
ವರುಣ್ ಧವನ್
ಬಾರ್ಡರ್ 2' ನಲ್ಲಿ ವರುಣ್ ಧವನ್; 'ಮೇಜರ್ ಹೋಶಿಯಾರ್ ಸಿಂಗ್ ದಹಿಯಾ' ಪಾತ್ರದ ಫಸ್ಟ್ ಲುಕ್ ಔಟ್
ವರುಣ್ ಧವನ್ ಅವರ 'ಮೇಜರ್ ಹೋಶಿಯಾರ್ ಸಿಂಗ್ ದಹಿಯಾ' ಪಾತ್ರದ ಈ ಫಸ್ಟ್‌ಲುಕ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
"ಸಂದೇಸೇ ಆತೇ ಹೈ, ಹುಮೇನ್ ತಡ್ಪತೇ ಹೈ..." – 1997 ರಲ್ಲಿ ತೆರೆಕಂಡ ಬಾರ್ಡರ್ ಚಿತ್ರದ ಈ ಹಾಡು ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತದೆ. ಸುನಿಲ್ ಶೆಟ್ಟಿ, ಅಕ್ಷಯ್ ಖನ್ನಾ, ಜಾಕಿ ಶ್ರಾಫ್ ಸೇರಿದಂತೆ ಹಲವು ತಾರೆಯರು ದೇಶದ ಗಡಿ ಕಾಯುವ ಸೈನಿಕರ ಪಾತ್ರದಲ್ಲಿ ಜೀವ ತುಂಬಿದ್ದ ಈ ಐತಿಹಾಸಿಕ ಚಿತ್ರದ ಪ್ರತಿ ದೃಶ್ಯವೂ ಇಂದಿಗೂ ಜನಪ್ರಿಯ.
ಸುಮಾರು 28 ವರ್ಷಗಳ ಬಳಿಕ, 2024 ರಲ್ಲಿ ತಯಾರಕರು ಬಾರ್ಡರ್- 2 ಸಿನಿಮಾ ಘೋಷಿಸಿದಾಗ ಪ್ರೇಕ್ಷಕರಲ್ಲಿ ಮರಳಿ ಅದೇ ಸಂತಸ ಮನೆ ಮಾಡಿತ್ತು. ಸನ್ನಿ ಡಿಯೋಲ್ ಅವರ ಲುಕ್ ಅನಾವರಣಗೊಂಡಿದ್ದು, ಇದೀಗ ಸಿನಿಮಾ ನಿರ್ಮಾಮಪಕರು ಇದೀಗ ಅಭಿಮಾನಿಗಳಿಗೆ ಮತ್ತೊಂದು ದೊಡ್ಡ ಅಚ್ಚರಿಯನ್ನು ನೀಡಿದ್ದಾರೆ. ಈ ಬಹುನಿರೀಕ್ಷಿತ ಯುದ್ಧ ನಾಟಕದಲ್ಲಿ ನಟ ವರುಣ್ ಧವನ್ ಅವರ ಮೊದಲ ನೋಟದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಅದು ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ದೇಶ ರಕ್ಷಣೆಗಾಗಿ ಸಿದ್ಧರಾದ ವರುಣ್ ಧವನ್
ಬಾರ್ಡರ್- 2 ನಿರ್ಮಾಪಕರಾದ ಟಿ-ಸೀರಿಸ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವರುಣ್ ಧವನ್ ಅವರ ಫಸ್ಟ್ ಲುಕ್ ಹಂಚಿಕೊಂಡಿದೆ. ಈ ಪೋಸ್ಟರ್‌ನಲ್ಲಿ ವರುಣ್ ಧವನ್ ಅವರು ಮಿಲಿಟರಿ ಸಮವಸ್ತ್ರ ಧರಿಸಿ, ಕೈಯಲ್ಲಿ ಬಂದೂಕು ಹಿಡಿದು, ಶತ್ರುಗಳ ಮೇಲೆ ದಾಳಿ ಮಾಡಲು ಮುನ್ನುಗ್ಗುತ್ತಿರುವ ಮೇಜರ್ ಹೋಶಿಯಾರ್ ಸಿಂಗ್ ದಹಿಯಾ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ತೀಕ್ಷ್ಣವಾದ ಮತ್ತು ಧೈರ್ಯಶಾಲಿ ನೋಟವು ದೇಶವನ್ನು ರಕ್ಷಿಸಲು ಅವರು ಸಿದ್ಧರಾಗಿರುವಂತೆ ತೋರಿಸುತ್ತದೆ.
ಪೋಸ್ಟರ್ ಹಂಚಿಕೊಂಡು ತಯಾರಕರು, "ಗಡಿ ಅವನ ಕರ್ತವ್ಯ, ಮತ್ತು ಭಾರತ ಅವನ ಪ್ರೀತಿ" ಎಂದು ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟರ್ ಅನ್ನು ನೋಡಿದ ಅಭಿಮಾನಿಗಳು ಈಗಾಗಲೇ ಅತೀವ ಉತ್ಸುಕರಾಗಿದ್ದು, ಟ್ರೇಲರ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
ನಿಜ ಜೀವನದ ವೀರನ ಪಾತ್ರದಲ್ಲಿ ವರುಣ್
ಚಿತ್ರದಲ್ಲಿ ವರುಣ್ ಧವನ್ ನಿರ್ವಹಿಸುತ್ತಿರುವ ಪಾತ್ರವು ನಿಜ ಜೀವನದ ಸೈನಿಕರಾದ ಕರ್ನಲ್ ಹೋಶಿಯಾರ್ ಸಿಂಗ್ ದಹಿಯಾ ಅವರ ಮೇಲೆ ಆಧಾರಿತವಾಗಿದೆ. 1971 ರ ಇಂಡೋ-ಪಾಕಿಸ್ತಾನಿ ಯುದ್ಧದಲ್ಲಿ ತಮ್ಮ ಶೌರ್ಯಕ್ಕಾಗಿ ಇವರು ಭಾರತದ ಅತ್ಯುನ್ನತ ಮಿಲಿಟರಿ ಗೌರವವಾದ ಪರಮ ವೀರ ಚಕ್ರವನ್ನು ಪಡೆದಿದ್ದರು.
'ಬಾರ್ಡರ್ 2' ಬಿಡುಗಡೆ ಯಾವಾಗ?
ಸನ್ನಿ ಡಿಯೋಲ್, ವರುಣ್ ಧವನ್ ಮತ್ತು ದಿಲ್ಜಿತ್ ದೋಸಾಂಜ್ ಪ್ರಮುಖ ಪಾತ್ರಗಳಲ್ಲಿರುವ ಈ ಸಿನಿಮಾ ಮುಂದಿನ ವರ್ಷ ಜನವರಿ 23 ರಂದು, ಗಣರಾಜ್ಯೋತ್ಸವದ ವಾರದಲ್ಲಿ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ವರುಣ್ ಧವನ್ ಅವರ 'ಮೇಜರ್ ಹೋಶಿಯಾರ್ ಸಿಂಗ್ ದಹಿಯಾ' ಪಾತ್ರದ ಈ ಫಸ್ಟ್‌ಲುಕ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಬಳಕೆದಾರರು 1000 ಕೋಟಿ ರೂ. ಲೋಡ್ ಆಗುತ್ತಿದೆ ಬಾರ್ಡರ್ 2, ವರುಣ್ ಧವನ್ ಸರ್, ಅದ್ಭುತ ನೋಟ" ಮತ್ತು "ಆಲ್ ದಿ ಬೆಸ್ಟ್, ಆಕ್ಷನ್‌ಗಾಗಿ ಕಾಯಲು ಸಾಧ್ಯವಿಲ್ಲ" ಎಂದು ಕಮೆಂಟ್ ಮಾಡಿದ್ದಾರೆ.

