ದರ್ಶನ್ ನಟನೆಯ ದಿ ಡೆವಿಲ್ ಮೊದಲ ಹಾಡು ಆಗಸ್ಟ್ 24ಕ್ಕೆ ಬಿಡುಗಡೆ
x

ದಿ ಡೆವಿಲ್ ಚಿತ್ರದ ಪೋಸ್ಟರ್

ದರ್ಶನ್ ನಟನೆಯ 'ದಿ ಡೆವಿಲ್' ಮೊದಲ ಹಾಡು ಆಗಸ್ಟ್ 24ಕ್ಕೆ ಬಿಡುಗಡೆ

ದರ್ಶನ್‌ ನಟನೆಯ 'ದಿ ಡೆವಿಲ್' ಸಿನಿಮಾದ 'ಇದ್ರೆ ನೆಮ್ದಿಯಾಗ್ ಇರ್ಬೇಕು' ಎಂಬ ಹಾಡು ಈಗಾಗಲೇ ಬಹಳ ಸದ್ದು ಮಾಡಿದೆ. ಈ ಹಾಡನ್ನು ಇದೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.


ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರ ಅಭಿಮಾನಿಗಳಿಗೆ ಒಂದು ಒಳ್ಳೆಯ ಸುದ್ದಿ ಇಲ್ಲಿದೆ. ಅವರ ಮುಂಬರುವ ಬಹು ನಿರೀಕ್ಷಿತ ಚಿತ್ರ 'ದಿ ಡೆವಿಲ್' ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ.

ದರ್ಶನ್ ಜೈಲಿಗೆ ಹೋಗುವ ಮೊದಲೇ ಚಿತ್ರೀಕರಣ ಮತ್ತು ಡಬ್ಬಿಂಗ್ ಕಾರ್ಯಗಳನ್ನು ಪೂರ್ಣಗೊಳಿಸಿದ್ದರಿಂದ ಚಿತ್ರತಂಡಕ್ಕೆ ಯಾವುದೇ ತೊಂದರೆಯಾಗಿಲ್ಲ. ಅವರ ಅನುಪಸ್ಥಿತಿಯಲ್ಲಿಯೂ ಸಹ ಚಿತ್ರವನ್ನು ತೆರೆಗೆ ತರಲು ತಂಡವು ಶ್ರಮಿಸುತ್ತಿದೆ.

ಚಿತ್ರದ 'ಇದ್ರೆ ನೆಮ್ದಿಯಾಗ್ ಇರ್ಬೇಕು' ಎಂಬ ಹಾಡು ಈಗಾಗಲೇ ಬಹಳ ಸದ್ದು ಮಾಡಿದೆ. ಈ ಹಾಡನ್ನು ಇದೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ದರ್ಶನ್ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಅವರ ಪತ್ನಿ ವಿಜಯಲಕ್ಷ್ಮಿ ನಿರ್ವಹಿಸುತ್ತಿದ್ದು, ಅವರ ಖಾತೆಯ ಮೂಲಕವೇ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

Read More
Next Story