ವಿಚ್ಛೇದನ ಕೋರಿ ಕೋರ್ಟ್‌ ಮೆಟ್ಟಿಲೇರಿದ ಯುವ ರಾಜ್‌ಕುಮಾರ್‌
x
ಯುವ ರಾಜ್​ಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ವಿಚ್ಛೇದನ ಕೋರಿ ಕೋರ್ಟ್‌ ಮೆಟ್ಟಿಲೇರಿದ ಯುವ ರಾಜ್‌ಕುಮಾರ್‌

ರಾಘವೇಂದ್ರ ರಾಜ್‌ ಕುಮಾರ್‌ ಅವರ ಎರಡನೇ ಪುತ್ರ ಯುವ ರಾಜ್​ಕುಮಾರ್ ಅವರು ಫ್ಯಾಮಿಲಿ ಕೋರ್ಟ್​​ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿರುವುದು ತಿಳಿದುಬಂದಿದೆ.


ಚಂದನ್ ಶೆಟ್ಟಿ, ನಿವೇದಿತಾ ಗೌಡ ಡೈವೋರ್ಸ್ ಸುದ್ದಿ ಬೆನ್ನಲೇ, ರಾಜ್‌ ಕುಮಾರ್‌ ಕುಟುಂಬದ ಕುಡಿ, ರಾಘವೇಂದ್ರ ರಾಜ್‌ ಕುಮಾರ್‌ ಅವರ ಎರಡನೇ ಪುತ್ರ ಯುವ ರಾಜ್​ಕುಮಾರ್ ಅವರು ಫ್ಯಾಮಿಲಿ ಕೋರ್ಟ್​​ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿರುವುದು ತಿಳಿದು ಬಂದಿದೆ.

ಕಳೆದ ಜೂ.6ರಂದು ಯುವ ರಾಜ್​ಕುಮಾರ್ ಅವರು ಫ್ಯಾಮಿಲಿ ಕೋರ್ಟ್​​ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಯುವರಾಜ್ ಕುಮಾರ್ ಅರ್ಜಿಯ ಹಿನ್ನೆಲೆಯಲ್ಲಿ ಯುವ ಅವರ ಪತ್ನಿ ಶ್ರೀದೇವಿ ಭೈರಪ್ಪಗೆ ಕೋರ್ಟ್​ನಿಂದ ನೋಟಿಸ್ ಜಾರಿಯಾಗಿದೆ. ವಿಚ್ಛೇದನದ ಕೇಸ್‌ನಲ್ಲಿ ಫ್ಯಾಮಿಲಿ ಕೋರ್ಟ್ ಮುಂದಿನ ಜುಲೈ ತಿಂಗಳ 4ನೇ ತಾರೀಕಿಗೆ ವಿಚಾರಣೆ ನಿಗದಿ ಮಾಡಿದೆ.

ಯುವ ಅವರ ಪತ್ನಿ ಶ್ರೀದೇವಿ ಭೈರಪ್ಪ ಅವರು ಮೂಲತಃ ಮೈಸೂರಿನವಾಗಿದ್ದು, ಇವರಿಬ್ಬರು ಸುಮಾರು 7ವರ್ಷಗಳಿಂದ ಪರಿಚಿತರು. 2019 ರಲ್ಲಿ ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದರು. ಶ್ರೀದೇವಿ ‘ಡಾ.ರಾಜ್​​ ಕುಮಾರ್​ ಸಿವಿಲ್​ ಸರ್ವೀಸ್​ ಅಕಾಡೆಮಿ’ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಆದರೆ ಈ ಜೋಡಿಗೆ ಮನಸ್ತಾಪವಿದ್ದು, ಕಳೆದ ಆರು ತಿಂಗಳಿನಿಂದ ಈ ಜೋಡಿ ಬೇರೆ ಬೇರೆ ವಾಸ ಮಾಡುತ್ತಿದ್ದಾರೆ. 2016ರಲ್ಲಿ ತೆರೆಕಂಡ ಯುವ ರಾಜ್‌ಕುಮಾರ್ ಅವರ ರನ್ ಆ್ಯಂಟನಿ ಚಿತ್ರದ ನಿರ್ಮಾಣದಲ್ಲಿ ಶ್ರೀದೇವಿ ಅವರು ಭಾಗಿಯಾಗಿದ್ದರು. ರನ್ ಆ್ಯಂಟನಿ ಪ್ರಮೋಷನ್‌ನಲ್ಲೂ ಶ್ರೀದೇವಿ ಭೈರಪ್ಪ ಅವರು ತೊಡಗಿಕೊಂಡಿದ್ದರು. ಆದರೆ ಹಲವು ತಿಂಗಳಿಂದ ಯುವ ಅವರ ಜೊತೆ ಶ್ರೀದೇವಿ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ಯುವ ರಾಜ್‌ಕುಮಾರ್‌ ನಟನೆಯ ʼಯುವʼ ಸಿನಿಮಾದ ಪ್ರಚಾರದ ವೇಳೆಯಲ್ಲಿ ಎಲ್ಲೂ ಕಾಣಿಸಿರಲಿಲ್ಲ.

Read More
Next Story