ರೋಮ್‌ನಲ್ಲಿ ರಶ್ಮಿಕಾ-ವಿಜಯ್ ಜೋಡಿ ನ್ಯೂ ಇಯರ್‌ ಸೆಲೆಬ್ರೇಶನ್‌
x

ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇಟಲಿಯ ರೋಮ್ ನಗರದಲ್ಲಿ ಒಟ್ಟಿಗೆ ರಜೆ ಕಳೆಯುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ರೋಮ್‌ನಲ್ಲಿ ರಶ್ಮಿಕಾ-ವಿಜಯ್ ಜೋಡಿ ನ್ಯೂ ಇಯರ್‌ ಸೆಲೆಬ್ರೇಶನ್‌

ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಇಟಲಿಯ ಐತಿಹಾಸಿಕ ನಗರ ರೋಮ್‌ನಿಂದ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದರು. ಅದರ ಬೆನ್ನಲ್ಲೇ ಈಗ ವಿಜಯ್ ದೇವರಕೊಂಡ ಕೂಡ ರೋಮ್ ನಗರದ ಫೋಟೋ ಹಂಚಿಕೊಂಡಿದ್ದಾರೆ.


Click the Play button to hear this message in audio format

ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ನಡುವಿನ ಪ್ರೇಮ ಪುರಾಣಕ್ಕೆ ಈಗ ಹೊಸ ರೆಕ್ಕೆಪುಕ್ಕಗಳು ಬಂದಿವೆ. ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಇಟಲಿಯ ಐತಿಹಾಸಿಕ ನಗರ ರೋಮ್‌ನಿಂದ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದರು. ಅದರ ಬೆನ್ನಲ್ಲೇ ಈಗ ವಿಜಯ್ ದೇವರಕೊಂಡ ಕೂಡ ರೋಮ್ ನಗರದ ಪ್ರೇಕ್ಷಣೀಯ ಸ್ಥಳಗಳಲ್ಲಿ ಸುತ್ತಾಡುತ್ತಿರುವ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

ವಿಜಯ್ ಹಂಚಿಕೊಂಡಿರುವ ಚಿತ್ರಗಳಲ್ಲಿ ಒಂದರಲ್ಲಿ ಯುವತಿಯೊಬ್ಬಳು ಅವರ ಹೆಗಲ ಮೇಲೆ ತಲೆ ಇಟ್ಟು ಕುಳಿತಿದ್ದು, ಆಕೆ ರಶ್ಮಿಕಾ ಮಂದಣ್ಣ ಅವರೇ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಹೊಸ ವರ್ಷದ ಶುಭಾಶಯ ಕೋರಿ ವಿಜಯ್ ಹಾಕಿರುವ ಭಾವುಕ ಬರಹವು ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಈ ಪ್ರವಾಸದ ನಡುವೆ ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದ ವಿಡಿಯೋ ತುಣುಕುಗಳು ಈಗ ವೈರಲ್ ಆಗುತ್ತಿವೆ. ಆ ವಿಡಿಯೋವೊಂದರಲ್ಲಿ ರಶ್ಮಿಕಾ ಅವರು ವಿಜಯ್‌ಗೆ ಸ್ವತಃ ಸಿಹಿ ತಿನ್ನಿಸುತ್ತಿರುವುದು ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಈ ಜೋಡಿ ಕಳೆದ ಅಕ್ಟೋಬರ್‌ನಲ್ಲಿಯೇ ಹೈದರಾಬಾದ್‌ನಲ್ಲಿ ಅತ್ಯಂತ ಖಾಸಗಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯೂ ಇದೆ. ಇದೀಗ ಇವರಿಬ್ಬರ ಮದುವೆಗೆ ಮುಹೂರ್ತ ನಿಗದಿಯಾಗಿದೆ ಎಂಬ ಬಲವಾದ ವದಂತಿ ಕೇಳಿಬರುತ್ತಿದೆ. ಮೂಲಗಳ ಪ್ರಕಾರ 2026ರ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದ ಐತಿಹಾಸಿಕ ಅರಮನೆಯೊಂದರಲ್ಲಿ ಇವರ ವಿವಾಹ ಮಹೋತ್ಸವ ನಡೆಯಲಿದೆ ಎನ್ನಲಾಗುತ್ತಿದೆ.

ವಿಶೇಷವೆಂದರೆ ಈ ಮದುವೆ ಸಮಾರಂಭಕ್ಕೆ ಯಾವುದೇ ಚಿತ್ರರಂಗದ ಗಣ್ಯರನ್ನು ಆಮಂತ್ರಿಸದೆ, ಕೇವಲ ಕುಟುಂಬದವರು ಮತ್ತು ಆಪ್ತ ಗೆಳೆಯರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ನಡೆಸಲು ತಯಾರಿ ನಡೆಸಲಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಸಂದರ್ಶನವೊಂದರಲ್ಲಿ ರಶ್ಮಿಕಾ ಅವರು ತಾವು ವಿಜಯ್ ಅವರನ್ನು ಮದುವೆಯಾಗಲು ಬಯಸುವುದಾಗಿ ಹೇಳಿಕೊಂಡಿದ್ದರು. ಸದ್ಯಕ್ಕೆ ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡದಿದ್ದರೂ, ರೋಮ್ ಪ್ರವಾಸದ ಫೋಟೋಗಳು ಮತ್ತು ಉದಯಪುರದ ಮದುವೆಯ ಸುದ್ದಿಗಳು ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿವೆ.

ರಾಜಸ್ಥಾನದ ಉದಯ್‌ಪುರದ ಐತಿಹಾಸಿಕ ಅರಮನೆಯೊಂದರಲ್ಲಿ ಇವರ ವಿವಾಹ ಮಹೋತ್ಸವ ಜರುಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಒಂದು ಪಾರಂಪರಿಕ ಹೋಟೆಲ್ ಅನ್ನು ಮದುವೆಗಾಗಿ ಅಂತಿಮಗೊಳಿಸಲಾಗಿದ್ದು, ಫೆಬ್ರವರಿ ತಿಂಗಳಲ್ಲಿ ಮದುವೆ ನಡೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇವರ ನಿಶ್ಚಿತಾರ್ಥದಂತೆಯೇ ಮದುವೆಯೂ ಕೂಡ ಅತ್ಯಂತ ಸರಳವಾಗಿ ಮತ್ತು ಖಾಸಗಿಯಾಗಿ ನಡೆಯಲಿದ್ದು, ಕೇವಲ ಆಪ್ತರು ಮತ್ತು ಕುಟುಂಬದ ಸದಸ್ಯರು ಮಾತ್ರ ಭಾಗವಹಿಸಲಿದ್ದಾರೆ. ಹೈದರಾಬಾದ್‌ನಲ್ಲಿ ಚಿತ್ರರಂಗದ ಸ್ನೇಹಿತರಿಗಾಗಿ ಅದ್ಧೂರಿ ಔತಣಕೂಟ ಏರ್ಪಡಿಸುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

Read More
Next Story