
ನಿರ್ದೇಶಕ ಅರ್ಜುನ್ ಜನ್ಯ
ಚಿತ್ರ ‘45’ ಡಿಸೆಂಬರ್ 25 ರಂದು ತೆರೆಗೆ
ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.
ಬಹುನಿರೀಕ್ಷಿತ ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ ‘45’ ಡಿಸೆಂಬರ್ 25 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ಅರ್ಜುನ್ ಜನ್ಯ, ಈ ಹಿಂದೆ ನಮ್ಮ ಚಿತ್ರವನ್ನು ಆಗಸ್ಟ್ 15ರಂದು ಬಿಡುಗಡೆ ಮಾಡುವುದಾಗಿ ತಿಳಿಸಿದ್ದೆವು. ಕೆನಡಾದಲ್ಲಿ ನಮ್ಮ ಚಿತ್ರದ ವಿ.ಎಫ್.ಎಕ್ಸ್ ನಡೆಯುತ್ತಿದೆ. ನಮ್ಮ ಚಿತ್ರದಲ್ಲಿ ಸಿಜಿ ವರ್ಕ್ ಮಹತ್ವದ ಪಾತ್ರ ವಹಿಸಲಿದೆ. ಚಿತ್ರದಲ್ಲಿ ಶೇಕಡಾ 40% ಗ್ರಾಫಿಕ್ ಇರುತ್ತದೆ. ಕೆನಡಾದ ʻಮರ್ಜ್ʼ ಸಂಸ್ಥೆಯಲ್ಲಿ ಸಾಕಷ್ಟು ನುರಿತ ಹಾಲಿವುಡ್ ತಂತ್ರಜ್ಞರು ವಿಎಫ್ಎಕ್ಸ್ ಕೆಲಸ ಮಾಡುತ್ತಿದ್ದಾರೆ. ಸ್ವಲ್ಪ ತಡವಾದರೂ ಎಲ್ಲರೂ ಮೆಚ್ಚಿಕೊಳ್ಳುವ ಚಿತ್ರವನ್ನು ಪ್ರೇಕ್ಷಕರಿಗೆ ನೀಡುವ ಉದ್ದೇಶ ನಮ್ಮದು.
ಇನ್ನೂ ಕೆಲವೆ ದಿನಗಳಲ್ಲಿ ಸಿಜಿ ವರ್ಕ್ ಪೂರ್ಣವಾಗಲಿದೆ. ಡಿಸೆಂಬರ್ 25 ರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಸಾಲುಸಾಲು ರಜೆ ಇದ್ದರೆ, ಜನರು ಕುಟುಂಬ ಸಮೇತ ಚಿತ್ರ ನೋಡಲು ಬರುವುದಕ್ಕೆ ಸಮಯ ಸಿಗುತ್ತದೆ. ಡಿಸೆಂಬರ್ 25 ರಂದು ಕ್ರಿಸ್ಮಸ್ ಹಬ್ಬ ಹಾಗೂ ಕ್ರಿಸ್ಮಸ್ ರಜೆಯ ಸಮಯ ಮತ್ತು ಅಂದು ಗುರುಗಳು ತಿಳಿಸಿರುವಂತೆ ಒಳ್ಳೆಯ ದಿನ ಕೂಡ. ಹಾಗಾಗಿ ಆ ದಿವಸ ನಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಈ ಚಿತ್ರ ಆರಂಭವಾಗಲು ಶಿವರಾಜಕುಮಾರ್ ಅವರೆ ಕಾರಣ ಈ ಸಮಯದಲ್ಲಿ ಅವರಿಗೆ, ಉಪೇಂದ್ರ, ರಾಜ್ ಬಿ ಶೆಟ್ಟಿ ಅವರಿಗೆ ಹಾಗೂ ವಿಶೇಷವಾಗಿ ಚಿತ್ರವನ್ನು ಇಷ್ಟು ಪ್ರೀತಿಯಿಂದ ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ನಿರ್ಮಾಪಕ ರಮೇಶ್ ರೆಡ್ಡಿ ಮಾತನಾಡಿ, ʻʻಇದು 'MARZ' ಸಂಸ್ಥೆ ಮಾಡುತ್ತಿರುವ ಮೊದಲ ಕನ್ನಡ ಚಿತ್ರ. ಕಥೆಯ ಅಗತ್ಯಕ್ಕೆ ತಕ್ಕಂತೆ ನಾವು ಗ್ರಾಫಿಕ್ಸ್ ಬಳಸಿದ್ದೇವೆ ಮತ್ತು ಇದಕ್ಕಾಗಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ನಮ್ಮ ಚಿತ್ರವು ಪ್ರೇಕ್ಷಕರಿಗೆ ಉತ್ತಮ ಅನುಭವ ನೀಡಲಿದೆ ಎಂಬ ವಿಶ್ವಾಸವಿದೆ. ನಮ್ಮ ಚಿತ್ರದ ವಿತರಣೆಗಾಗಿ ತೆಲುಗಿನ ಮೈತ್ರಿ ಮೂವಿ ಮೇಕರ್ಸ್ ಅವರು ಆಸಕ್ತಿ ತೋರಿದ್ದಾರೆ. ಚಿತ್ರ ಸಂಪೂರ್ಣವಾದ ನಂತರ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ" ಎಂದು ತಿಳಿಸಿದರು.