‘ಕಾಂತಾರ-1’ ಅಬ್ಬರಕ್ಕೆ ಹೆದರಿ ಸೆಪ್ಟೆಂಬರ್‌ನಲ್ಲಿ ಸಿನಿಜಾತ್ರೆ: ಒಂದೇ ದಿನ ತೆರೆಗೆ ಅಪ್ಪಳಿಸಲಿವೆ 10 ಕನ್ನಡ ಚಿತ್ರಗಳು!
x

ಈ ವಾರ 10ಸಿನಿಮಾಗಳು ತೆರೆಗೆ ಬರಲಿವೆ. 

‘ಕಾಂತಾರ-1’ ಅಬ್ಬರಕ್ಕೆ ಹೆದರಿ ಸೆಪ್ಟೆಂಬರ್‌ನಲ್ಲಿ ಸಿನಿಜಾತ್ರೆ: ಒಂದೇ ದಿನ ತೆರೆಗೆ ಅಪ್ಪಳಿಸಲಿವೆ 10 ಕನ್ನಡ ಚಿತ್ರಗಳು!

ಸೆಪ್ಟೆಂಬರ್ ತಿಂಗಳಿನಲ್ಲಿ ಕನ್ನಡದ ಹಲವು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಸೆಪ್ಟೆಂಬರ್ 12ರಂದು ಬರೋಬ್ಬರಿ 10 ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.


Click the Play button to hear this message in audio format

ಕಾಂತಾರ ಸಿನಿಮಾದ ಸೀಕ್ವೆಲ್ ಕಾಂತಾರ-1, ಅಕ್ಟೋಬರ್ 2ರಂದು ಬಿಡುಗಡೆಯಾಗಿದೆ. ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ ಮತ್ತು ನಟಿಸಿದ ಕಾಂತಾರ ಸಿನಿಮಾ 2022 ರಲ್ಲಿ ದೊಡ್ಡ ಯಶಸ್ಸು ಗಳಿಸಿತ್ತು. ಹಾಗಾಗಿ ಇದರ ಸೀಕ್ವೇಲ್‌ ಆಗಿರುವ ಕಾಂತಾರ-1 ಮೇಲಿರುವ ನಿರೀಕ್ಷೆಗಳು ದೊಡ್ಡ ಮಟ್ಟದಲ್ಲಿವೆ. ಈ ಕಾರಣದಿಂದಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಕನ್ನಡದ ಹಲವು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಸೆಪ್ಟೆಂಬರ್ 12ರಂದು ಬರೋಬ್ಬರಿ 10 ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.

ಬಿಡುಗಡೆಯಾಗುತ್ತಿರುವ ಸಿನಿಮಾಗಳು

ಜಂಬೂ ಸರ್ಕಸ್: ಎಂ.ಡಿ. ಶ್ರೀಧರ್ ನಿರ್ದೇಶನದ ಈ ಚಿತ್ರವನ್ನು ಎಚ್.ಸಿ. ಸುರೇಶ್ ನಿರ್ಮಿಸಿದ್ದಾರೆ. ಪ್ರವೀಣ್ ತೇಜ್ ಮತ್ತು ಅಂಜಲಿ ಅನೀಶ್ ನಟಿಸಿರುವ ಈ ಸಿನಿಮಾ ಇಬ್ಬರು ಆತ್ಮೀಯ ಸ್ನೇಹಿತರ ಕಥೆಯನ್ನು ಹೇಳುತ್ತದೆ. ಒಂದೇ ದಿನ ಹುಟ್ಟಿದ ಮಕ್ಕಳು, ಒಂದೇ ಶಾಲಾ-ಕಾಲೇಜು, ಒಂದೇ ಮಂಟಪದಲ್ಲಿ ಮದುವೆ ಹೀಗೆ ಅನೇಕ ಕಾಕತಾಳೀಯಗಳನ್ನು ಹೊಂದಿರುವ ಕಥೆಯಲ್ಲಿ ಹಲವು ಟ್ವಿಸ್ಟ್‌ಗಳಿವೆ ಎನ್ನಲಾಗಿದೆ.

ಸೆಪ್ಟೆಂಬರ್ 10: ಸಾಯಿಪ್ರಕಾಶ್ ಅವರ 105ನೇ ನಿರ್ದೇಶನದ ಈ ಚಿತ್ರವನ್ನು ರಾಜಮ್ಮ ಸಾಯಿಪ್ರಕಾಶ್ ನಿರ್ಮಿಸಿದ್ದಾರೆ. ಶಶಿಕುಮಾರ್, ಗಣೇಶ್ ರಾವ್ ಕೇಸರ್ಕರ್, ಸಂಧ್ಯಾರಾಣಿ ಮತ್ತು ಶ್ರೀರಕ್ಷಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಭಾವನಾತ್ಮಕ ಮತ್ತು ಹಾಸ್ಯಮಯ ಸಿನಿಮಾ ಇದಾಗಿದೆ.

ಸನ್ ಆಫ್ ಮುತ್ತಣ್ಣ; ಪ್ರಣಾಮ್ ದೇವರಾಜ್ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ಶ್ರೀಕಾಂತ್ ಹುಣಸೂರು ಆಕ್ಷನ್ ಕಟ್ ಹೇಳಿದ್ದಾರೆ. ಖುಷಿ ರವಿ ನಾಯಕಿಯಾಗಿದ್ದು, ರಂಗಾಯಣ ರಘು ಪ್ರಮುಖ ಪಾತ್ರದಲ್ಲಿದ್ದಾರೆ. ತಂದೆ-ಮಗನ ಬಾಂಧವ್ಯದ ಸುತ್ತ ಹೆಣೆದಿರುವ ಸಿನಿಮಾ ಇದಾಗಿದೆ.

ನಿದ್ರಾದೇವಿ ನೆಕ್ಟ್ ಡೋರ್: ಸುರಾಗ್ ನಿರ್ದೇಶನದ ಮತ್ತು ಜಯರಾಮ ದೇವಸಮುದ್ರ ನಿರ್ಮಿಸಿರುವ ಈ ಚಿತ್ರದಲ್ಲಿ ಪ್ರವೀ‌ರ್ ಮತ್ತು ರಿಷಿಕಾ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ನಿದ್ದೆ ಸಮಸ್ಯೆ ಇರುವ ಯುವಕನೊಬ್ಬನ ಕಥೆ. ತನ್ನ ಸಮಸ್ಯೆಯಿಂದ ಹೊರಬರಲು ಅವನು ನಡೆಸುವ ಹೋರಾಟದ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.

ಮಿಡಲ್ ಕ್ಲಾಸ್ ರಾಮಾಯಣ: ಧನುಶ್ ಗೌಡ ವಿ ನಿರ್ದೇಶನದ ಮತ್ತು ಜಯರಾಮ್ ಗಂಗಪ್ಪನಹಳ್ಳಿ ನಿರ್ಮಿಸಿರುವ ಈ ಚಿತ್ರದಲ್ಲಿ ಮೋಕ್ಷಿತಾ ಪೈ ಮತ್ತು ವಿನು ಗೌಡ ಮುಖ್ಯ ಪಾತ್ರಗಳಲ್ಲಿದ್ದಾರೆ. ಒಬ್ಬ ಕಪ್ಪು ಹುಡುಗಿಯನ್ನು ಪ್ರೀತಿಸಿ ಮದುವೆಯಾಗುವ ನಾಯಕನ ಕಥೆಯು ಹಲವು ಸವಾಲುಗಳನ್ನು ಎದುರಿಸುವ ಅಂಶಗಳನ್ನು ಒಳಗೊಂಡಿದೆ. ಎಸ್. ನಾರಾಯಣ್ ಮತ್ತು ವೀಣಾ ಸುಂದರ್ ಕೂಡಾ ಸಿನಿಮಾದಲ್ಲಿ ನಟಿಸಿದ್ದಾರೆ.

ರಕ್ಷಕ: ವಿಜಯ್‌ಕುಮಾರ್ ನಿರ್ದೇಶನ ಮತ್ತು ನಟನೆ ಮಾಡಿರುವ ಈ ಚಿತ್ರದಲ್ಲಿ ಅವರು ಒಬ್ಬ ದಕ್ಷ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಮಾಯಾವಿ: ಶಂಕರ್ ಜಿ. ನಿರ್ದೇಶನದ ಮತ್ತು ಡಾ. ಮಹಂತೇಶ್ ಹೆಚ್. ನಿರ್ಮಿಸಿರುವ ಈ ಚಿತ್ರದಲ್ಲಿ ರಘುರಾಮ್ ನಾಯಕರಾಗಿ ಮತ್ತು ನಿಶ್ಚಿತಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಇದೊಂದು ಸಸ್ಪೆನ್ಸ್ ಮತ್ತು ಕ್ರೈಮ್ ಥ್ರಿಲ್ಲರ್ ಸಿನಿಮಾ ಆಗಿದೆ.

ರೂಮ್‌ಬಾಯ್: ಲಿಖೀತ್ ಸೂರ್ಯ ನಾಯಕನಾಗಿ ಮತ್ತು ನಿರ್ಮಾಪಕರಾಗಿರುವ ಈ ಚಿತ್ರವನ್ನು ರವಿ ನಾಗಡದಿನ್ನಿ ನಿರ್ದೇಶಿಸಿದ್ದಾರೆ. ಸೈಕಾಲಜಿಕಲ್ ಸಸ್ಪೆನ್ಸ್ ಕಂ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಅನೇಕ ಹೊಸ ಕಲಾವಿದರು ಇದ್ದಾರೆ.

ಗುರಿ: ಸೆಲ್ವಂ ಮಾದಪ್ಪನ್ ನಿರ್ದೇಶನದ ಈ ಚಿತ್ರವನ್ನು ರಾಧಿಕಾ.ಎಸ್.ಆರ್ ಮತ್ತು ಚಿತ್ರಲೇಖಾ.ಎಸ್. ನಿರ್ಮಿಸಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವಿನ ಸಂಘರ್ಷ ಹಾಗೂ ಶಿಕ್ಷಕ-ವಿದ್ಯಾರ್ಥಿ ಬಾಂಧವ್ಯವನ್ನು ಈ ಸಿನಿಮಾ ಹೊರತರಲಿದೆ.

ರಾಮನಗರ: ವಿಜಯ್ ರಾಜ್ ನಿರ್ದೇಶಿಸಿರುವ ಈ ಚಿತ್ರವನ್ನು ಸಿ.ಕೆ. ಮಂಜುನಾಥ್ ನಿರ್ಮಿಸಿದ್ದಾರೆ. ಪ್ರಭು ಸೂರ್ಯ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ರಾಜ ಯಾರ್ ಗೊತ್ತಾ ಎಂಬ ಟ್ಯಾಗ್‌ಲೈನ್ ಇದೆ.

Read More
Next Story