ಮಳೆಗಾಲದಲ್ಲಿ ಚಿಗುರೊಡೆದ ಕಿತ್ತಾಳೆ ತೋಟ
x
ರೂಪಾಂತರ ಸಿನಿಮಾದ ಹಾಡು ಬಿಡುಗಡೆಯಾಗಿದೆ.

ಮಳೆಗಾಲದಲ್ಲಿ ಚಿಗುರೊಡೆದ ಕಿತ್ತಾಳೆ ತೋಟ

'ಕಿತ್ತಾಳೆ' ಎನ್ನುವ ಹಾಡನ್ನು ಬಿಡುಗಡೆಗೊಳಿಸುವ ಮೂಲಕ ಸಿನಿ ರಸಿಕರ, ಸಂಗೀತ ಆಸ್ವಾದಕರ ಮನವನ್ನು ತಣಿಸಿದೆ.


ಚಿಟಿ ಚಿಟಿ‌ ಜಿನುಗುವ ಮಳೆಯಲ್ಲಿ ಹಾಡೊಂದನ್ನು ಕೇಳುವುದು ಯಾರಿಗೆ ತಾನೆ ಇಷ್ಟವಿಲ್ಲ. ಇದನ್ನು ಚೆನ್ನಾಗಿ ಅರಿತಂತಿತೆ ರೂಪಾಂತರ ಚಿತ್ರತಂಡ. ಹೌದು ಒಂದು ಮೊಟ್ಟೆಯ ಕಥೆಯ ಮೂಲಕ ಚಿತ್ರರಂಗಕ್ಕೆ ಬಂದು ಜನರ ಮೆಚ್ಚುಗೆ ಗಳಿಸಿದ ಅದೇ ಚಿತ್ರತಂಡ ರೂಪಾಂತರ ಎನ್ನುವ ಸಿನೆಮಾ ಮಾಡಿ ಬಿಡುಗಡೆಗೆ ಸಿದ್ದವಾಗಿದ್ದು, ಅದರ 'ಕಿತ್ತಾಳೆ' ಎನ್ನುವ ಹಾಡನ್ನು ಬಿಡುಗಡೆಗೊಳಿಸಿದೆ.

ರಾಜ್ ಮಿದುನ್ ಮ್ಯಾಜಿಕ್

ಒಂದು ಮೊಟ್ಟೆಯ ಕಥೆಯ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಾಜ್ ಬಿ. ಶೆಟ್ಟಿ ಮತ್ತು ಮಿಧುನ್ ಮುಕುಂದನ್ ಯಶಸ್ವಿ ಜೋಡಿಯಾಗಿ ಅನೇಕ ಹಿಟ್ ಹಾಡುಗಳನ್ನು ನೀಡಿದೆ. ಇದೀಗ ರೂಪಾಂತರ ಚಿತ್ರದ ಕಿತ್ತಾಳೆ ಹಾಡನ್ನು ಬಿಡುಗಡೆಗೊಳಿಸುವ ಮೂಲಕ ಮತ್ತೊಮ್ಮೆ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಈ ಹಿಂದೆ ಅನೇಕ ಚಿತ್ರಗಳಿಗೆ ರಾಜ್ ಸಾಹಿತ್ಯ ಬರೆದು ಮಿಧುನ್ ಸಂಗೀತ ನೀಡಿದ್ದರೂ ಈ ಹಾಡು ಇಬ್ಬರಿಗೂ ಚಿತ್ರರಂಗದಲ್ಲಿ ಹೊಸ ಗುರುತನ್ನು ನೀಡಲಿದೆ. ಮಿಧುನ್ ಅವರ ಸಂಗೀತಕ್ಕೆ ರಾಜ್ ಅವರ ರಸಭರಿತ ಸಾಹಿತ್ಯ ಸಿಹಿಯಾದ ಕಿತ್ತಾಳೆ ಹಣ್ಣನ್ನು ಸವಿದಂತ ಅನುಭವವನ್ನು ನೀಡುತ್ತಿದೆ ಎಂದು ಅನೇಕ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಗರುಡ ಗಮನದ ಮಾದೇವ ಖ್ಯಾತಿಯ ಗಾಯಕಿ ಚೈತ್ರ ಜೆ ಆಚಾರ್ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ.

ನಿರೀಕ್ಷೆಯನ್ನು ಹೆಚ್ಚು ಮಾಡಿದ ರೂಪಾಂತರ

ಮೊನ್ನೆಯಷ್ಟೆ ಫಸ್ಟ್‌ ಲುಕ್ ಪೋಸ್ಟರ್ ನ ಮೂಲಕ ಗಮನ ಸೇಳೆದ ಮಿಥಿಲೇಶ್ ಎಡವಲತ್ ಅವರ ಚೊಚ್ಚಲ ಚಿತ್ರ ಇದಾಗಿದ್ದು ಕನ್ನಡ ಚಿತ್ರರಂಗದಲದಲ್ಲೊಂದು ಹೊಸ ಅಲೆಯನ್ನು ಸೃಷ್ಟಿ ಮಾಡುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ರಾಜ್ ಬಿ ಶೆಟ್ಟಿಯವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಅಲ್ಲದೆ, ಸಂಭಾಷಣೆಯನ್ನು ಬರೆದಿದ್ದಾರೆ. ಜೊತೆಗೆ ತಮ್ಮ ನಿರ್ಮಾಣೆ ಸಂಸ್ಥೆಯಾದ ಲೈಟರ್ ಬುದ್ಧ ಫಿಲಂಮ್ಸ್ ನ ಮೂಲಕ ತೆರೆಗೂ ತರುತ್ತಿದ್ದಾರೆ. ಒಂದು ಮೊಟ್ಟೆಯ ಕಥೆ ಯ ನಿರ್ಮಾಪಕರಾದ ಸುಹಾನ್ ಪ್ರಸಾದ್ ಈ ಚಿತ್ರದ ನಿರ್ಮಾಣವನ್ನು ಮಾಡಿದ್ದಾರೆ. ಪ್ರವೀಣ್ ಶ್ರೀಯಾನ್ ಛಾಯಗ್ರಹಣ, ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ.

ಉಳಿದಂತೆ ಸೋಮಶೇಖರ್ ಬೋಲೇಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರಧ್ವಾಜ್ ಮತ್ತಿರರ ತಾರಗಣ ಚಿತ್ರಕ್ಕಿದೆ. ಸಂಕಲನ ಭುವನೇಶ್ ಮಣಿವಣ್ಣನ್, ನಿರ್ಮಾಣ ವಿನ್ಯಾಸ ಪ್ರವೀಣ್ ಮತ್ತು ಅರ್ಷದ್ ನಾಕ್ಕೋತ್ ಅವರದ್ದಾಗಿದೆ.

Read More
Next Story