‘ಮಿಸ್ ಗೈಡ್’ ಸಿನಿಮಾದ ಟೀಸರ್‌ ಬಿಡುಗಡೆ ಮಾಡಿದ ನಾಗೇಂದ್ರ ಪ್ರಸಾದ್
x
ʼಮಿಸ್ ಗೈಡ್ʼ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ.

‘ಮಿಸ್ ಗೈಡ್’ ಸಿನಿಮಾದ ಟೀಸರ್‌ ಬಿಡುಗಡೆ ಮಾಡಿದ ನಾಗೇಂದ್ರ ಪ್ರಸಾದ್

ʼಮಿಸ್ ಗೈಡ್ʼ ಸಿನಿಮಾದ ಟೀಸರನ್ನು ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಬಿಡುಗಡೆ ಮಾಡಿದ್ದಾರೆ.


Click the Play button to hear this message in audio format

ʼಮಿಸ್ ಗೈಡ್ʼ ಸಿನಿಮಾದ ಟೀಸರ್‌ ಅನ್ನು ಚಿತ್ರ ಸಾಹಿತಿ ಡಾ.ವಿ. ನಾಗೇಂದ್ರ ಪ್ರಸಾದ್ ಬಿಡುಗಡೆ ಮಾಡಿದ್ದಾರೆ.

ಮುಂಗುಸಿಯೊಂದು ಮಗುವನ್ನು ಕಾಪಾಡಲು ಹಾವಿನೊಂದಿಗೆ ಸೆಣೆಸಾಡುತ್ತದೆ. ಆದರೆ ಮುಂಗುಸಿಯ ಬಾಯಲ್ಲಿ ರಕ್ತ ನೋಡಿದ ಮಗುವಿನ ತಾಯಿ ಮುಂಗುಸಿ ತನ್ನ ಮಗುವಿಗೆ ಏನೋ ಮಾಡಿದೆ ಅಂದುಕೊಳ್ಳುತ್ತಾಳೆ. ಈ ಕಥೆಯೇ ನಮ್ಮ ಚಿತ್ರಕ್ಕೆ ಸ್ಪೂರ್ತಿ. ಇನ್ನು ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಎಲ್ಲಾ ಮುಕ್ತಾಯವಾಗಿದ್ದು, ಚಿತ್ರ ತೆರೆಗೆ ಬರುವ ಹಂತದಲ್ಲಿದೆ. ಚಿತ್ರತಂಡದ ಸಹಕಾರದಿಂದ ʼಮಿಸ್ ಗೈಡ್ʼ ಅಂದುಕೊಂಡ ಹಾಗೆ ಬಂದಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ನಾನೇ ಗೀತರಚನೆ ಮಾಡಿ ಸಂಗೀತ ನೀಡಿದ್ದೀನಿ. ತಾಯಿ - ಮಗನ ಸೆಂಟಿಮೆಂಟ್ ಹಾಡನ್ನು ಜನಪ್ರಿಯ ಗಾಯಕ ಗುರುಕಿರಣ್ ಹಾಡಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಚಿತ್ರದ ನಿರ್ದೇಶಕ ಮಂಜು ಕವಿ ಹೇಳಿದ್ದಾರೆ.

ಈ ಚಿತ್ರವನ್ನು ಸಿಟಡೆಲ್ ಫಿಲಂಸ್ ಹಾಗೂ ರಾಜ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಾಗರಾಜ್ ಹಾಗೂ ಸುಬ್ಬು ನಿರ್ಮಾಣ ಮಾಡಿದ್ದಾರೆ. ಮಿಸ್ ಗೈಡ್ ಚಿತ್ರಕ್ಕೆ ಮಂಜುಕವಿ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆ ಬರೆದು, ಸಂಗೀತವನ್ನು ನೀಡಿದ್ದಾರೆ. ನಾಯಕ ನಟನಾಗಿ ನಿತೀಶ್ ವಿನಯ್ ರಾಜ್ ನಟಿಸುತ್ತಿದ್ದು, ಫರೀನ್ ಹಾಗೂ ರಕ್ಷ ಈ ಚಿತ್ರದ ನಾಯಕಿಯಾಗಿದ್ದಾರೆ.

Read More
Next Story