ರಾಜಸ್ಥಾನ್ ಚಲನ ಚಿತ್ರೋತ್ಸವದಲ್ಲಿ ʻತಾರಿಣಿʼಗೆ ಪ್ರಶಸ್ತಿ

ಚಿತ್ರದ ನಾಯಕಿ ಮಮತಾ ರಾಹುತ್ ಅವರಿಗೆ ಅತ್ಯುತ್ತಮ ನಟಿ ಮತ್ತು ಸಿನಿಮಾಕ್ಕೆ ʻಬೆಸ್ಟ್ ಕ್ರಿಟಿಕ್ಸ್ ಅವಾರ್ಡ್ʼ ಲಭ್ಯವಾಗಿದೆ.


ರಾಜಸ್ಥಾನ್ ಚಲನ ಚಿತ್ರೋತ್ಸವದಲ್ಲಿ ʻತಾರಿಣಿʼಗೆ ಪ್ರಶಸ್ತಿ
x
ತಾರಿಣಿ ಚಿತ್ರದ ನಟಿ ಮಮತಾ ರಾಹುತ್ ರವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ
Click the Play button to hear this message in audio format

ನಿರ್ದೇಶಕ ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರ ʻತಾರಿಣಿʼ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಒಂದಾದ ರಾಜಸ್ಥಾನ್ ಇಂಟರ್‌ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ ನಲ್ಲಿ ಎರಡು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಮಮತಾ ರಾಹುತ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಸಿನಿಮಾಕ್ಕೆ ʻಬೆಸ್ಟ್ ಕ್ರಿಟಿಕ್ಸ್ ಅವಾರ್ಡ್ʼ ಪ್ರಾಪ್ತವಾಗಿದೆ.

ಚಿತ್ರ ಗರ್ಭಿಣಿ ಕುರಿತ ಕಥಾಹಂದರವನ್ನು ಹೊಂದಿದ್ದು, ಮಮತಾ ರಾಹುತ್‌ ಗರ್ಭಿಣಿಯಾಗಿಯೇ ಪಾತ್ರ ನಿರ್ವಹಿಸಿದ್ದಾರೆ. ʻಮಮತಾ ಅವರ ಮಗುವಿನ ದೃಶ್ಯಗಳೂ ಚಿತ್ರಣಗೊಂಡಿದ್ದು ಖುಷಿ ಕೊಟ್ಟಿದೆʼ ಎಂದು ನಿರ್ದೇಶಕ ಸಂತಸ ವ್ಯಕ್ತಪಡಿಸಿದ್ದಾರೆ.

ಅಯೋಧ್ಯ ಇಂಟರ್‌ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ ನಲ್ಲಿ ಅತ್ಯುತ್ತಮ ಸಾಮಾಜಿಕ ಚಿತ್ರ ಪ್ರಶಸ್ತಿ, ಲಂಡನ್ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್, ಬಾಲಿವುಡ್ ಫಿಲ್ಮ್ ಫೆಸ್ಟಿವ‌ಲ್, ಇಂಡೋಗ್ಮಾ ಫೆಸ್ಟಿವಲ್ , ಫ್ರಾನ್ಸ್ ಇಂಟರ್‌ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಗೋಲ್ಡನ್ ಜ್ಯೂರಿ ಫಿಲ್ಮ್ ಫೆಸ್ಟಿವಲ್, ನ್ಯೂಯಾರ್ಕ್‌ ಫಿಲ್ಮ್ ಫೆಸ್ಟಿವಲ್‌ ಸೇರಿದಂತೆ ಹಲವೆಡೆ ತಾರಿಣಿ ಪ್ರದರ್ಶನಗೊಂಡಿದೆ.

ʻ ಹೆಣ್ಣು ಭ್ರೂಣ ಹತ್ಯೆ ಹಿನ್ನೆಲೆಯಲ್ಲಿ ಕಥೆಯನ್ನು ಸಿದ್ದಪಡಿಸಿದ್ದೇವೆ. ಚಿತ್ರ ಯಶಸ್ವಿಯಾಗುತ್ತದೆʼ ಎಂದರು.

ತಾರಿಣಿ ಪಾತ್ರದಲ್ಲಿ ಮಮತಾ ರಾಹುತ್ , ನಾಯಕನಾಗಿ ರೋಹಿತ್ ಅಭಿನಯಿಸಿದ್ದಾರೆ. ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ಡಾ ಸುರೇಶ್ ಚಿತ್ರಾಪು, ಪ್ರಮಿಳಾ ಸುಬ್ರಹ್ಮಣ್ಯಂ, ವಿಜಯಲಕ್ಷ್ಮಿ, ದೀಪಿಕಾ ಗೌಡ, ಸನ್ನಿ, ತೇಜಸ್ವಿನಿ, ಕವಿತ ಕಂಬಾರ್, ಬೇಬಿ ನಿಶಿತಾ, ಬೇಬಿ ರಿಧಿ, ಪ್ರಿನ್ಸ್ ಜಿತಿನ್ ಕೋಟ್ಯಾನ್, ಮಟಿಲ್ಡಾ ಡಿಸೋಜಾ, ಅರ್ಚನಾ ಗಾಯಕ್ವಾಡ್, ಶೀಬಾ ಮೂರ್ತಿ, ಶ್ವೇತಾ, ಚೈತ್ರ, ಮಂಜು ನಂಜನಗೂಡು, ರಘು ಸಮರ್ಥ್ ಮುಂತಾದವರು ತಾರಾ ಬಳಗದಲ್ಲಿದ್ದಾರೆ.

ಅನಂತ್ ಆರ್ಯನ್ ಸಂಗೀತ ಸಂಯೋಜಿದರೆ ,ದೀಪಕ್ ಸಂಕಲನ, ಕಲೆ ಬಸವರಾಜ್ ಆಚಾರ್ಯ, ನಿಖಿಲ್ ಕಾರಿಯಪ್ಪ ಡಿಐ ಕಾರ್ಯ ನಿರ್ವಹಿಸಿದ್ದಾರೆ. ಶ್ರೀ ಗಜನಿ ಪ್ರೊಡಕ್ಷನ್ಸ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾದ ಚಿತ್ರಕ್ಕೆ ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು ಬಂಡವಾಳ ಹೂಡಿದ್ದು, ಮುಖ್ಯ ಪಾತ್ರದಲ್ಲೂ ಅಭಿನಯಿಸಿದ್ದಾರೆ.

Next Story