NAMMA METRO | ಶೂಟಿಂಗ್‌ಗೆ ಅವಕಾಶ: ದಿನದ ಬಾಡಿಗೆ ಎಷ್ಟು ಗೊತ್ತಾ?
ಮೆಟ್ರೋ ಸ್ಟೇಶನ್‌ಗಳಲ್ಲಿ ಹಾಡು ಹಾಗೂ ದೃಶ್ಯಗಳ ಸಿನಿಮಾಗಳ ಚಿತ್ರೀಕರಣ ಬಿಎಂಆರ್‌ಸಿಎಲ್ ಅವಕಾಶ ಕಲ್ಪಿಸಿದೆ. ಚಿತ್ರತಂಡ ಮೆಟ್ರೋ ನಿಗಮದಿಂದ ಅನುಮತಿ ಪಡೆದು ಚಿತ್ರೀಕರಣ ಮಾಡಿಕೊಳ್ಳಬಹುದು.
ಬೆಂಗಳೂರು: ಇಡೀ ಬೆಂಗಳೂರು ಜನರಿಗೆ ಸುಖಕರ ಪ್ರಯಾಣದ ಸೇವೆಯಲ್ಲದೆ, ಚಿತ್ರರಂಗಕ್ಕೂ ಸೇವೆ ನೀಡಲು ನಮ್ಮ ಮೆಟ್ರೋ ಮುಂದಾಗಿದೆ.
ಮೆಟ್ರೋ ಸ್ಟೇಶನ್‌ಗಳಲ್ಲಿ ಹಾಡುಗಳು, ಧಾರಾವಾಹಿ ಮತ್ತು ಸಿನಿಮಾ ಚಿತ್ರೀಕರಣ ಮಾಡಲು ಸ್ಯಾಂಡಲ್ ವುಡ್ ನಿರ್ದೇಶಕರು ಮಲೇಷ್ಯಾಗೆ ಹೋಗುತ್ತಿದ್ದರು. ಆದರೆ ಇದೀಗ ನಮ್ಮ ಮೆಟ್ರೋ ರೈಲಿನಲ್ಲಿ ಚಿತ್ರೀಕರಣ ಮಾಡೋಕೆ ಬಿಎಂಆರ್‌ಸಿಎಲ್ ಅವಕಾಶ ಕಲ್ಪಿಸಿದೆ. ಚಿತ್ರತಂಡ ಮೆಟ್ರೋ ನಿಗಮದಿಂದ ಅನುಮತಿ ಪಡೆದು ಚಿತ್ರೀಕರಣ ಮಾಡಿಕೊಳ್ಳಬಹುದು.
ಮೆಟ್ರೋ ರೈಲಿನಲ್ಲಿ ಬೆಳಗ್ಗೆ 6 ರಿಂದ 8 ಗಂಟೆ ಹಾಗೂ ಮಧ್ಯಾಹ್ನ 9ರಿಂದ 11ಗಂಟೆಯವರೆಗೆ ಚಿತ್ರೀಕರಣ ಮಾಡಬಹುದು. ಒಂದು ದಿನ ಶೂಟಿಂಗ್‌ಗೆ 6 ಲಕ್ಷ ಬಾಡಿಗೆ ದರ ನಿಗದಿ ಮಾಡಲಾಗಿದ್ದು, ಕನ್ನದ ಚಿತ್ರಗಳಿಗೆ 25% ರಷ್ಟು ರಿಯಾಯತಿ ನೀಡಲಾಗಿದೆ.
ಚಿತ್ರೀಕರಣವನ್ನು ಮಾಡಲು ಬಯಸುವ ಭಾರತೀಯ ಚಿತ್ರಗಳು, ಧಾರವಾಹಿಗಳ ತಂಡ 30 ದಿನಗಳ ಮುಂಚಿತವಾಗಿ ಹಾಗೂ ಅಂತರರಾಷ್ಟ್ರೀಯ ಭಾಷೆಗಳ ಚಿತ್ರೀಕರಣಕ್ಕಾಗಿ 60 ದಿನಗಳ ಮುಂಚಿತವಾಗಿ ಸ್ಕ್ರಿಪ್ಟ್‌ನೊಂದಿಗೆ ದಿನಾಂಕ, ಸಮಯ ಹಾಗೂ ಲೋಕೇಶನ್‌ಗಳ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬೇಕಾಗಿದೆ.
ಮೆಟ್ರೋ ರೈಲಿನಲ್ಲಿ ಶೂಟಿಂಗ್‌ಗೆ ಕೆಲವು ಶರತ್ತುಗಳನ್ನು ವಿಧಿಸಲಾಗಿದ್ದು, ಪ್ರಯಾಣಿಕರು ಹೆಚ್ಚಿರುವ ಸಮಯದಲ್ಲಿ ಶೂಟಿಂಗ್ ಮಾಡಬಾರದು, ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಶೂಟಿಂಗ್ ಮಾಡಬೇಕು, ಅನುಮತಿ ನೀಡಿದ ಸ್ಥಳ ಹಾಗೂ ಸಮಯದಲ್ಲೇ ಶೂಟಿಂಗ್ ಮಾಡಬೇಕು, ಚಿತ್ರೀಕರಣ ವೇಳೆ ಯಾವುದೇ ಅವಘಡ ಸಂಭವಿಸಿದರೆ ಅದಕ್ಕೆ ಚಿತ್ರತಂಡವೇ ಹೊಣೆಯಾಗಿರುತ್ತದೆ, ಮೆಟ್ರೋ ಸಂಬಂಧಿಸಿದ ಯಾವುದೇ ವಸ್ತುಗಳಿಗೆ ಹಾನಿಯಾದರೂ ಚಿತ್ರೀಕರಣ ನಡೆಸುವ ತಂಡವೇ ಅದರ ಹಣವನ್ನು ಭರಿಸಬೇಕು ಎನ್ನುವ ಷರತ್ತನ್ನು ಬಿಎಂಆರ್‌ಸಿಎಲ್ ವಿಧಿಸಿದೆ.