
Bigg Boss Kannada Finale Live: ಗಿಲ್ಲಿ ಫ್ಯಾನ್ಸ್ ಹೈಡ್ರಾಮಾ.. ಪೊಲೀಸರಿಂದ ಲಾಠಿ ಚಾರ್ಜ್
ಬಿಗ್ ಬಾಸ್ ಕನ್ನಡ ಸೀಸನ್ 12ರ ಮಹಾ ಸಂಗ್ರಾಮ ಅಂತ್ಯಕ್ಕೆ ಬಂದಿದೆ. 112 ದಿನಗಳ ಜರ್ನಿ ಮುಗಿಸಿ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಸೇರಿದಂತೆ ಟಾಪ್ ಸ್ಪರ್ಧಿಗಳಲ್ಲಿ ಯಾರು ವಿನ್ನರ್ ಪಟ್ಟ ಅಲಂಕರಿಸಲಿದ್ದಾರೆ? 37 ಕೋಟಿ ವೋಟ್ ಪಡೆದ ಆ ಲಕ್ಕಿ ವಿನ್ನರ್ ಯಾರು? ಸಂಪೂರ್ಣ ಲೈವ್ ಅಪ್‌ಡೇಟ್ಸ್ ಇಲ್ಲಿದೆ ನೋಡಿ.
ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಪ್ರಸಾರವಾಗುತ್ತಿದೆ. ಇಂದಿಗೆ 112 ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಸೀಸನ್‌ನ ವಿನ್ನರ್ ಯಾರಾಗ್ತಾರೆ ಎಂಬ ಕುತೂಹಲ ಪ್ರಕ್ಷಕರಲ್ಲಿ ಮನೆ ಮಾಡಿದೆ. ಫಿನಾಲೆಗೆ ಗಿಲ್ಲಿ ನಟ, ಅಶ್ವಿನಿ ಗೌಡ, ಧನುಶ್, ಕಾವ್ಯಾ, ರಘು ಮತ್ತು ರಕ್ಷಿತಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿಯ ಸೀಸನ್‌ನಲ್ಲಿ ಮತದಾನವು ಹೊಸ ದಾಖಲೆ ಬರೆದಿದ್ದು, ಒಟ್ಟು 37 ಕೋಟಿಗೂ ಹೆಚ್ಚು ವೋಟ್‌ಗಳು ಹರಿದು ಬಂದಿವೆ ಎಂದು ಸುದೀಪ್ ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿನ ಹವಾ ಗಮನಿಸಿದರೆ ಗಿಲ್ಲಿ ನಟ ಅವರಿಗೆ ವಿನ್ನರ್ ಪಟ್ಟ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ವಿನ್ನರ್ ಆಗುವವರಿಗೆ 50 ಲಕ್ಷ ರೂಪಾಯಿ ನಗದು ಹಣದ ಜೊತೆಗೆ ಆಕರ್ಷಕ ಟ್ರೋಫಿ ಮತ್ತು ಒಂದು ಹೊಸ ಕಾರು ಬಹುಮಾನವಾಗಿ ಸಿಗಲಿದೆ.
Live Updates
- 18 Jan 2026 10:25 PM IST
ಟಾಪ್ 3ಸ್ಪರ್ಧಿಗಳ ವಿಟಿ ಪ್ರದರ್ಶನ
ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಯ ಅತ್ಯಂತ ಮಹತ್ವದ ಘಟ್ಟವಾಗಿ ಟಾಪ್ 3 ಸ್ಪರ್ಧಿಗಳಾದ ರಕ್ಷಿತಾ ಶೆಟ್ಟಿ, ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರ ನೂರಕ್ಕೂ ಹೆಚ್ಚು ದಿನಗಳ ರೋಚಕ ಪಯಣದ ವಿಟಿ (Video Tale) ಪ್ರದರ್ಶನವಾಯಿತು. ಈ ಸ್ಮರಣೀಯ ಕ್ಷಣಗಳು ಇಡೀ ವೇದಿಕೆಯನ್ನು ಭಾವುಕಗೊಳಿಸಿತು.
- 18 Jan 2026 10:05 PM IST
ಗಿಲ್ಲಿ ನಟ ಗೆದ್ದರೆ 20 ಲಕ್ಷ ರೂ. ಬಹುಮಾನ:ಬಂಪರ್ ಆಫರ್ ನೀಡಿದ ಎಂಎಲ್‌ಸಿ ಟಿ.ಎ. ಶರವಣ!
ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ಕಳೆಗಟ್ಟಿರುವ ಬೆನ್ನಲ್ಲೇ, ಪ್ರಬಲ ಸ್ಪರ್ಧಿ ಗಿಲ್ಲಿ ನಟನಿಗೆ ರಾಜಕೀಯ ವಲಯದಿಂದ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗಿದೆ. ಈ ಬಾರಿ ಗಿಲ್ಲಿ ನಟನ ಕ್ರೇಜ್ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸುತ್ತಿರುವ ನಡುವೆ, ಜೆಡಿಎಸ್ ಎಂಎಲ್‌ಸಿ ಟಿ.ಎ. ಶರವಣ ಅವರು ಅಚ್ಚರಿಯ ಘೋಷಣೆಯೊಂದನ್ನು ಮಾಡಿದ್ದಾರೆ. ಒಂದು ವೇಳೆ ಬಿಗ್ ಬಾಸ್ ಸೀಸನ್ 12ರ ವಿನ್ನರ್ ಪಟ್ಟವನ್ನು ಗಿಲ್ಲಿ ನಟ ಅಲಂಕರಿಸಿದರೆ, ತಮ್ಮ ವೈಯಕ್ತಿಕ ಕಡೆಯಿಂದ 20 ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡುವುದಾಗಿ ಅವರು ತಿಳಿಸಿದ್ದಾರೆ.
- 18 Jan 2026 9:54 PM IST
ಬಿಗ್ ಬಾಸ್ ವೇದಿಕೆ ಮೇಲೆ ಕಾವ್ಯ ಪೋಷಕರು ಭಾವುಕ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 4ನೇ ಸ್ಥಾನ ಪಡೆದು ಕಾವ್ಯ ಶೈವ ವೇದಿಕೆಗೆ ಆಗಮಿಸಿದಾಗ ಅತ್ಯಂತ ಭಾವುಕ ಕ್ಷಣಗಳು ಸೃಷ್ಟಿಯಾದವು. ಮಗಳ ಸುದೀರ್ಘ ಪಯಣ ಮತ್ತು ಅವಳು ಟಾಪ್ 4 ಹಂತದವರೆಗೆ ತಲುಪಿದ ಸಾಧನೆಯನ್ನು ಕಂಡು ಅವಳ ಪೋಷಕರ ಕಣ್ಣಾಲಿಗಳು ತುಂಬಿ ಬಂದವು. ವೇದಿಕೆಯ ಮೇಲೆ ಮಗಳನ್ನು ಕಂಡ ತಕ್ಷಣ ಹೆಮ್ಮೆಯಿಂದ ಅಪ್ಪಿಕೊಂಡ ಪೋಷಕರು, ಈ 112 ದಿನಗಳ ಜರ್ನಿಯಲ್ಲಿ ಕಾವ್ಯ ತೋರಿದ ಧೈರ್ಯ ಮತ್ತು ಸಂಯಮದ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದರು.
- 18 Jan 2026 9:52 PM IST
ಮನೆ ಒಳಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಎಂಟ್ರಿ
ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಮೊದಲು ವೇದಿಕೆಯ ಮೇಲೆ ಕಿಚ್ಚ ಸುದೀಪ್ ಅವರ ಜೊತೆ ಕಾಣಿಸಿಕೊಂಡು, ನಂತರ ನೇರವಾಗಿ ಬಿಗ್ ಬಾಸ್ ಮನೆಯೊಳಗೆ ಸರ್ಪ್ರೈಸ್ ಎಂಟ್ರಿ ಕೊಟ್ಟರು. ರವಿ ಸರ್ ಅವರನ್ನು ಕಂಡ ತಕ್ಷಣವೇ ಮನೆಯಲ್ಲಿದ್ದ ಟಾಪ್ 4 ಸ್ಪರ್ಧಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ.
ಮನೆಯೊಳಗೆ ಹೋದ ರವಿಚಂದ್ರನ್ ಅವರು ಸ್ಪರ್ಧಿಗಳ ಜೊತೆ ಆತ್ಮೀಯವಾಗಿ ಸಮಯ ಕಳೆದು, ಅವರ 112 ದಿನಗಳ ಸುದೀರ್ಘ ಪಯಣದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಈ ಸುಂದರ ಕ್ಷಣಗಳ ಬೆನ್ನಲ್ಲೇ ಎಲಿಮಿನೇಷನ್ ಪ್ರಕ್ರಿಯೆ ಕೂಡ ನಡೆಯಿತು. ರವಿಚಂದ್ರನ್ ಅವರು ಮನೆಯೊಳಗೆ ನೀಡಿದ ವಿಶೇಷ ಟಾಸ್ಕ್ ಮತ್ತು ವೋಟಿಂಗ್ ಆಧಾರದ ಮೇಲೆ ಕಾವ್ಯ ಶೈವ ಅವರ ಪಯಣ ಇಲ್ಲಿಗೆ ಅಂತ್ಯವಾಯಿತು.
- 18 Jan 2026 9:35 PM IST
ಕಾವ್ಯಾಗೆ ಬಿಗ್ ಬಾಸ್‌ನಿಂದ 5 ಲಕ್ಷ ರೂ. ನಗದು
ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಕಾವ್ಯ ಶೈವ ಅವರಿಗೆ ಪ್ರಾಯೋಜಕರ ಕಡೆಯಿಂದ 10 ಲಕ್ಷ ರೂಪಾಯಿ ಹಣ ಬಹುಮಾನವಾಗಿ ಸಿಕ್ಕಿದ್ದು, ಬಿಗ್ ಬಾಸ್‌ನಿಂದ 5 ಲಕ್ಷ ರೂ. ನಗದು ಸಿಕ್ಕಿದೆ.
- 18 Jan 2026 9:32 PM IST
ಭಗ್ನವಾಯ್ತು ಕಾವ್ಯ ಕನಸು; ರಘು-ಧನುಷ್ ಬೆನ್ನಲ್ಲೇ ಎಲಿಮಿನೇಟ್!
ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಯಲ್ಲಿ ಈಗ ಮತ್ತೊಂದು ದೊಡ್ಡ ತಿರುವು ಸಿಕ್ಕಿದೆ. ಮನೆಯೊಳಗೆ ಗಿಲ್ಲಿ ನಟ ಅವರ ಜೋಡಿಯಾಗಿ ಜಂಟಿಯಾಗಿ ಎಂಟ್ರಿ ಕೊಟ್ಟಿದ್ದ ಕಾವ್ಯ ಶೈವ ಅವರು ಈಗ ಫಿನಾಲೆ ರೇಸ್‌ನಿಂದ ಹೊರಬಿದ್ದಿದ್ದಾರೆ. ರಘು ಮತ್ತು ಧನುಷ್ ಅವರ ಎಲಿಮಿನೇಷನ್ ಬೆನ್ನಲ್ಲೇ ಕಾವ್ಯ ಕೂಡ ಔಟ್ ಆಗುವ ಮೂಲಕ ವಿನ್ನರ್ ಆಗುವ ಕನಸು ಭಗ್ನಗೊಂಡಿದೆ.
ಆರಂಭದಿಂದಲೂ ಗಿಲ್ಲಿ ಅವರ ನೆರಳಿನಂತೆ ಇದ್ದ ಕಾವ್ಯ, ಫಿನಾಲೆ ವೇದಿಕೆಯಲ್ಲಿ ಗಿಲ್ಲಿ ಪಕ್ಕದಲ್ಲೇ ಇರುತ್ತಾರೆ ಎಂದು ಅವರ ಅಭಿಮಾನಿಗಳು ಬಲವಾಗಿ ನಂಬಿದ್ದರು. ಆದರೆ ಅಂತಿಮ ಹಂತದಲ್ಲಿ ಅವರಿಗೆ ಕಡಿಮೆ ಮತಗಳು ಬಂದ ಹಿನ್ನೆಲೆಯಲ್ಲಿ ಅವರು ಮನೆಯಿಂದ ಹೊರಬರಬೇಕಾಯಿತು. ಈ ಎಲಿಮಿನೇಷನ್ ಗಿಲ್ಲಿ ಮತ್ತು ಕಾವ್ಯ ಜೋಡಿಯ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ. ಸದ್ಯ ಮನೆಯಲ್ಲಿ ಗಿಲ್ಲಿ ನಟ, ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವೆ ಅಂತಿಮ ಹಣಾಹಣಿ ಬಾಕಿ ಉಳಿದಿದೆ.
- 18 Jan 2026 9:23 PM IST
ಬಿಗ್ ಬಾಸ್ ಫಿನಾಲೆ ವೇಳೆ ಜಾಲಿವುಡ್ ಬಳಿ ಹೈಡ್ರಾಮಾ: ಗಿಲ್ಲಿ ಅಭಿಮಾನಿಗಳ ಮೇಲೆ ಲಾಠಿಚಾರ್ಜ್!
ಬಿಗ್ ಬಾಸ್ ಕನ್ನಡ ಸೀಸನ್ 12ರ ಅಂತಿಮ ಘಟ್ಟ ಭಾರಿ ಸಂಚಲನ ಮೂಡಿಸಿದೆ. ಚಿತ್ರಮಂದಿರದ ಆವರಣದಂತಾಗಿರುವ ಜಾಲಿವುಡ್ ಸ್ಟುಡಿಯೋ ಬಳಿ ಗಿಲ್ಲಿ ನಟ ಅವರ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಗಿಲ್ಲಿ ಹಾಗೂ ಅಶ್ವಿನಿ ಗೌಡ ನಡುವೆ ನೇರ ಹಣಾಹಣಿ ಇರುವುದರಿಂದ ಕುತೂಹಲ ತುತ್ತತುದಿಗೆ ತಲುಪಿದೆ.
ನೆಚ್ಚಿನ ಸ್ಪರ್ಧಿ ಗಿಲ್ಲಿ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸುತ್ತಿದ್ದ ಅಭಿಮಾನಿಗಳ ಗುಂಪು ಹತೋಟಿ ಮೀರುತ್ತಿದ್ದಂತೆ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿಚಾರ್ಜ್ ನಡೆಸಿದ್ದಾರೆ
- 18 Jan 2026 9:20 PM IST
ಕಿಚ್ಚನ ಕಪ್ಪು ಜಾಕೆಟ್ ಕೇಳಿದ ಧನುಷ್
ಕಿಚ್ಚ ಸುದೀಪ್ ಗ್ರ್ಯಾಂಡ್ ಫಿನಾಲೆಗೆ ಕಪ್ಪು ಬಣ್ಣದ ಜಾಕೆಟ್ ಧರಿಸಿದ್ದಾರೆ. ಅದನ್ನ ಧನುಷ್ ಗೌಡ ಕೇಳಿದ್ದಾರೆ. ನೀವು ಧರಿಸಿರೋ ಈ ಜಾಕೆಟ್ ನನಗೆ ಕೊಡಿ ಅಂತಲೇ ಕೇಳಿದ್ದಾರೆ. ಧನುಷ್ ಗೌಡ ಅವರ ಆಸೆಯಂತೆ ಕಿಚ್ಚ ಸುದೀಪ್ ಜಾಕೆಟ್ ಕೊಡೋಕೆ ರೆಡಿ ಆಗಿದ್ದಾರೆ. ಧನುಷ್ ಕೇಳಿದ ತಮ್ಮ ಜಾಕೆಟ್ ಕೊಡಲು ಸುದೀಪ್ ಹಿಂಜರೆಯಲಿಲ್ಲ. ಬದಲಾಗಿ ಓಕೆ ಕೊಡುವೆ ಅಂತಲೇ ಹೇಳಿದ್ದಾರೆ.
- 18 Jan 2026 9:16 PM IST
ರಘು ಭಾವನಾತ್ಮಕ ಮಾತು
"ಬಿಗ್ ಬಾಸ್ ಕನ್ನಡ 12 ರಲ್ಲಿ ನನಗೆ ಸಿಕ್ಕ ಅನುಭವವನ್ನು ನಾನು ಭವಿಷ್ಯದಲ್ಲಿ ಅಳವಡಿಸಿಕೊಂಡು ಮುಂದೆ ಮತ್ತಷ್ಟು ಜೀವನದಲ್ಲಿ ಬೆಳೆಯಲು ಬಯಸುತ್ತೇನೆ" ಎಂದು ರಘು ಬಿಗ್‌ಬಾಸ್ ವೇದಿಕೆಯಲ್ಲಿ ಹೇಳಿದ್ದಾರೆ.
- 18 Jan 2026 9:15 PM IST
ರಘು ಬಿಗ್ ಬಾಸ್ ಮನೆಯಿಂದ ಔಟ್
ಪ್ರೇಕ್ಷಕರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ರಘು ಅವರು ಬಿಗ್ ಬಾಸ್‌ನಿಂದ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದು, ನಾಲ್ಕನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ರಘು ಅವರಿಗೆ ₹2 ಲಕ್ಷ ನಗದು ಬಹುಮಾನ ಸಿಕ್ಕಿದೆ.

