ʻರಾಧಾ ರಮಣʼ ನಟಿ ಕಾವ್ಯ ಗೌಡ ಮೇಲೆ ಭೀಕರ ಹಲ್ಲೆ, ಪತಿಗೂ ಇರಿತ
x

ಭವ್ಯಾ ಗೌಡ ಅವರು ನೀಡಿದ ದೂರಿನ ವಿವರದ ಪ್ರಕಾರ, ಅವರ ತಂಗಿ ಕಾವ್ಯ ಗೌಡ ಅವರು ಸಂಜೆ ಸುಮಾರು 6.30 ಗಂಟೆಗೆ ಕರೆ ಮಾಡಿ ತಮಗೆ ತೊಂದರೆಯಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು.

ʻರಾಧಾ ರಮಣʼ ನಟಿ ಕಾವ್ಯ ಗೌಡ ಮೇಲೆ ಭೀಕರ ಹಲ್ಲೆ, ಪತಿಗೂ ಇರಿತ

'ರಾಧಾ ರಮಣ' ಧಾರಾವಾಹಿ ಖ್ಯಾತಿಯ ನಟಿ ಕಾವ್ಯ ಗೌಡ ಮತ್ತು ಅವರ ಪತಿ ಸೋಮಶೇಖರ್ ಮೇಲೆ ಬೆಂಗಳೂರಿನಲ್ಲಿ ಕೌಟುಂಬಿಕ ಹಲ್ಲೆ ನಡೆದಿದೆ. ಈ ಬಗ್ಗೆ ಸಹೋದರಿ ಭವ್ಯಾ ಗೌಡ ಅವರು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


Click the Play button to hear this message in audio format

‘ರಾಧಾ ರಮಣ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನಟಿ ಕಾವ್ಯ ಗೌಡ ಅವರ ಕುಟುಂಬದಲ್ಲಿ ಕೌಟುಂಬಿಕ ಕಲಹ ಉಂಟಾಗಿದ್ದು, ನಟಿ ಮತ್ತು ಅವರ ಪತಿ ಸೋಮಶೇಖರ್ ಮೇಲೆ ಹಲ್ಲೆ ನಡೆದಿದೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಾವ್ಯ ಗೌಡ ಅವರ ಸಹೋದರಿ ಭವ್ಯಾ ಗೌಡ ಅವರು ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಎಫ್‌ಐಆರ್ ದಾಖಲಾಗಿದೆ.

ಪತಿಯ ಮನೆಯವರಿಂದಲೇ ಹಲ್ಲೆ

ಭವ್ಯಾ ಗೌಡ ಅವರು ನೀಡಿದ ದೂರಿನ ವಿವರದ ಪ್ರಕಾರ, ಅವರ ತಂಗಿ ಕಾವ್ಯ ಗೌಡ ಅವರು ಸಂಜೆ ಸುಮಾರು 6.30 ಗಂಟೆಗೆ ಕರೆ ಮಾಡಿ ತಮಗೆ ತೊಂದರೆಯಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಸೋಮಶೇಖರ್ ಅವರ ಸಹೋದರ ನಂದೀಶ್, ಅವರ ಪತ್ನಿ ಪ್ರೇಮಾ ಮತ್ತು ಪ್ರೇಮಾ ಅವರ ತಂದೆ ರವಿಕುಮಾರ್ ಅವರು ತಮ್ಮ ಮೇಲೆ ಕೆಟ್ಟ ಪದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಾವ್ಯ ತಿಳಿಸಿದ್ದರು. ಈ ವಿಷಯ ತಿಳಿದ ಕೂಡಲೇ ಭವ್ಯಾ ಅವರು ಸ್ಥಳಕ್ಕೆ ಹೊರಟಿದ್ದು, ಮಾರ್ಗಮಧ್ಯೆ ಕಾವ್ಯ ಮತ್ತೆ ಕರೆ ಮಾಡಿ ಆರೋಪಿಗಳು ತಮ್ಮ ಮೇಲೆ ಮತ್ತು ಪತಿ ಸೋಮಶೇಖರ್ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಹಾಗೂ ಚಾಕುವಿನಿಂದ ತಿವಿಯಲು ಯತ್ನಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ರಾತ್ರಿ ಸುಮಾರು 8.45 ಗಂಟೆಯ ವೇಳೆಗೆ ಭವ್ಯಾ ಅವರು ರಾಮಮೂರ್ತಿನಗರದ ಎನ್‌.ಆರ್‌.ಐ ಲೇಔಟ್‌ನಲ್ಲಿರುವ ಕಾವ್ಯ ಅವರ ಮನೆಗೆ ತಲುಪಿದಾಗ, ಅಲ್ಲಿ ಗಲಾಟೆ ಮುಂದುವರಿದಿತ್ತು. ಹಲ್ಲೆ ಮಾಡುತ್ತಿದ್ದವರನ್ನು ಪ್ರಶ್ನಿಸಿದಾಗ, ಆರೋಪಿಗಳಾದ ನಂದೀಶ್, ಪ್ರೇಮಾ ಮತ್ತು ರವಿಕುಮಾರ್ ಅವರು ಭವ್ಯಾ ಅವರಿಗೂ ಕೆಟ್ಟ ಪದಗಳಿಂದ ನಿಂದಿಸಿ, ಕೈಗಳಿಂದ ಹೊಡೆದು, ಕುತ್ತಿಗೆ ಹಿಡಿದು ಕಾಲಿನಿಂದ ಒದ್ದಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಅಲ್ಲದೆ, ನಿಮ್ಮ ಮನೆಯವರನ್ನು ಸಾಯಿಸದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಭವ್ಯಾ ಅವರನ್ನೂ ಅಕ್ರಮವಾಗಿ ತಡೆದು ನಿಲ್ಲಿಸಲಾಗಿತ್ತು ಎನ್ನಲಾಗಿದೆ.

ಕಾವ್ಯ ಗೌಡ ಮತ್ತು ಪತಿ ಸೋಮಶೇಖರ್ ಅವರು ಸೋಮಶೇಖರ್ ಅವರ ಸಹೋದರ ನಂದೀಶ್ ಮತ್ತು ಅವರ ಪತ್ನಿ ಪ್ರೇಮಾ ಅವರೊಂದಿಗೆ ಒಂದೇ ಮನೆಯಲ್ಲಿ ಕೂಡು ಕುಟುಂಬವಾಗಿ ವಾಸವಿದ್ದರು. ಮೂಲಗಳ ಪ್ರಕಾರ, ಕಾವ್ಯ ಗೌಡ ಅವರ ಮಗಳನ್ನು ನೋಡಿಕೊಳ್ಳುವ ಕೆಲಸದ ಹುಡುಗಿ ವಿಚಾರದಲ್ಲಿ ಓರಗಿತ್ತಿ ಪ್ರೇಮಾ ಮತ್ತು ಕಾವ್ಯ ನಡುವೆ ಜಗಳ ಶುರುವಾಗಿದೆ. ಕೆಲಸದ ಹುಡುಗಿ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಿದ ವಿಷಯವು ಮಾತಿಗೆ ಮಾತು ಬೆಳೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ ಎನ್ನಲಾಗಿದೆ.

ಪ್ರಾಣಾಪಾಯದಿಂದ ಪಾರಾದ ಪತಿ

ನಟಿಗೆ ಗಂಭೀರ ಬೆದರಿಕೆ ದೂರಿನಲ್ಲಿ ಉಲ್ಲೇಖಿಸಿರುವಂತೆ, ಸಂಜೆ ವೇಳೆ ಜಗಳ ವಿಕೋಪಕ್ಕೆ ಹೋದಾಗ ಪ್ರೇಮಾ ಅವರ ತಂದೆ ರವಿಕುಮಾರ್ ಅವರು ಕಾವ್ಯ ಗೌಡ ಅವರಿಗೆ ಅಸಭ್ಯವಾಗಿ ನಿಂದಿಸಿ, "ನನಗೆ ರಾಜಕೀಯ ಪವರ್ ಇದೆ, ನಿನ್ನನ್ನು ನೂರು ಜನರ ಮುಂದೆ ಅತ್ಯಾಚಾರ ಮಾಡಿಸುತ್ತೇನೆ" ಎಂದು ರೇಪ್ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಇದೇ ವೇಳೆ ಸೋಮಶೇಖರ್ ಅವರ ಮೇಲೆ ಚಾಕುವಿನಿಂದ ಇರಿಯಲು ಯತ್ನಿಸಿದ್ದು, ಸದ್ಯ ಸೋಮಶೇಖರ್ ಅವರು ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ತಂಗಿಯ ಕರೆ ಕೇಳಿ ಸ್ಥಳಕ್ಕೆ ಧಾವಿಸಿದ ಭವ್ಯಾ ಗೌಡ ಅವರ ಮೇಲೂ ಆರೋಪಿಗಳಾದ ನಂದೀಶ್, ಪ್ರೇಮಾ ಮತ್ತು ರವಿಕುಮಾರ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಭವ್ಯಾ ಅವರ ಕುತ್ತಿಗೆ ಹಿಡಿದು ಕಾಲಿನಿಂದ ಒದ್ದು, ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಸದ್ಯ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದು, ಇತ್ತ ಪ್ರೇಮಾ ಅವರ ಕಡೆಯಿಂದಲೂ ಪ್ರತಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

Read More
Next Story