ಕಲರ್ಸ್‌ ಕನ್ನಡದಲ್ಲಿ ಇದೇ ಜ.27ರಿಂದ ಎರಡು ವಿಭಿನ್ನ ಧಾರಾವಾಹಿಗಳ ಪ್ರಸಾರ ಆರಂಭ
x

 ಕಲರ್ಸ್‌ ಕನ್ನಡ ವಾಹಿನಿ, ಇದೀಗ ಎರಡು ಮನಮಿಡಿಯೋ ಹೊಸ ಕಥೆಗಳನ್ನು ನಿಮ್ಮ ಮಡಿಲಿಗೆ ಹಾಕಲು ಸಜ್ಜಾಗಿದೆ.

ಕಲರ್ಸ್‌ ಕನ್ನಡದಲ್ಲಿ ಇದೇ ಜ.27ರಿಂದ ಎರಡು ವಿಭಿನ್ನ ಧಾರಾವಾಹಿಗಳ ಪ್ರಸಾರ ಆರಂಭ

‘ಗೌರಿ ಕಲ್ಯಾಣ’ ಧಾರಾವಾಹಿಯನ್ನು ಖ್ಯಾತ ನಿರ್ಮಾಪಕ ರಾಮ್‌ಜಿ ನಿರ್ಮಿಸುತ್ತಿದ್ದು, ಭರತ್ ಕುಮಾರ್ ಎನ್. ಮೈಸೂರು ನಿರ್ದೇಶಿಸುತ್ತಿದ್ದಾರೆ.


Click the Play button to hear this message in audio format

ಕನ್ನಡ ಕಿರುತೆರೆ ವೀಕ್ಷಕರಿಗೆ ಸದಾ ಮನರಂಜನೆಯ ರಸದೌತಣ ನೀಡುವಲ್ಲಿ ಮುಂಚೂಣಿಯಲ್ಲಿರುವ ಕಲರ್ಸ್‌ ಕನ್ನಡ ವಾಹಿನಿ, ಇದೀಗ ಹೊಸ ವರ್ಷದ ಆರಂಭದಲ್ಲೇ ಎರಡು ಅದ್ಭುತ ಕಥೆಗಳನ್ನು ಹೊತ್ತು ತರುತ್ತಿದೆ. ತಾಯಿಯ ಹಂಬಲ ಮತ್ತು ಅಣ್ಣನ ತ್ಯಾಗದ ಭಿನ್ನ ಹಂದರದ ಕಥೆಗಳನ್ನು ಹೊಂದಿರುವ ‘ಗೌರಿ ಕಲ್ಯಾಣ’ ಮತ್ತು ‘ಪವಿತ್ರ ಬಂಧನ’ ಇದೇ ಜನವರಿ 27ರ ಮಂಗಳವಾರದಿಂದ ಪ್ರಸಾರವಾಗಲು ಸಜ್ಜಾಗಿವೆ.

ಗೌರಿ ಕಲ್ಯಾಣ

‘ಗೌರಿ ಕಲ್ಯಾಣ’ ಧಾರಾವಾಹಿಯು ಮಧ್ಯಮ ವರ್ಗದ ಸಂಪ್ರದಾಯಸ್ಥ ಕುಟುಂಬದ ಕಥೆಯಾಗಿದೆ. ಕಾಂತಲಕ್ಷ್ಮೀ ಎಂಬ ತಾಯಿಗೆ ಮೋನಿಕಾ, ಗೌರಿ ಮತ್ತು ಚಿನ್ಮಯಿ ಎಂಬ ಮೂವರು ಸುಂದರ ಹೆಣ್ಣುಮಕ್ಕಳು. ಬಡತನದ ಕಷ್ಟಗಳನ್ನು ಉಂಡಿರುವ ಕಾಂತಲಕ್ಷ್ಮಿಗೆ ತನ್ನ ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕು ಮತ್ತು ಅವರು ದೊಡ್ಡ ಶ್ರೀಮಂತ ಮನೆತನಕ್ಕೆ ಸೊಸೆಯಾಗಿ ಹೋಗಬೇಕು ಎಂಬ ಮಹದಾಸೆ ಇರುತ್ತದೆ. ಇದೇ ಕಾರಣಕ್ಕೆ ಆಕೆ ದೀನಬಂಧು ಕುಟುಂಬದ ಶ್ರೀಮಂತಿಗೆ ಮರುಳಾಗಿ, ತನ್ನ ದೊಡ್ಡ ಮಗಳನ್ನು ಆ ಮನೆಗೆ ಸೊಸೆಯಾಗಿಸಲು ಹರಸಾಹಸ ಪಡುತ್ತಾಳೆ. ಆದರೆ ಆಕೆಯ ಈ ಹಠ ಮತ್ತು ಪ್ರಯತ್ನಗಳು ಮಕ್ಕಳ ಜೀವನದಲ್ಲಿ ಹೂವಿನ ಹಾಸಿಗೆಯಾಗುತ್ತವೆಯೇ ಅಥವಾ ಮುಳ್ಳಿನ ಹಾದಿಯಾಗುತ್ತವೆಯೇ ಎಂಬ ಕುತೂಹಲವೇ ಈ ಸೀರಿಯಲ್‌ನ ಜೀವಾಳ.

‘ಗೌರಿ ಕಲ್ಯಾಣ’ ಧಾರಾವಾಹಿಯು ಮಧ್ಯಮ ವರ್ಗದ ಸಂಪ್ರದಾಯಸ್ಥ ಕುಟುಂಬದ ಕಥೆಯಾಗಿದೆ.

ಕಥಾನಾಯಕಿ ಗೌರಿಯಾಗಿ ಶಿಲ್ಪಾ ಕಾಮತ್ ಕಾಣಿಸಿಕೊಂಡಿದ್ದು, ಆಕೆಯ ಪಾತ್ರವು ಅತ್ಯಂತ ಪ್ರಭಾವಶಾಲಿಯಾಗಿದೆ. ಸ್ವಾಭಿಮಾನಿ ಮತ್ತು ಸ್ವಾವಲಂಬಿ ಗುಣದ ಗೌರಿ ಒಬ್ಬ ಪ್ರಸಿದ್ಧ ಡಿಸೈನರ್ ಆಗಬೇಕೆಂಬ ಕನಸು ಕಂಡವಳು. ತಾನಾಯ್ತು ತನ್ನ ಕುಟುಂಬವಾಯ್ತು ಎಂದು ಬದುಕುವ ಈ ಬೆರಗುಗಣ್ಣಿನ ಸುಂದರಿ, ಸಂಬಂಧಗಳಿಗೆ ಹೆಚ್ಚು ಬೆಲೆ ನೀಡುವವಳು. ಮಧ್ಯಮ ವರ್ಗದ ಸರಳತೆ ಮತ್ತು ಶ್ರೀಮಂತ ವರ್ಗದ ಅಹಂಕಾರದ ನಡುವೆ ನಡೆಯುವ ಈ ಭಾವನಾತ್ಮಕ ಹೋರಾಟ ನೋಡುಗರಿಗೆ ವಿಶೇಷ ಅನುಭವ ನೀಡಲಿದೆ. ಅಕ್ಕ-ತಂಗಿಯರ ಬಾಂಧವ್ಯದ ಜೊತೆಗೆ ಸಮಾಜದ ಎರಡು ಸ್ತರಗಳ ನಡುವಿನ ಕಂದಕವನ್ನು ಈ ಕಥೆ ಮಾರ್ಮಿಕವಾಗಿ ಬಿಚ್ಚಿಡಲಿದೆ.

ಕಥಾನಾಯಕಿ ಗೌರಿಯಾಗಿ ಶಿಲ್ಪಾ ಕಾಮತ್ ಕಾಣಿಸಿಕೊಂಡಿದ್ದಾರೆ.

ಈ ಧಾರಾವಾಹಿಯಲ್ಲಿ ಶರತ್‌ ಕುಮಾರ್‌ ನಾಯಕನಾಗಿ (ವಿವೇಕ್‌ ಚಕ್ರವರ್ತಿ) ನಟಿಸುತ್ತಿದ್ದಾರೆ. ದೀಪಿಕಾ ಶರಣ್‌ ಶೆಟ್ಟಿ, ಅಶೋಕ್‌ ಜಂಬೆ, ಸಹನಾ, ನಿಹಾರಿಕಾ ಶೆಟ್ಟಿ, ಗುರುದತ್‌, ಶೀಲಾ ಹಾಗೂ ಜ್ಯೋತಿ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಖ್ಯಾತ ನಿರ್ಮಾಪಕ ರಾಮ್‌ಜಿ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಧಾರಾವಾಹಿಗೆ ಭರತ್‌ ಕುಮಾರ್‌ ಎನ್. ಮೈಸೂರು ನಿರ್ದೇಶನ ಮಾಡುತ್ತಿದ್ದಾರೆ.

Read More
Next Story