ದರ್ಶನ್ ಜೈಲಿನಲ್ಲಿರುವಾಗ ʻಶಾಸ್ತ್ರಿʼ ಸಿನಿಮಾ ರೀ- ರಿಲೀಸ್
x
ದರ್ಶನ್‌ ನಟನೆ ʻಶಾಸ್ತ್ರಿʼ ಸಿನಿಮಾ ರೀ- ರಿಲೀಸ್‌ ಆಗಲಿದೆ.

ದರ್ಶನ್ ಜೈಲಿನಲ್ಲಿರುವಾಗ ʻಶಾಸ್ತ್ರಿʼ ಸಿನಿಮಾ ರೀ- ರಿಲೀಸ್

ಈ ನಡುವೆ ದರ್ಶನ್ ನಟನೆಯ 2005 ರ ಹಿಟ್ ಸಿನಿಮಾ ʻಶಾಸ್ತ್ರಿʼ ಸಿನಿಮಾ ರೀ- ರಿಲೀಸ್ ಗೆ ಘೋಷಣೆಯಾಗಿದೆ. ವಿತರಕ ಶಂಕರ್ ಅವರು ದರ್ಶನ್ ನಟನೆಯ 2005 ರ ಹಿಟ್ ಸಿನಿಮಾ ಶಾಸ್ತ್ರಿ ರೀ- ರಿಲೀಸ್ ಘೋಷಿಸಿದ್ದಾರೆ.


ಕ್ಷುಲ್ಲಕ ಕಾರಣಕ್ಕೆ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಟ ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ ಜೈಲಿನ ಕಂಬಿ ಎಣಿಸುತ್ತಿದ್ದಾರೆ. ಇದರಿಂದ ದರ್ಶನ್‌ ಅಭಿಮಾನಿಗಳು ಕುಗ್ಗಿ ಹೋಗಿದ್ದಾರೆ. ಈ ನಡುವೆ ದರ್ಶನ್ ನಟನೆಯ 2005 ರ ಹಿಟ್ ʻಶಾಸ್ತ್ರಿʼ ಸಿನಿಮಾ ರೀ- ರಿಲೀಸ್ ಗೆ ಘೋಷಣೆಯಾಗಿದೆ.

ವಿತರಕ ಶಂಕರ್ ಅವರು ದರ್ಶನ್ ನಟನೆಯ 2005 ರ ಹಿಟ್ ಶಾಸ್ತ್ರಿ ಸಿನಿಮಾ ರೀ- ರಿಲೀಸ್ ಘೋಷಿಸಿದ್ದಾರೆ.

ಪಿ. ಎನ್ ಸತ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದ ರೌಡಿಸಂ ಸಿನಿಮಾ ಇದು. ದರ್ಶನ್ ಜೋಡಿಯಾಗಿ ಮಾನ್ಯ ನಟಿಸಿದ್ದರು. ಆಪ್ತ ಅಣಜಿ ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಸಾಧು ಕೋಕಿಲ ಸಂಗೀತ ಸಂಯೋಜನೆ ಮಾಡಿದ್ದು, 2005ರಲ್ಲಿ ಈ ಸಿನಿಮಾ ತೆರೆಕಂಡಿತ್ತು.

ವೈದ್ಯಕೀಯ ವಿದ್ಯಾರ್ಥಿ ನಂತರ ಹೇಗೆ ಗ್ಯಾಂಗ್ ಸ್ಟರ್ ಆಗುತ್ತಾನೆ ಎಂಬುದು ಚಿತ್ರದ ಕಥೆಯಾಗಿದೆ.

ಇನ್ನು ಸಿನಿಮಾ ರೀ-ರಿಲೀಸ್ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿತರಕರು, ದರ್ಶನ್ ಅವರ ಸದ್ಯದ ಪರಿಸ್ಥಿತಿಗೂ ಸಿನಿಮಾ ರಿ ರಿಲೀಸ್ ಮಾಡುತ್ತಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಸಡನ್​ ಪ್ಲ್ಯಾನ್​ ಅಲ್ಲ. ‘ಈ ವಾರ ಕನ್ನಡದ ಬೇರೆ ಯಾವ ಸಿನಿಮಾ ಕೂಡ ಬಿಡುಗಡೆ ಆಗುತ್ತಿಲ್ಲ.

ಹಾಗಾಗಿ ಚಿತ್ರಮಂದಿರದ ಮಾಲೀಕರು ರೀ-ರಿಲೀಸ್​ ಮಾಡಿ ಅಂತ ಮನವಿ ಮಾಡಿಕೊಂಡಿದ್ದಾರೆ. ರಾಜ್ಯಾದ್ಯಂತ 25ರಿಂದ 50 ಚಿತ್ರಮಂದಿರಗಳಲ್ಲಿ ‘ಶಾಸ್ತ್ರಿ’ ಸಿನಿಮಾ ಬಿಡುಗಡೆ ಮಾಡುತ್ತೇವೆ. ಗಲಭೆ ಆಗಬಹುದು ಅಂತ ಕೆಲವು ಚಿತ್ರಮಂದಿರದ ಮಾಲಿಕರು ಯೋಚನೆ ಮಾಡುತ್ತಿದ್ದಾರೆ. ದರ್ಶನ್​ ಜೈಲಿಗೆ ಹೋಗಿದ್ದಕ್ಕೂ ‘ಶಾಸ್ತ್ರಿ’ ಮರು ಬಿಡುಗಡೆ ಮಾಡುತ್ತಿರುವುದಕ್ಕೂ ಯಾವುದೇ ಸಂಬಂಧ ಇಲ್ಲ. 6 ತಿಂಗಳ ಹಿಂದೆಯೇ ಇದಕ್ಕೆ ತಯಾರಿ ಮಾಡಿಕೊಂಡಿದ್ದೆವು’ ಎಂದು ವಿ.ಎಂ. ಶಂಕರ್ ಅವರು ಹೇಳಿದ್ದಾರೆ.

Read More
Next Story