ಸೆನ್ಸಾರ್ ಮಂಡಳಿಯಿಂದ ಗ್ರೀನ್ ಸಿಗ್ನಲ್: ದಳಪತಿ ವಿಜಯ್ ‘ಜನ ನಾಯಗನ್’ ರಿಲೀಸ್ ಡೇಟ್ ಫಿಕ್ಸ್
ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಚಿತ್ರಕ್ಕೆ ಸಿಬಿಎಫ್‌ಸಿ 'ಎ' ಪ್ರಮಾಣಪತ್ರ ನೀಡಿದೆ. 3 ಗಂಟೆ 3 ನಿಮಿಷದ ಈ ಸಿನಿಮಾ ಜುಲೈನಲ್ಲಿ ತೆರೆಗೆ ಬರಲು ಸಜ್ಜಾಗಿದೆ.
ತಮಿಳುನಾಡಿನ ನೂತನ ಮುಖ್ಯಮಂತ್ರಿ, ದಳಪತಿ ಸಿ. ಜೋಸೆಫ್ ವಿಜಯ್ ಅವರ ಬಹುನಿರೀಕ್ಷಿತ ಹಾಗೂ ವೃತ್ತಿಜೀವನದ ಕೊನೆಯ ಚಿತ್ರ 'ಜನ ನಾಯಗನ್' ಬಿಡುಗಡೆಗೆ ಎದುರಾಗಿದ್ದ ಬಹುದೊಡ್ಡ ವಿಘ್ನ ನಿವಾರಣೆಯಾಗಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಕೊನೆಗೂ ಸೆನ್ಸಾರ್ ಪ್ರಮಾಣಪತ್ರ ನೀಡಿದ್ದು, ಜುಲೈ ತಿಂಗಳಲ್ಲೇ ಸಿನಿಮಾ ತೆರೆಗೆ ಬರುವ ಸಾಧ್ಯತೆ ದಟ್ಟವಾಗಿದೆ. ಆದರೆ, ಸೆನ್ಸಾರ್ ಮಂಡಳಿ ನೀಡಿರುವ ಪ್ರಮಾಣಪತ್ರ ವಿಜಯ್ ಅಭಿಮಾನಿಗಳಿಗೆ ಕೊಂಚ ಶಾಕ್ ನೀಡಿದೆ. ದೀರ್ಘಕಾಲದ ಕಾಯುವಿಕೆಯ ನಂತರ ಜು. 9 ಸಿಬಿಎಫ್‌ಸಿ 'ಜನ ನಾಯಗನ್' ಚಿತ್ರಕ್ಕೆ 'ಎ' ಪ್ರಮಾಣಪತ್ರವನ್ನು ನೀಡಿದೆ. ಈ ಅಧಿಕೃತ ಮಾಹಿತಿ ಈಗ ಸೆನ್ಸಾರ್ ಮಂಡಳಿಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಚಿತ್ರವು ಬರೋಬ್ಬರಿ 183 ನಿಮಿಷಗಳ (3 ಗಂಟೆ 3 ನಿಮಿಷ) ಸುದೀರ್ಘ ರನ್‌ಟೈಮ್ ಹೊಂದಿದೆ ಎಂದು ತಿಳಿದುಬಂದಿದೆ. ಆದರೆ, ಚಿತ್ರದ ಯಾವ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ ಎಂಬ ಕಟ್ ಲಿಸ್ಟ್ ಅನ್ನು ಮಂಡಳಿ ಇನ್ನು ಬಹಿರಂಗಪಡಿಸಿಲ್ಲ.
Next Story

