ಸೋಷಿಯಲ್ ಮೀಡಿಯಾದಲ್ಲಿ ನೇಹಾ ಕಕ್ಕಡ್ ಭಾವುಕ ಪೋಸ್ಟ್: ಅಸಲಿ ಕಾರಣ ಬಿಚ್ಚಿಟ್ಟ ಗಾಯಕಿ
x

ನನ್ನನ್ನು ಪ್ರಶಾಂತವಾಗಿ ಬದುಕಲು ಬಿಡಿ ಎಂದು ಕ್ಯಾಮೆರಾ ಕಣ್ಣುಗಳಿಂದ ದೂರ ಸರಿದ ಗಾಯಕಿ ನೇಹಾ.

ಸೋಷಿಯಲ್ ಮೀಡಿಯಾದಲ್ಲಿ ನೇಹಾ ಕಕ್ಕಡ್ ಭಾವುಕ ಪೋಸ್ಟ್: ಅಸಲಿ ಕಾರಣ ಬಿಚ್ಚಿಟ್ಟ ಗಾಯಕಿ

ನೇಹಾ ಕಕ್ಕಡ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಜವಾಬ್ದಾರಿಗಳು, ಸಂಬಂಧಗಳು ಮತ್ತು ಕೆಲಸದಿಂದ ಸ್ವಲ್ಪ ಕಾಲ ವಿರಾಮ ತೆಗೆದುಕೊಳ್ಳುತ್ತಿದ್ದೇನೆ ಎಂದು ಪೋಸ್ಟ್‌ ಮಾಡಿದ್ದಾರೆ.


Click the Play button to hear this message in audio format

ಖ್ಯಾತ ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಅವರು ಸಾರ್ವಜನಿಕ ಜೀವನದಿಂದ ತಾತ್ಕಾಲಿಕ ವಿರಾಮ ಘೋಷಿಸುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಕ್ಯಾಂಡಿ ಶಾಪ್' ಹಾಡಿನ ಕುರಿತು ವ್ಯಕ್ತವಾದ ತೀವ್ರ ಟೀಕೆಗಳ ಬೆನ್ನಲ್ಲೇ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.

ನಿಗೂಢ ಸಂದೇಶ ಹಂಚಿಕೊಂಡ ನೇಹಾ ಕಕ್ಕರ್

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಿಗೂಢ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ನೇಹಾ, "ಜವಾಬ್ದಾರಿಗಳು, ಸಂಬಂಧಗಳು, ಕೆಲಸ ಮತ್ತು ಸದ್ಯಕ್ಕೆ ನಾನು ಯೋಚಿಸಬಹುದಾದ ಪ್ರತಿಯೊಂದರಿಂದಲೂ ವಿರಾಮ ತೆಗೆದುಕೊಳ್ಳುವ ಸಮಯ ಬಂದಿದೆ. ನಾನು ಮತ್ತೆ ಮರಳಿ ಬರುತ್ತೇನೋ ಇಲ್ಲವೋ ಎಂಬ ಬಗ್ಗೆ ಖಚಿತತೆಯಿಲ್ಲ. ಎಲ್ಲರಿಗೂ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

ಯಾರೂ ನನ್ನ ಫೋಟೋ ಅಥವಾ ವಿಡಿಯೋ ಚಿತ್ರೀಕರಿಸಬೇಡಿ ಎಂದು ಪಾಪರಾಜಿಗಳಿಗೆ ನೇಹಾ ಕಕ್ಕರ್‌ ವಿನಂತಿಸಿಕೊಂಡಿದ್ದಾರೆ.

ಅಲ್ಲದೆ, ಮತ್ತೊಂದು ಸ್ಟೋರಿಯಲ್ಲಿ ಪಾಪರಾಜಿಗಳು ಮತ್ತು ಅಭಿಮಾನಿಗಳಿಗೆ ಮನವಿ ಮಾಡಿರುವ ಅವರು, "ಯಾರೂ ನನ್ನ ಫೋಟೋ ಅಥವಾ ವಿಡಿಯೋ ಚಿತ್ರೀಕರಿಸಬೇಡಿ ಎಂದು ವಿನಂತಿಸುತ್ತೇನೆ. ನನ್ನ ಗೌಪ್ಯತೆಯನ್ನು ಗೌರವಿಸಿ ಮತ್ತು ಈ ಜಗತ್ತಿನಲ್ಲಿ ನನ್ನನ್ನು ಮುಕ್ತವಾಗಿ ಬದುಕಲು ಬಿಡಿ. ದಯವಿಟ್ಟು ಕ್ಯಾಮರಾಗಳು ಬೇಡ. ನನ್ನ ಶಾಂತಿಗಾಗಿ ನೀವೆಲ್ಲರೂ ನೀಡಬಹುದಾದ ಕನಿಷ್ಠ ಗೌರವ ಇದಾಗಿದೆ" ಎಂದು ಬೇಡಿಕೊಂಡಿದ್ದಾರೆ.

'ಕ್ಯಾಂಡಿ ಶಾಪ್' ವಿವಾದದ ಹಿನ್ನೆಲೆ

ನೇಹಾ ಕಕ್ಕರ್ ಅವರ ಸಹೋದರ ಟೋನಿ ಕಕ್ಕರ್ ರಚಿಸಿ, ನಿರ್ಮಿಸಿರುವ 'ಕ್ಯಾಂಡಿ ಶಾಪ್' ಹಾಡು ಕಳೆದ ಡಿಸೆಂಬರ್ 15 ರಂದು ಬಿಡುಗಡೆಯಾಗಿತ್ತು. ಈ ಹಾಡು ಯೂಟ್ಯೂಬ್‌ನಲ್ಲಿ 23 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿತ್ತು. ಹಾಡಿನ ಸಾಹಿತ್ಯ ಅಶ್ಲೀಲವಾಗಿದೆ ಮತ್ತು ನೃತ್ಯದ ಶೈಲಿ ಅಸಹ್ಯಕರವಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಕೊರಿಯನ್ ಪಾಪ್ ಶೈಲಿಯನ್ನು ನಕಲು ಮಾಡಲು ಹೋಗಿ ವಿಫಲರಾಗಿದ್ದಾರೆ ಎಂಬ ಟೀಕೆಗಳು ಕೇಳಿಬಂದಿದ್ದವು.

ನೇಹಾ ಅವರ ಸಂಬಂಧಗಳಿಂದ ವಿರಾಮ ಎಂಬ ಹೇಳಿಕೆ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆಯೇ ಎಂಬ ಸಂಶಯಕ್ಕೆ ಕಾರಣವಾಗಿತ್ತು.

ಈ ನಡುವೆ ನೇಹಾ ಅವರ ಸಂಬಂಧಗಳಿಂದ ವಿರಾಮ ಎಂಬ ಹೇಳಿಕೆ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆಯೇ ಎಂಬ ಸಂಶಯಕ್ಕೆ ಕಾರಣವಾಗಿತ್ತು. ಆದರೆ ನಂತರ ಮತ್ತೊಂದು ಸ್ಪಷ್ಟನೆ ನೀಡಿದ ನೇಹಾ, "ನನ್ನ ಪತಿ ಅಥವಾ ಕುಟುಂಬವನ್ನು ಈ ವಿಷಯಕ್ಕೆ ಎಳೆದು ತರಬೇಡಿ. ಅವರು ನನಗೆ ಬೆಂಬಲವಾಗಿ ನಿಂತಿದ್ದಾರೆ. ನಾನು ವ್ಯವಸ್ಥೆ ಮತ್ತು ಇತರ ಕೆಲವು ವ್ಯಕ್ತಿಗಳ ಬಗ್ಗೆ ಬೇಸರಗೊಂಡಿದ್ದೇನೆ" ಎಂದು ಹೇಳುವ ಮೂಲಕ ವಿಚ್ಛೇದನದ ವದಂತಿಗಳಿಗೆ ತೆರೆ ಎಳೆದಿದ್ದಾರೆ. ನೇಹಾ ಕಕ್ಕರ್ 2020 ರಲ್ಲಿ ಪಂಜಾಬಿ ಗಾಯಕ ರೋಹನ್‌ಪ್ರೀತ್ ಸಿಂಗ್ ಅವರನ್ನು ವಿವಾಹವಾಗಿದ್ದರು.

ಕಳೆದ ಕೆಲ ವರ್ಷಗಳಿಂದ 'ಆಂಖ್ ಮಾರೆ', 'ದಿಲ್ಬರ್', 'ಹೌಲೆ ಹೌಲೆ' ಸೇರಿದಂತೆ ಸಾಲು ಸಾಲು ಹಿಟ್ ಹಾಡುಗಳನ್ನು ನೀಡಿರುವ ನೇಹಾ, ಹಲವು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಸಕ್ರಿಯರಾಗಿದ್ದಾರೆ.

Read More
Next Story