ಗಾಯಕಿ ಅನನ್ಯಾ ಭಟ್ ದಾಂಪತ್ಯ ಜೀವನಕ್ಕೆ: ಡ್ರಮ್ಮರ್ ಮಂಜುನಾಥ್ ಜೊತೆ ತಿರುಪತಿಯಲ್ಲಿ ವಿವಾಹ
x

ಖ್ಯಾತ ಗಾಯಕಿ ಅನನ್ಯಾ ಭಟ್ ಹಸೆಮಣೆ ಏರಿದ್ದಾರೆ. 

ಗಾಯಕಿ ಅನನ್ಯಾ ಭಟ್ ದಾಂಪತ್ಯ ಜೀವನಕ್ಕೆ: ಡ್ರಮ್ಮರ್ ಮಂಜುನಾಥ್ ಜೊತೆ ತಿರುಪತಿಯಲ್ಲಿ ವಿವಾಹ

ಖ್ಯಾತ ಜ್ಯೋತಿಷ್ಯಶಾಸ್ತ್ರದ ಲೇಖಕರು ಹಾಗೂ ಪಂಡಿತ ಡಾ. ಅರುಣ್ ಗುರೂಜಿ ಅವರ ನೇತೃತ್ವದಲ್ಲಿ ಮದುವೆ ನೆರವೇರಿದೆ.


Click the Play button to hear this message in audio format

'ಸೋಜುಗಾದ ಸೂಜಿ ಮಲ್ಲಿಗೆ', 'ಕೆಜಿಎಫ್' ಚಿತ್ರದ 'ಮೆಹಬೂಬ' ಮತ್ತು 'ಕಾಂತಾರ' ಚಿತ್ರದ 'ಸಿಂಗಾರ ಸಿರಿಯೆ' ಹಾಡುಗಳ ಮೂಲಕ ಕನ್ನಡಿಗರ ಮನಗೆದ್ದ ಖ್ಯಾತ ಹಿನ್ನೆಲೆ ಗಾಯಕಿ ಅನನ್ಯಾ ಭಟ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳೆಯ, ಖ್ಯಾತ ಡ್ರಮ್ಮರ್ ಮತ್ತು ಅಂತರರಾಷ್ಟ್ರೀಯ ಸಂಗೀತಗಾರ ಮಂಜುನಾಥ್ ಸತ್ಯಶೀಲ್ ಅವರೊಂದಿಗೆ ಅವರು ಸಪ್ತಪದಿ ತುಳಿದಿದ್ದಾರೆ.

ಸರಳ ವಿವಾಹ ಸಮಾರಂಭ

ಈ ತಾರಾ ಜೋಡಿಯ ವಿವಾಹವು ಸೋಮವಾರ, ತಿರುಪತಿಯಲ್ಲಿ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ನೆರವೇರಿತು. ಖ್ಯಾತ ಜ್ಯೋತಿಷ್ಯ ಲೇಖಕರು ಮತ್ತು ಪಂಡಿತರಾದ ಡಾ. ಅರುಣ್ ಗುರೂಜಿ ಅವರ ನೇತೃತ್ವದಲ್ಲಿ ವಿವಾಹ ಕಾರ್ಯಗಳು ನಡೆದವು. ಅನನ್ಯಾ ಮತ್ತು ಮಂಜುನಾಥ್ ಅವರು ಹಲವು ವರ್ಷಗಳಿಂದ ಪರಿಚಿತರಾಗಿದ್ದು, ಒಂದೇ ಸಂಗೀತ ಬ್ಯಾಂಡ್‌ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಹೀಗಾಗಿ, ಇವರದ್ದು ಪ್ರೇಮ ವಿವಾಹ ಎಂದು ಹೇಳಲಾಗುತ್ತಿದೆ.

ಸಂಗೀತ ಲೋಕದ ಯಶಸ್ವಿ ಪಯಣ

ಮೂಲತಃ ಮೈಸೂರಿನವರಾದ ಅನನ್ಯಾ ಭಟ್, ರಂಗಗೀತೆಗಳ ಮೂಲಕ ತಮ್ಮ ಸಂಗೀತ ಪಯಣವನ್ನು ಆರಂಭಿಸಿದರು. 2013ರಲ್ಲಿ 'ಲೂಸಿಯಾ' ಚಿತ್ರಕ್ಕಾಗಿ ಹಾಡಿದ 'ನೀ ತೊರೆದ ಘಳಿಗೆಯಲಿ' ಹಾಡು ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಅದಕ್ಕೂ ಮುನ್ನ 'ಒಲವೇ ಜೀವನ ಲೆಕ್ಕಾಚಾರ' ಚಿತ್ರದ ಮೂಲಕ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ, 'ಸಿದ್ಧಗಂಗಾ', 'ಭುಜಂಗ', 'ರಾಕೆಟ್', 'ಟಗರು' ಚಿತ್ರದ 'ಮೆಂಟಲ್ ಹೋ ಜಾವಾ' ಸೇರಿದಂತೆ ನೂರಾರು ಯಶಸ್ವಿ ಹಾಡುಗಳಿಗೆ ಅವರು ಧ್ವನಿಯಾಗಿದ್ದಾರೆ.

Read More
Next Story