
ವಿಷ್ಣು, ಉಪೇಂದ್ರ, ಶ್ರುತಿಗೆ ಇಂದು ಹುಟ್ಟುಹಬ್ಬದ ಸಂಭ್ರಮ
ಉಪೇಂದ್ರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಉಪೇಂದ್ರ ಅವರು ಈ ಚಿತ್ರದಲ್ಲಿ ಗೆರಿಲ್ಲಾ ವಾರ್ ಆಧರಿತ ಚಿತ್ರಕಥೆಯೊಂದಿಗೆ ತೆರೆ ಮೇಲೆ ಬರಲಿದ್ದಾರೆ.
ಇಂದು ಕನ್ನಡ ಸಿನಿಮಾ ರಂಗದ ಮೂವರು ದಿಗ್ಗಜರಿಗೆ ಹುಟ್ಟುಹಬ್ಬ ಸಂಭ್ರಮ. ಸಾಹಸಸಿಂಹ ಡಾ.ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಶ್ರುತಿ ಅವರಿಗೆ ಸೆ.18ರಂದು ಜನ್ಮದಿನ ಸಂಭ್ರಮ. ತಮ್ಮ ನೆಚ್ಚಿನ ನಟರ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿವಿಧೆಡೆ ವಿಶೇಷವಾಗಿ ರೀತಿಯಲ್ಲಿ ಆಚರಿಸುತ್ತಿದ್ದಾರೆ.
ಉಪೇಂದ್ರ
ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಸಿನಿಮಾಗಳನ್ನು ನೀಡಿದ ಉಪೇಂದ್ರ ಅವರು ಇಂದು 57 ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಚಿತ್ರರಂಗದಲ್ಲಿ ಹೊಸ ರೀತಿಯ ಆಲೋಚನೆಗೆ ನಾಂದಿ ಹಾಡಿರುವ ಉಪೇಂದ್ರ ಅವರು ‘ಶ್’, ‘ಎ’, ‘ಉಪೇಂದ್ರ’, ‘ತರ್ಲೆ ನನ್ಮಗ’ ಸಿನಿಮಾಗಳ ಮೂಲಕ ಹೆಚ್ಚು ಜನಪ್ರಿಯರಾದರು. ಬುಧವಾರ ರಾತ್ರಿಯೇ ಉಪೇಂದ್ರ ಅವರ ಅಭಿಮಾನಿಗಳು ಮನೆಯ ಮುಂದೆ ಜಮಾಯಿಸಿ ಜನ್ಮದಿನದ ಶುಭಾಶಯ ಕೋರಿದ್ದಾರೆ.
ಉಪೇಂದ್ರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್ ಅವರು ಉಪೇಂದ್ರ ಅವರ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರವು ಗೆರಿಲ್ಲಾ ವಾರ್ ಆಧರಿತವಾಗಿದೆ ಎಂದು ಹೇಳಲಾಗಿದೆ.
ಶ್ರುತಿ
ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ರುತಿ ಅವರು 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ‘ನಂಬಿದ್ರೆ ನಂಬಿ ಬಿಟ್ರೆ ಬಿಡಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು, ‘ಶ್ರುತಿ’ ಹೆಸರಿನ ಸಿನಿಮಾದ ಮೂಲಕ ಖ್ಯಾತಿ ಗಳಿಸಿದರು. ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಗುರುತಿಸಿಕೊಂಡಿದ್ದಾರೆ.