
ನಟ ವಿಜಯ್ ಅವರ 'ಜನ ನಾಯಕನ್' ಚಿತ್ರದ ಬಿಡುಗಡೆ ಸಂಕಷ್ಟ
ನಟ ವಿಜಯ್ ಅಭಿನಯದ ‘ಜನ ನಾಯಗನ್’ ರಿಲೀಸ್ ಮುಂದೂಡಿಕೆ ; ಅಭಿಮಾನಿಗಳಿಗೆ ನಿರಾಸೆ
ತಾಂತ್ರಿಕ ಹಾಗೂ ನಿರ್ಮಾಣ ಸಂಬಂಧಿತ ಅನಿವಾರ್ಯ ಕಾರಣಗಳಿಂದ ಬಿಡುಗಡೆಯನ್ನು ಮುಂದೂಡಬೇಕಾಗಿದೆ. ಚಿತ್ರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದೆಂಬ ಕಾರಣದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೆವಿಎನ್ ಪ್ರೊಡಕ್ಷನ್ ಪ್ರಕಟಣೆಯಲ್ಲಿ ತಿಳಿಸಿದೆ.
ದಳಪತಿ ವಿಜಯ್ ಅಭಿನಯಿಸಿರುವ ‘ಜನ ನಾಯಗನ್’ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಕೊನೆ ಕ್ಷಣದಲ್ಲಿ ಮುಂದೂಡಿದೆ.
ಬಹುನಿರೀಕ್ಷಿತ ಹಾಗೂ ವಿಜಯ್ ನಟನೆಯ ಕೊನೆಯ ಸಿನಿಮಾ ಎನ್ನಲಾಗಿರುವ 'ಜನನಾಯಗನ್' ಚಿತ್ರ ವೀಕ್ಷಣೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ, ಕೊನೆ ಕ್ಷಣದ ಬದಲಾವಣೆಯಿಂದ ಅಭಿಮಾನಿಗಳಿಗೆ ನಿರಾಶೆ ಎದುರಾಗಿದೆ.
ಅನಿವಾರ್ಯ ಕಾರಣಗಳಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಅಧಿಕೃತವಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ಪೋಸ್ಟರ್‌ಗಳು ಹಾಗೂ ಟೀಸರ್‌ಗಳು ‘ಜನ ನಾಯಗನ್’ ಸಿನಿಮಾಗೆ ಕುರಿತು ಭಾರೀ ಕುತೂಹಲ ಮೂಡಿಸಿದ್ದವು. ವಿಜಯ್ ಅವರ ವಿಭಿನ್ನ ಲುಕ್, ರಾಜಕೀಯ ಹಿನ್ನಲೆಯಲ್ಲಿ ಸಾಗುವ ಕಥಾಹಂದರ ಹಾಗೂ ಪವರ್‌ಫುಲ್ ಡೈಲಾಗ್‌ಗಳು ಪ್ರೇಕ್ಷಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿತ್ತು.
ರಿಲೀಸ್ ದಿನಾಂಕ ಘೋಷಣೆಯಾದ ನಂತರ ಫ್ಯಾನ್ಸ್‌ಗಳು ಥಿಯೇಟರ್‌ಗಳಲ್ಲಿ ಸಂಭ್ರಮಿಸಲು ಸಿದ್ಧರಾಗಿದ್ದರು.
ಆದರೆ ಇದೀಗ ನಿರ್ಮಾಪಕ ತಂಡ ನೀಡಿರುವ ಮಾಹಿತಿಯಂತೆ, ಕೆಲವು ತಾಂತ್ರಿಕ ಹಾಗೂ ನಿರ್ಮಾಣ ಸಂಬಂಧಿತ ಅನಿವಾರ್ಯ ಕಾರಣಗಳಿಂದ ಬಿಡುಗಡೆಯನ್ನು ಮುಂದೂಡಬೇಕಾಗಿದೆ. ಚಿತ್ರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದೆಂಬ ಕಾರಣದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಿಲೀಸ್ ಮುಂದೂಡಿಕೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ವಿಜಯ್ ಅಭಿಮಾನಿಗಳು ತಮ್ಮ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ.
“ಒಳ್ಳೆಯ ಸಿನಿಮಾ ನೋಡಲು ಸ್ವಲ್ಪ ಕಾಯುವುದೇ ಉತ್ತಮ” ಎಂದು ಹೇಳಿ ಚಿತ್ರ ತಂಡದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ.

