‘12 ಥ್‌ ಫೇಲ್’ ಚಿತ್ರದ ಯಶಸ್ಸು ಒಂದು ಬೆಳ್ಳಿಗೆರೆ: ವಿಶಾಲ್ ಭಾರದ್ವಾಜ್
x

‘12 ಥ್‌ ಫೇಲ್’ ಚಿತ್ರದ ಯಶಸ್ಸು ಒಂದು ಬೆಳ್ಳಿಗೆರೆ: ವಿಶಾಲ್ ಭಾರದ್ವಾಜ್


ಜೈಪುರ, ಫೆ.6 (ಪಿಟಿಐ) - ಥಿಯೇಟರ್‌ಗಳಲ್ಲಿ ಏನಾಗುತ್ತಿದೆ ಎಂದು ಯಾರಿಗೂ ಗೊತ್ತಾಗದ ಸಮಯದಲ್ಲಿ, ʻ12 ಥ್‌ ಫೇ‌ಲ್‌ʼ ನಂಥ ಸಿನೆಮಾ ಯಶಸ್ಸು ಬೆಳ್ಳಿಗೆರೆಯಂತೆ ಎಂದು ಚಿತ್ರ ನಿರ್ಮಾಪಕ ವಿಶಾಲ್ ಭಾರದ್ವಾಜ್ ಹೇಳಿದ್ದಾರೆ.

ಜೈಪುರ ಸಾಹಿತ್ಯೋತ್ಸವದಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ʻಮ್ಯಾಕ್‌ಬೆತ್ʼ, ʻಓಂಕಾರʼ, ʻಹೈದರ್ʼ, ಅಥವಾ ʻದೇವ್ ಡಿʼ ಮತ್ತು ʻಓಯೆ ಲಕ್ಕಿ! ಲಕ್ಕಿ ಓಯೆ!" ನಂತಹ ಚಲನಚಿತ್ರಗಳಿಗೆ ಹಣ ಹೂಡಿಕೆ ಕಷ್ಟವಿಲ್ಲದ ಕಾಲವೊಂದಿತ್ತು ಎಂದರು.

ʻಸ್ವತಂತ್ರ ಸಿನಿಮಾ ಸಾಕಷ್ಟು ಪ್ರಗತಿ ಕಂಡಿದೆ. ವಾಸ್ತವವೆಂದರೆ ಸಾಕಷ್ಟು ಮುನ್ನಡೆ ಸಾಧಿಸಿದ ಬಳಿಕ ಈಗ ಹಿಮ್ಮೆಟ್ಟುತ್ತಿದೆ. ಅದಕ್ಕೆ ಕಾರಣವೇನು ಎಂದು ನಾವೆಲ್ಲರೂ ಹುಡುಕುತ್ತಿದ್ದೇವೆ. ಕಮರ್ಷಿಯಲ್ ಸ್ಟಾರ್‌ಗಳು ನಟಿಸಿದ್ದ ʻಹೈದರ್', 'ಮಕ್ಬೂಲ್', 'ಓಂಕಾರ' ಮತ್ತಿತರ ಸಿನೆಮಾಗಳ ಕಾಲವೊಂದಿತ್ತು. 'ದೇವ್ ಡಿ' ಮತ್ತು 'ಓಯೆ ಲಕ್ಕಿ ಲಕ್ಕಿ ಓಯೆ' ಚಿತ್ರಗಳನ್ನು ಮಾಡಲು ನಮಗೆ ಹಣ ಸುಲಭವಾಗಿ ಹಣ ಸಿಗುತ್ತಿತ್ತುʼ ಎಂದು ಹೇಳಿದರು.

ಭಾರದ್ವಾಜ್ ಪ್ರಕಾರ, ಇಂಥ ಚಿತ್ರಗಳಿಗೆ ಹಣ ಸಂಗ್ರಹ ಈಗ ತುಂಬಾ ಕಷ್ಟಕರ. ಏಕೆಂದರೆ, ಎಲ್ಲರೂ ಹೆದರುತ್ತಾರೆ ಮತ್ತು ಥಿಯೇಟರ್‌ಗಳಲ್ಲಿ ಯಾವುದು ಯಶಸ್ಸು ಗಳಿಸುತ್ತದೆ ಎಂದಷ್ಟೇ ನೋಡುತ್ತಾರೆ.

ಚಲನಚಿತ್ರ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರನ್ನು ʻ12 ಥ್‌ ಫೇಲ್ʼ ಸಿನೆಮಾಕ್ಕಾಗಿ ಹೊಗಳಿದರು. ʻಇದೊಂದು ಅಸಾಧಾರಣ ಸಿನೆಮಾ. ಎಲ್ಲೆಡೆ ಭಾರಿ ಹೂಡಿಕೆಯ ಚಿತ್ರಗಳ ಉಬ್ಬರ ಇರುವಾಗ ಈ ಸಿನಿಮಾ ವಿಮರ್ಶಕರನ್ನು ಬೆರಗುಗೊಳಿಸಿದೆ. ನಟ ವಿಕ್ರಮ್ ಮಾಸ್ಸೆ ನಟನೆಯ ಈ ಚಲನಚಿತ್ರವನ್ನು 20 ಕೋಟಿ ರೂ.ಗಳಲ್ಲಿ ನಿರ್ಮಿಸಿದ್ದು, ಅಕ್ಟೋಬರ್‌ನಲ್ಲಿ ಬಿಡುಗಡೆಯಾಯಿತು. ಈಗ ಒಟಿಟಿ ವೇದಿಕೆಗಳಲ್ಲಿ ಲಭ್ಯವಿದ್ದರೂ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು, 70 ಕೋಟಿ ರೂ. ಗಳಿಸಿದೆʼ ಎಂದು ಶ್ಲಾಘಿಸಿದರು.

ಈ ಚಿತ್ರದಲ್ಲಿ ಯಾವುದೇ ಸ್ಟಾರ್‌ ಗಳು ಅಥವಾ ವಿಕ್ಷಿಪ್ತತೆ ಇಲ್ಲ. ಹಿನ್ನೆಲೆ ಸಂಗೀತ ಸುಂದರವಾಗಿದೆ. ಇದು ವಿಧು ವಿನೋದ್ ಚೋಪ್ರಾ ಅವರ ಶುದ್ಧ ಚಿತ್ರ ಮತ್ತು ಅವರ ಅತ್ಯುತ್ತಮ ಚಿತ್ರ ಎಂದು ನಾನು ಭಾವಿಸುತ್ತೇನೆ. ಚಲನಚಿತ್ರದ ಯಶಸ್ಸು ಒಂದು ಬೆಳ್ಳಿ ರೇಖೆ. ʻಅನಿಮಲ್ʼ ಅಥವಾ ʻಜವಾನ್ʼ ಅಥವಾ ʻಪಠಾಣ್ʼ ಅಥವಾ ದಕ್ಷಿಣ ಭಾರತದ ಬುದ್ಧಿರಹಿತ ಚಿತ್ರವೊಂದು ಯಾಕೆ ಯಶಸ್ವಿಯಾಗುತ್ತದೆ ಎಂದು ಆಲೋಚಿಸುತ್ತೇವೆ. ಇದೆಲ್ಲವೂ ಸಮತೋಲನ ಇಲ್ಲದಂಥವುʼ ಎಂದು ಹೇಳಿದರು.

Read More
Next Story