BuddyMoon| ಹನಿಮೂನ್ ಹಳೇಯದಾಯ್ತು, ಈಗೇನಿದ್ದರೂ ಬಡ್ಡಿಮೂನ್ ಜಮಾನಾ
x

ಬಡ್ಡಿಮೂನ್, ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ, ಹನಿಮೂನ್ ಟ್ರೆಂಡ್.

BuddyMoon| ಹನಿಮೂನ್ ಹಳೇಯದಾಯ್ತು, ಈಗೇನಿದ್ದರೂ 'ಬಡ್ಡಿಮೂನ್' ಜಮಾನಾ

ಹನಿಮೂನ್ ಸಂಪ್ರದಾಯಕ್ಕೆ ಬಿದ್ದಿದೆ ಬ್ರೇಕ್. ಏನಿದು ಹೊಸ ಕಾಲದ 'ಬಡ್ಡಿಮೂನ್' ಟ್ರೆಂಡ್? ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಸ್ನೇಹಿತರೊಂದಿಗೆ ಥೈಲ್ಯಾಂಡ್‌ನಲ್ಲಿ ಈ ವಿಶೇಷ ಪ್ರವಾಸವನ್ನು ಹೇಗೆ ಆಚರಿಸಿದರು.


Click the Play button to hear this message in audio format

ದಶಕಗಳಿಂದ ಭಾರತೀಯ ವಿವಾಹ ಸಂಸ್ಕೃತಿಯಲ್ಲಿ ಹನಿಮೂನ್ ಎಂದರೆ ಕೇವಲ ನವದಂಪತಿಗಳ ಏಕಾಂತದ ಪ್ರವಾಸ ಎಂದೇ ಗುರುತಿಸಿಕೊಳ್ಳುತ್ತಿತ್ತು. ಆದರೆ ಈಗ ಈ ಹಳೆಯ ಸಂಪ್ರದಾಯದ ಬೇಲಿಗಳು ಕಳಚುತ್ತಿವೆ. ದಕ್ಷಿಣ ಭಾರತದ ಖ್ಯಾತ ನಟರಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಕೋ ಸಮುಯಿಯ ಸುಂದರ ಬೀಚ್‌ಸೈಡ್ ವಿಲ್ಲಾದಲ್ಲಿ ತಮ್ಮ ಆಪ್ತ ಗೆಳೆಯರ ಬಳಗದೊಂದಿಗೆ ಬಡ್ಡಿಮೂನ್ ಆಚರಿಸಿಕೊಂಡ ಬಳಿಕ ಈ 'ಬಡ್ಡಿಮೂನ್' ಪರಿಕಲ್ಪನೆ ಭಾರಿ ಮುನ್ನೆಲೆಗೆ ಬಂದಿದೆ.

ಸಾಮಾನ್ಯವಾಗಿ ಮದುವೆಯ ನಂತರ ದಂಪತಿಗಳು ಮಾತ್ರ ಪ್ರವಾಸಕ್ಕೆ ಹೋಗುವುದು ರೂಢಿ. ಆದರೆ ಈ ತಾರಾ ಜೋಡಿ ತಮ್ಮ ಮದುವೆಯ ಸಂಭ್ರಮದ ನಂತರ ಆಪ್ತ ಸ್ನೇಹಿತರನ್ನು ಜೊತೆಗೂಡಿಸಿಕೊಂಡು ಥೈಲ್ಯಾಂಡ್‌ನ ವಿಲ್ಲಾವೊಂದರಲ್ಲಿ ಸಮಯ ಕಳೆದಿದ್ದಾರೆ. ಇದು ಕೇವಲ ಪ್ರವಾಸವಾಗಿರದೆ, ಮದುವೆಯ ನಂತರದ ಸುಂದರ ಕ್ಷಣಗಳನ್ನು ತಮ್ಮ 'ಆಯ್ದ ಕುಟುಂಬ' ಅಥವಾ ಆಪ್ತ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಹೊಸ ಟ್ರೆಂಡ್‌.

ಏನಿದು ಬಡ್ಡಿಮೂನ್?

ಜೆನ್-ಜಿ ತಲೆಮಾರಿನಲ್ಲಿ ಹೆಚ್ಚು ಜನಪ್ರಿಯವಾಗುತ್ತಿರುವ ಈ 'ಬಡ್ಡಿಮೂನ್', ಪ್ರೀತಿ ಮತ್ತು ಸ್ನೇಹ ಎರಡನ್ನೂ ಸಮಾನವಾಗಿ ಸಂಭ್ರಮಿಸುವ ಒಂದು ವೇದಿಕೆ. ಮದುವೆಯ ಗದ್ದಲದ ನಂತರ ಬರುವ ದಣಿವನ್ನು ಕೇವಲ ಏಕಾಂತದಲ್ಲಿ ಕಳೆಯುವ ಬದಲು, ಆಪ್ತ ಗೆಳೆಯರ ಹರಟೆ, ಸಮುದ್ರ ತೀರದ ನಡಿಗೆ ಮತ್ತು ಮೋಜಿನ ಆಟಗಳ ನಡುವೆ ಕಳೆಯುವುದು ಈ ಟ್ರೆಂಡ್‌ನ ವಿಶೇಷ.

ರಶ್ಮಿಕಾ ಮತ್ತು ವಿಜಯ್ ಈ ಬಗ್ಗೆ ಪ್ರತಿಕ್ರಿಯಿಸಿ, "ನಮಗೆ ಪ್ರವಾಸ ಎಂದರೆ ಪ್ರೀತಿಪಾತ್ರರ ಜೊತೆ ನೆನಪುಗಳನ್ನು ಸೃಷ್ಟಿಸುವುದು. ಸ್ನೇಹಿತರೊಂದಿಗೆ ಇರುವಾಗ ನಮಗೆ ಹೆಚ್ಚು ಆರಾಮದಾಯಕ ಮತ್ತು ನೈಜ ಅನುಭವ ಸಿಗುತ್ತದೆ," ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸ್ನೇಹಿತರ ಜೊತೆಗಿನ ಈ ಸಡಗರದ ನಡುವೆಯೂ ರಶ್ಮಿಕಾ ಮತ್ತು ವಿಜಯ್ ಪರಸ್ಪರರ ಕಂಪನಿಯನ್ನು ಆನಂದಿಸಲು ಮರೆಯಲಿಲ್ಲ. ಮುಂದಿನ ಐದು ವರ್ಷಗಳಲ್ಲಿ ತಾವು ಜಗತ್ತನ್ನು ಸುತ್ತುತ್ತಾ ಇಂತಹ ಸುಂದರ ಕ್ಷಣಗಳನ್ನು ಸೃಷ್ಟಿಸುತ್ತೇವೆ ಎಂದು ರಶ್ಮಿಕಾ ಭರವಸೆ ನೀಡಿದರೆ, ವಿಜಯ್ ಅವರು ತಮ್ಮ ಪತ್ನಿ ಸಾಮಾನ್ಯ ಕ್ಷಣಗಳನ್ನು ಅಸಾಮಾನ್ಯವನ್ನಾಗಿಸುವ ಶಕ್ತಿಯನ್ನು ಹೊಂದಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಬಡ್ಡಿಮೂನ್ ಎಂಬ ಪದ ಜಾಗತಿಕವಾಗಿ ಹೆಚ್ಚು ಚರ್ಚೆಗೆ ಬಂದಿದ್ದೇ ಜೆನ್ನಿಫರ್ ಅನಿಸ್ಟನ್ ಮತ್ತು ಜಸ್ಟಿನ್ ಥೆರಾಕ್ಸ್ಈ ಜೋಡಿಯಿಂದ. 2015 ರಲ್ಲಿ ಮದುವೆಯಾದ ನಂತರ, ಅವರು ತಮ್ಮ ಹನಿಮೂನ್‌ಗಾಗಿ ಬೋರಾ ದ್ವೀಪಕ್ಕೆ ಹೋಗಿದ್ದರು. ವಿಶೇಷವೆಂದರೆ, ಅವರು ಕೇವಲ ಇಬ್ಬರೇ ಹೋಗದೆ ತಮ್ಮ ಆಪ್ತ ಸ್ನೇಹಿತರಾದ ಕೋರ್ಟ್ನಿ ಕಾಕ್ಸ್ ಮತ್ತು ಜೇಸನ್ ಬೇಟ್‌ಮನ್ ಅವರನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದರು.

ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್

ಬಾಲಿವುಡ್ ನಟಿ ಮೌನಿ ರಾಯ್ ತಮ್ಮ ಮದುವೆಯ ನಂತರ ಕಾಶ್ಮೀರಕ್ಕೆ ಹನಿಮೂನ್‌ಗೆ ಹೋಗಿದ್ದಾಗ, ಅವರ ಕೆಲವು ಆಪ್ತ ಸ್ನೇಹಿತರು ಕೂಡ ಅಲ್ಲಿ ಹಾಜರಿದ್ದರು. ಹಿಮಭರಿತ ಪರ್ವತಗಳ ನಡುವೆ ಸ್ನೇಹಿತರೊಂದಿಗೆ ಅವರು ಸಂಭ್ರಮಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ರೋಹನ್ ಪ್ರೀತ್ ಸಿಂಗ್ ಮತ್ತು ನೇಹಾ ಕಕ್ಕರ್

ಗಾಯಕಿ ನೇಹಾ ಕಕ್ಕರ್ ತಮ್ಮ ಹನಿಮೂನ್ ಸಮಯದಲ್ಲಿ ದುಬೈನಲ್ಲಿ ತಮ್ಮ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರೊಂದಿಗೆ ಸಮಯ ಕಳೆದಿದ್ದರು.

ಜೆನ್-ಜಿ ಪ್ರಭಾವ

ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರು ಕೂಡ ಮದುವೆಯ ಆಯಾಸವನ್ನು ಕಳೆದುಕೊಳ್ಳಲು ಮತ್ತು ಮದುವೆಯ ಖರ್ಚನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಈ ಬಡ್ಡಿಮೂನ್ ಸಂಸ್ಕೃತಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮತ್ತು ವಿಜಯ್ ಅವರ ಪ್ರಕರಣದಲ್ಲಿ ಇದು ಹೆಚ್ಚು ಸುದ್ದಿಯಾಗಲು ಕಾರಣ, ಅವರು ಈ ಹೊಸ ತಲೆಮಾರಿನ ಪರಿಕಲ್ಪನೆಯನ್ನು ಬಹಿರಂಗವಾಗಿ ಬೆಂಬಲಿಸಿರುವುದು.

Read More
Next Story