮನೆತನದ ಕುಡಿ ನಟ ಯುವರಾಜ್‌ ಕುಮಾರ್ ಅವರ ಡಿವೋರ್ಸ್‌ ಅರ್ಜಿಯ ವಿಚಾರಣೆ ಗುರುವಾರ ( ಜುಲೈ4) ಫ್ಯಾಮಿಲಿ ಕೋರ್ಟ್‌ನಲ್ಲಿ ನಡೆಯಲಿದೆ.


ವರನಟ ಡಾ.ರಾಜ್‌ಕುಮಾರ್‌ ಮನೆತನದ ಕುಡಿ ನಟ ಯುವರಾಜ್‌ ಕುಮಾರ್ ಅವರ ಡೈವೋರ್ಸ್‌ ಅರ್ಜಿಯ ವಿಚಾರಣೆ ಗುರುವಾರ ( ಜುಲೈ4) ಫ್ಯಾಮಿಲಿ ಕೋರ್ಟ್‌ನಲ್ಲಿ ನಡೆಯಲಿದ್ದು ಯುವ ಪತ್ನಿ ಶ್ರೀದೇವಿ ಭೈರಪ್ಪ ಅವರು ಹಾಜರಾಗುವ ಸಾಧ್ಯತೆ ಇದೆ.

ಕಳೆದ ಜೂನ್ 6ನೇ ತಾರೀಖು ಯುವರಾಜ್‌ ಕುಮಾರ್ ಅವರು ಶ್ರೀದೇವಿ ಭೈರಪ್ಪ ಅವರಿಂದ ವಿಚ್ಛೇದನ ಕೋರಿ ಅರ್ಜಿ ಹಾಕಿದ್ದರು. ವಿಚಾರಣೆ ನಡೆಸಿದ ಫ್ಯಾಮಿಲಿ ಕೋರ್ಟ್‌ ಮುಂದಿನ‌ ವಿಚಾರಣೆಯನ್ನು ಜುಲೈ 4ಕ್ಕೆ ನಿಗದಿ ಮಾಡಿತ್ತು. ಹೀಗಾಗಿ ನಾಳೆ ಯುವರಾಜ್ ಕುಮಾರ್, ಶ್ರೀದೇವಿ ಭೈರಪ್ಪ ವಿಚ್ಛೇದನ ಅರ್ಜಿಯ ವಿಚಾರಣೆ ಫ್ಯಾಮಿಲಿ ಕೋರ್ಟ್‌ನಲ್ಲಿ ನಿಗದಿಯಾಗಿದೆ.

ಯುವರಾಜ್ ಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದಕ್ಕೂ ಮುಂಚೆಯೇ ಶ್ರೀದೇವಿ ಅವರು ವಿದೇಶ ಪ್ರವಾಸ ಕೈಗೊಂಡಿದ್ದರು. ಯುವರಾಜ್ ಕುಮಾರ್ ಅವರ ಡವೋರ್ಸ್ ಅರ್ಜಿಯ ವಿಚಾರ ತಿಳಿದು ವಿದೇಶದಿಂದಲೇ ಪ್ರತಿಕ್ರಿಯೆ ಕೂಡ ನೀಡಿದ್ದರು. ಇದೀಗ ಶ್ರೀದೇವಿ ಅವರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ನಾಳೆ ಶ್ರೀದೇವಿ ಭೈರಪ್ಪ ಅವರು ಫ್ಯಾಮಿಲಿ ಕೋರ್ಟ್‌ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಯುವ ರಾಜ್‌ ಕುಮಾರ್ ಅವರು ಶ್ರೀದೇವಿ ಅವರಿಗೆ ಡೈವೋರ್ಸ್ ಕೊಡಲು ಒಪ್ಪಿದ್ದಾರೆ. ಆದರೆ ಶ್ರೀದೇವಿ ಅವರು ಇನ್ನೂ ಕೋರ್ಟ್‌ಗೆ ಉತ್ತರಿಸಿಲ್ಲ. ನೊಟೀಸ್‌ ಕೊಟ್ಟ ಬಳಿಕ ಶ್ರೀದೇವಿ ಅವರಿಗೆ ಕೋರ್ಟ್ ಪ್ರಶ್ನೆ ಮಾಡಲಿದೆ. ಅವರ ಪ್ರತಿಕ್ರಿಯೆ ಕೇಳಿ ನ್ಯಾಯಾಲಯ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ.

Read More
Next Story