
ಭಾರತೀಯ ಚಿತ್ರರಂಗದ ಹೊಸ ಯುಗ: 2026ರ ಸೌತ್-ಬಾಲಿವುಡ್ ಮಿಲನ
2026ರ ಸಿನಿಮಾ ಹಂಗಾಮಾ: ದಕ್ಷಿಣದ ಚಿತ್ರಗಳಲ್ಲಿ ಬಾಲಿವುಡ್ ಸ್ಟಾರ್‌ಗಳ ದರ್ಬಾರ್
2026ರಲ್ಲಿ ದಕ್ಷಿಣ ಭಾರತದ ಚಿತ್ರರಂಗ ಮತ್ತು ಬಾಲಿವುಡ್ ನಡುವಿನ ಭೌಗೋಳಿಕ ಅಂತರವು ಸಂಪೂರ್ಣವಾಗಿ ಅಳಿಸಿಹೋಗುತ್ತಿದೆ. ಬಾಲಿವುಡ್‌ನ ಸ್ಟಾರ್ ನಟ-ನಟಿಯರು ದಕ್ಷಿಣದ 'ಪ್ಯಾನ್-ಇಂಡಿಯಾ' ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಈಗ ಪರಭಾಷಾ ನಟ-ನಟಿಯರ ಅಬ್ಬರ ಜೋರಾಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಭರಾಟೆಯ ನಡುವೆ, ಬಾಲಿವುಡ್‌ನ ಖ್ಯಾತ ಕಲಾವಿದರು ದಕ್ಷಿಣದ ವಿವಿಧ ಭಾಷೆಗಳಿಗೆ ಪದರ್ಪಣೆ ಮಾಡುತ್ತಿದ್ದಾರೆ.
ಟಾಕ್ಸಿಕ್‌ನಲ್ಲಿ ಕಿಯಾರಾ ಅಡ್ವಾಣಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ
ರಾಕಿಂಗ್ ಸ್ಟಾರ್ ಯಶ್ ನಟನೆಯ, ಗೀತು ಮೋಹನ್ ದಾಸ್ ನಿರ್ದೇಶನದ ಗ್ಯಾಂಗ್‌ಸ್ಟರ್ ಡ್ರಾಮಾ 'ಟಾಕ್ಸಿಕ್' ಚಿತ್ರಕ್ಕೆ ಬಾಲಿವುಡ್ ಸುಂದರಿ ಕಿಯಾರಾ ಅಡ್ವಾಣಿ ಸೇರ್ಪಡೆಯಾಗಿದ್ದಾರೆ. ನಯನತಾರಾ, ಹುಮಾ ಖುರೇಷಿ ಮತ್ತು ರುಕ್ಮಿಣಿ ವಸಂತ್ ಅವರಂತಹ ಘಟಾನುಘಟಿ ನಟಿಯರ ಜೊತೆ ಕಿಯಾರಾ ಕೂಡ ಅಭಿನಯಿಸುತ್ತಿದ್ದು, ಈ ಚಿತ್ರದ ಮೂಲಕ ಅವರು ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಕಿಯಾರಾ ಅವರ ವೃತ್ತಿಜೀವನಕ್ಕೆ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ.
ತೆಲುಗಿನಲ್ಲಿ ಜಾನ್ವಿ ಕಪೂರ್, ಮೃಣಾಲ್ ಠಾಕೂರ್ ಹವಾ
ಜೂನಿಯರ್ ಎನ್‌ಟಿಆರ್ ಅಭಿನಯದ 'ದೇವರ: ಪಾರ್ಟ್ 1' ನಂತರ, ಜಾನ್ವಿ ಕಪೂರ್ ಈಗ ರಾಮ್ ಚರಣ್ ನಟನೆಯ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ 'ಪೆದ್ದಿ' ಮೂಲಕ ತೆಲುಗು ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಬುಚ್ಚಿ ಬಾಬು ಸನಾ ನಿರ್ದೇಶನದ ಈ ಚಿತ್ರದೊಂದಿಗೆ, ಜಾನ್ವಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ.
ದುಲ್ಕರ್ ಸಲ್ಮಾನ್ ಜೊತೆಗಿನ 'ಸೀತಾ ರಾಮಂ' ಮತ್ತು ನಾನಿ ನಟನೆಯ 'ಹಾಯ್ ನಾನ್ನಾ' ಚಿತ್ರಗಳ ನಂತರ, ಮೃಣಾಲ್ ಠಾಕೂರ್ ಅವರ ಮುಂದಿನ ತೆಲುಗು ಸಿನಿಮಾ ಅಡಿವಿ ಶೇಷ್ ಅಭಿನಯದ 'ಡಕಾಯ್ತ್' . ಖ್ಯಾತ ಚಲನಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಕೂಡ ನಟಿಸಿರುವ ಈ ಸಿನಿಮಾ ಮೃಣಾಲ್ ಅವರಿಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗಟ್ಟಿ ನೆಲೆ ಒದಗಿಸುವುದರ ಜೊತೆಗೆ ರಾಷ್ಟ್ರಮಟ್ಟದ ಪ್ರೇಕ್ಷಕರನ್ನು ತಲುಪಲು ಸಹಕಾರಿಯಾಗಿದೆ.
ದಕ್ಷಿಣದ ಮೂರು ಭಾಷೆಗಳಲ್ಲಿ ವಾಮಿಕಾ ಗಬ್ಬಿ ಮೋಡಿ
2026 ರಲ್ಲಿ ಮೂರು ಪ್ರಮುಖ ದಕ್ಷಿಣ ಭಾರತದ ಪ್ರಾಜೆಕ್ಟ್‌ಗಳೊಂದಿಗೆ ತಮ್ಮ ಮಲ್ಟಿ-ಇಂಡಸ್ಟ್ರಿ ಪ್ರಯಾಣವನ್ನು ಮುಂದುವರಿಸಲಿದ್ದಾರೆ. ಅವರು ತೆಲುಗಿನ ಆಕ್ಷನ್ ಥ್ರಿಲ್ಲರ್ 'G2', ತಮಿಳಿನ ಪ್ರೇಮಕಥೆ 'DC' ಮತ್ತು ಮಲಯಾಳಂನ ಆಕ್ಷನ್ ಡ್ರಾಮಾ 'ಟಿಕಿ ಟಾಕಾ' ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಾಯಿ ಮಂಜ್ರೇಕರ್
ಸಾಯಿ ಮಂಜ್ರೇಕರ್ ಅವರು ತೆಲುಗಿನ 'ದ ಇಂಡಿಯಾ ಹೌಸ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ವಾತಂತ್ರ್ಯ ಪೂರ್ವದ ಲಂಡನ್ ಹಿನ್ನೆಲೆಯಲ್ಲಿ ನಡೆಯುವ ಈ ಸಿನಿಮಾ, ಐತಿಹಾಸಿಕ ಇಂಡಿಯಾ ಹೌಸ್ ಚಳುವಳಿಯ ರಾಜಕೀಯ ಏರಿಳಿತಗಳ ನಡುವೆ ಒಂದು ಸುಂದರ ಪ್ರೇಮಕಥೆಯನ್ನು ಒಳಗೊಂಡಿದೆ. ನಿಖಿಲ್ ಸಿದ್ಧಾರ್ಥ್ ಮತ್ತು ಅನುಪಮ್ ಖೇರ್ ನಟಿಸಿರುವ ಈ ಚಿತ್ರದ ಮೂಲಕ ರಾಮ್ ಚರಣ್ ನಿರ್ಮಾಪಕರಾಗಿ ಪದರ್ಪಣೆ ಮಾಡುತ್ತಿದ್ದಾರೆ.
ರಾಘವ್ ಜುಯಲ್
ಶ್ರೀಕಾಂತ್ ಒಡೆಲಾ ನಿರ್ದೇಶನದ ನಾನಿ ನಟನೆಯ ತೆಲುಗು ಸಿನಿಮಾ 'ಪ್ಯಾರಡೈಸ್' ಮೂಲಕ ರಾಘವ್ ಜುಯಲ್ ದಕ್ಷಿಣ ಭಾರತಕ್ಕೆ ಕಾಲಿಡುತ್ತಿದ್ದಾರೆ.
ಅಕ್ಷಯ್ ಒಬೆರಾಯ್
ನಟ ಅಕ್ಷಯ್ ಒಬೆರಾಯ್ ಕೂಡ ಯಶ್ ನಟನೆಯ ಬಹುನಿರೀಕ್ಷಿತ ಕನ್ನಡ ಪ್ಯಾನ್-ಇಂಡಿಯಾ ಸಿನಿಮಾ 'ಟಾಕ್ಸಿಕ್' ಮೂಲಕ ದಕ್ಷಿಣ ಭಾರತಕ್ಕೆ ಪದರ್ಪಣೆ ಮಾಡುತ್ತಿದ್ದಾರೆ. ವೈವಿಧ್ಯಮಯ ಸಿನಿಮಾಗಳು ಮತ್ತು ವೆಬ್ ಸರಣಿಗಳ ಮೂಲಕ ಗುರುತಿಸಿಕೊಂಡಿರುವ ಅಕ್ಷಯ್, ಈಗ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸುವ ಮೂಲಕ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ.
ಅಭಿಷೇಕ್ ಬ್ಯಾನರ್ಜಿ
ಹಾಸ್ಯ ಪಾತ್ರಗಳ ಆಚೆಗೆ ತನ್ನನ್ನು ತಾನು ಮರುಶೋಧಿಸಿಕೊಂಡಿರುವ ಅಭಿಷೇಕ್ ಬ್ಯಾನರ್ಜಿ, ನೆಟ್‌ಫ್ಲಿಕ್ಸ್‌ನ ತಮಿಳು ವೆಬ್ ಸರಣಿ 'ಲೆಗಸಿ'ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಆರ್. ಮಾಧವನ್, ಗುಲ್ಶನ್ ದೇವಯ್ಯ ಮತ್ತು ನಿಮಿಷಾ ಸಜಯನ್ ನಟಿಸಿರುವ ಈ ಪ್ರಾಜೆಕ್ಟ್, ಪರ್ಫಾರ್ಮೆನ್ಸ್ ಆಧಾರಿತ ಪಾತ್ರಗಳಿಗೆ ಅಭಿಷೇಕ್ ಅವರು ನಟಿಸುತ್ತಿದ್ದಾರೆ.
ಆದರ್ಶ್ ಗೌರವ್
ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ನಟ ಆದರ್ಶ್ ಗೌರವ್, ತೆಲುಗಿನ ಸೈಕಲಾಜಿಕಲ್ ಹಾರರ್ ಮತ್ತು ಸೈನ್ಸ್ ಫಿಕ್ಷನ್ ಚಿತ್ರ 'ಹ್ಯಾಪಿ ಬರ್ತ್‌ಡೇ ಉಮಾ' ಮೂಲಕ ದಕ್ಷಿಣಕ್ಕೆ ಪದರ್ಪಣೆ ಮಾಡುತ್ತಿದ್ದಾರೆ.
ಗುಲ್ಶನ್ ದೇವಯ್ಯ
ಕಳೆದ ವರ್ಷ ರಿಷಬ್ ಶೆಟ್ಟಿ ಅವರ 'ಕಾಂತಾರ ಚಾಪ್ಟರ್ 1' ಚಿತ್ರದ ಭರ್ಜರಿ ಯಶಸ್ಸಿನ ನಂತರ, ಗುಲ್ಶನ್ ದೇವಯ್ಯ ದಕ್ಷಿಣದ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಅವರು ತಮಿಳಿನ 'ಲೆಗಸಿ' ಸರಣಿಯ ಜೊತೆಗೆ, ಸಮಂತಾ ರುತ್ ಪ್ರಭು ಅವರೊಂದಿಗೆ ತೆಲುಗು ಸಿನಿಮಾ 'ಮಾ ಇಂಟಿ ಬಂಗಾರಂ' ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.

