ಟಾಕ್ಸಿಕ್ ಸೆಟ್‌ನ ಶರ್ಟ್‌ಲೆಸ್ ಕ್ಲಿಪ್ ವೈರಲ್ ; ಯಶ್ ಸ್ಟೈಲ್‌ಗೆ ಅಭಿಮಾನಿಗಳು ಫಿದಾ!
x

ಯಶ್‌ 

'ಟಾಕ್ಸಿಕ್' ಸೆಟ್‌ನ ಶರ್ಟ್‌ಲೆಸ್ ಕ್ಲಿಪ್ ವೈರಲ್ ; ಯಶ್ ಸ್ಟೈಲ್‌ಗೆ ಅಭಿಮಾನಿಗಳು ಫಿದಾ!

'ಟಾಕ್ಸಿಕ್' ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಶಿ, ರುಕ್ಮಿಣಿ ವಸಂತ್, ಅಕ್ಷಯ್ ಓಬೇರಾಯ್ ಮತ್ತು ಸುದೇವ್ ನಾಯರ್ ಸೇರಿದಂತೆ ತಾರಾಬಳಗವೇ ಇದೆ.


Click the Play button to hear this message in audio format

ʼಕೆಜಿಎಫ್: ಚಾಪ್ಟರ್-2ʼ ಯಶಸ್ಸಿನ ನಂತರ ಅಲ್ಪ ವಿರಾಮ ಪಡೆದಿದ್ದ ನಟ ಯಶ್ ಅವರು ಇದೀಗ 'ಟಾಕ್ಸಿಕ್'ನೊಂದಿಗೆ ಆಕ್ಷನ್‌ಗೆ ಮರಳಿದ್ದಾರೆ. ಬಹುನಿರೀಕ್ಷಿತ ಪ್ರಾಜೆಕ್ಟ್‌ ಆಗಿರುವ ಟಾಕ್ಸಿಕ್‌ ಚಿತ್ರವನ್ನು ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದಾರೆ.

ಇತ್ತೀಚೆಗೆ ಚಿತ್ರದ ಸೆಟ್‌ನಿಂದ ಒಂದು ತೆರೆಮರೆಯ ವಿಡಿಯೊ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸಂಚಲನ ಮೂಡಿಸಿದೆ. ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ ಯಶ್ ಅವರು ಬಾಲ್ಕನಿಯಲ್ಲಿ ಶರ್ಟ್‌ಲೆಸ್ ಆಗಿ ನಿಂತು, ಕ್ಯಾಶುಯಲ್ ಆಗಿ ಧೂಮಪಾನ ಮಾಡುತ್ತಿರುವುದು ವಿಡಿಯೊದಲ್ಲಿದೆ.

ಈ ಬಗ್ಗೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಒಬ್ಬ ಬಳಕೆದಾರರು ಅವರ ಸ್ಟೈಲ್ ನೋಡಿ! ಎಂದು ಬರೆದರೆ, ಇನ್ನೊಬ್ಬರು ರಾಕಿ ಭಾಯ್ ಸ್ಟೈಲ್ ಎಲ್ಲಕ್ಕಿಂತ ಭಿನ್ನವಾಗಿದೆ ಎಂದು ಬರೆದಿದ್ದಾರೆ. ಮೂರನೆಯವರು, ಓಹ್ ಮೈ ಗಾಡ್! ಟಾಕ್ಸಿಕ್ ಲೀಕ್ ವಿಡಿಯೊ.. ಯಶ್ ದಮ್ ಗುಡ್ ಆಗಿ ಕಾಣ್ತಿದ್ದಾರೆ! ಎಂದು ಉದ್ಗರಿಸಿದ್ದಾರೆ. ಈ ಚಿಕ್ಕ ಕ್ಲಿಪ್ ಅವರ ಬಹುನಿರೀಕ್ಷಿತ ಮರಳುವಿಕೆಯ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಟಾಕ್ಸಿಕ್‌ನಲ್ಲಿದೆ ತಾರೆಯರ ಬಳಗ

'ಟಾಕ್ಸಿಕ್' ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಶಿ, ರುಕ್ಮಿಣಿ ವಸಂತ್, ಅಕ್ಷಯ್ ಓಬೇರಾಯ್ ಮತ್ತು ಸುದೇವ್ ನಾಯರ್ ಸೇರಿದಂತೆ ಹೆಚ್ಚಿನ ತಾರಾಬಳಗವಿದೆ. ಕಿಯಾರಾ ಈಗಾಗಲೇ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಉಳಿದ ಕಲಾವಿದರು ಶೀಘ್ರದಲ್ಲೇ ಚಿತ್ರೀಕರಣದಲ್ಲಿ ಸೇರಿಕೊಳ್ಳುವ ನಿರೀಕ್ಷೆಯಿದೆ.

ತಮ್ಮ ವಿಶಿಷ್ಟ ಕಥೆ ಹೇಳುವ ಶೈಲಿ ಮತ್ತು ಸಿನಿಮೀಯ ವಾಸ್ತವಿಕತೆಗೆ ಹೆಸರುವಾಸಿಯಾದ ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್', ಯಶ್ ಅವರನ್ನು 'ಕೆಜಿಎಫ್' ಪಾತ್ರದಿಂದ ಹೊರತಾದ, ಆದರೆ ಅದೇ ಆಕರ್ಷಕ ಶಕ್ತಿಯಿಂದ ತುಂಬಿದ ತೀವ್ರವಾದ ಹೊಸ ಅವತಾರದಲ್ಲಿ ಪ್ರದರ್ಶಿಸಲಿದೆ.

ಬಿಡುಗಡೆ ದಿನಾಂಕ, ಬಾಕ್ಸ್ ಆಫೀಸ್ ಕ್ಲ್ಯಾಶ್

'ಟಾಕ್ಸಿಕ್' ಅನ್ನು ಏಕಕಾಲದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಲಾಗುತ್ತಿದ್ದು, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಡಬ್ಬಿಂಗ್ ಆವೃತ್ತಿಗಳನ್ನು ಬಿಡುಗಡೆ ಮಾಡಲು ಯೋಜಿಸಲಾಗಿದೆ. ಈ ಚಿತ್ರವು ಮಾರ್ಚ್ 19 ರಂದು ಯುಗಾದಿ ಮತ್ತು ಈದ್ ಹಬ್ಬಗಳೊಂದಿಗೆ ಹೊಂದಿಕೆಯಾಗುವಂತೆ ಅದ್ದೂರಿ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಿದ್ಧವಾಗಿದೆ. ಈ ಮೂಲಕ ಇದು ವರ್ಷದ ಅತ್ಯಂತ ನಿರೀಕ್ಷಿತ ಹಬ್ಬದ ಬಿಡುಗಡೆಗಳಲ್ಲಿ ಒಂದಾಗಿದೆ.

ವಿಶೇಷವಾಗಿ, ಯಶ್ ಅವರ 'ಟಾಕ್ಸಿಕ್' ಚಿತ್ರವು, ಸಂಜಯ್ ಲೀಲಾ ಬನ್ಸಾಲಿ ಅವರ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ನಟಿಸಿರುವ 'ಲವ್ & ವಾರ್' ಹಾಗೂ ಅಜಯ್ ದೇವಗನ್, ರಿತೇಶ್ ದೇಶಮುಖ್, ಅರ್ಷದ್ ವಾರ್ಸಿ ಮತ್ತು ಜಾವೇದ್ ಜಾಫ್ರಿ ನಟಿಸಿರುವ ಇಂದ್ರ ಕುಮಾರ್ ಅವರ 'ಧಮಾಲ್ 4' ಚಿತ್ರಗಳೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಸ್ಪರ್ಧೆಗೆ ಇಳಿಯಲಿದೆ.

Read More
Next Story