
ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ.
ಯಶ್ ಜನ್ಮದಿನಕ್ಕೆ 'ಟಾಕ್ಸಿಕ್' ಧಮಾಕಾ| ರಗಡ್ ಲುಕ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್
ಬೆಂಕಿಯ ಜ್ವಾಲೆಗಳ ನಡುವೆ ಯಶ್ ಅತ್ಯಂತ ರಗಡ್ ಹಾಗೂ ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ನಟ ಯಶ್ ಅವರು ಇಂದು 40ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. "ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್" ಎಂಬ ಟ್ಯಾಗ್‌ಲೈನ್ ಹೊಂದಿರುವ ಈ ಚಿತ್ರದ ಮೊದಲ ಟೀಸರ್‌ನಲ್ಲಿ ಬೋಲ್ಡ್ ಅವತಾರ ತಾಳಿದ್ದು, ಸೊಷಿಯಲ್ ಮಿಡಿಯಾದಲ್ಲಿ ಸಂಚಲನ ಎಬ್ಬಿಸಿದೆ.
ಟಾಕ್ಸಿಕ್ ಟೀಸರ್‌ನಲ್ಲಿ ಏನಿದೆ?
ಟೀಸರ್‌ನ ಆರಂಭದಲ್ಲಿ ಸ್ಮಶಾನವೊಂದರಲ್ಲಿ ಅಂತ್ಯಕ್ರಿಯೆ ನಡೆಯುತ್ತಿರುತ್ತದೆ. ಈ ವೇಳೆ ಬಂಧೂಕುಧಾರಗಳ ಗುಂಪೊಂದು ಸ್ಮಶಾನಕ್ಕೆ ಬೀಗ ಹಾಕಿ ಶಾಂತಿಯುತವಾಗಿ ಸಾಯಲು ಬಿಡಿ ಎಂದು ಎಚ್ಚರಿಸುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಕಾರೊಂದರಲ್ಲಿ ಕುಡುಕನ ಪ್ರವೇಶವಾಗುತ್ತದೆ. ಆತ ಕಾರಿನಿಂದ ಇಳಿಯುತ್ತಿದ್ದಂತೆ ಬಾಂಬ್ ಸ್ಫೋಟಿಸಲು ಸಜ್ಜಾಗುತ್ತಾನೆ. ವಿಭಿನ್ನವಾಗಿ ಮೂಡಿಬಂದಿರುವ ಈ ದೃಶ್ಯದಲ್ಲಿ ಕಾರು ಮೇಲಕ್ಕೆ ಕೆಳಕ್ಕೆ ಪುಟಿಯುತ್ತಾ ಒಳಗೆ ಏನೋ ನಡೆಯುತ್ತಿದೆ ಎಂಬ ಸುಳಿವು ನೀಡುತ್ತದೆ. ಕೊನೆಗೆ ಕಾರಿನಲ್ಲಿದ್ದ ಬಾಂಬ್ ಸ್ಫೋಟಗೊಂಡು ಗೂಂಡಾಗಳು ಬೆಂಕಿಗೆ ಆಹುತಿಯಾಗುತ್ತಾರೆ.
ಟಾಕ್ಸಿಕ್ ಟೀಸರ್ ಇಲ್ಲಿ ವೀಕ್ಷಿಸಿ
ರಗಡ್ ಲುಕ್‌ನಲ್ಲಿ ಯಶ್ ಎಂಟ್ರಿ
ಈ ಬೆಂಕಿಯ ಜ್ವಾಲೆಗಳ ನಡುವೆ ಯಶ್ ಅತ್ಯಂತ ರಗಡ್ ಹಾಗೂ ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದನೆಯ ಗಡ್ಡ, ಬಾಯಲ್ಲಿ ಸಿಗಾರ್ ಮತ್ತು ಕೈಯಲ್ಲಿ ಗನ್ ಹಿಡಿದು ಬ್ಲಾಕ್ ಟುಕ್ಸೆಡೋ ಧರಿಸಿರುವ ಯಶ್, ʻಡ್ಯಾಡಿ ಈಸ್ ಹೋಮ್ʼ ಎಂದು ಹೇಳುವ ಮೂಲಕ ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಇಲ್ಲಿ ಯಶ್ ಅವರ ಪಾತ್ರದ ಹೆಸರು 'ರಯಾ' ಎಂದು ಪರಿಚಯಿಸಲಾಗಿದೆ.
ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್ ದಾಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಇದು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿದ್ದು, ವಿಶ್ವದಾದ್ಯಂತ ಹಲವು ಭಾಷೆಗಳಲ್ಲಿ ಮಾರ್ಚ್ 19ರಂದು ಯುಗಾದಿ ಹಬ್ಬದಂದು ಬಿಡುಗಡೆಗೊಳ್ಳಲಿದೆ.

