
ಪವನ್ ಕುಮಾರ್ ಅಭಿನಯದ 'ಶೋಧ' ವೆಬ್ ಸರಣಿ: ಆಗಸ್ಟ್ 22ರಿಂದ ಜೀ5ನಲ್ಲಿ ಪ್ರಸಾರಗೊಳ್ಳಲಿದೆ.
'ಶೋಧ': ಹೊಸ ಕನ್ನಡ ವೆಬ್ ಸರಣಿ, ಸಸ್ಪೆನ್ಸ್‌ನಿಂದ ಗಮನ ಸೆಳೆದ ಟ್ರೇಲರ್
‘ಕೆಆರ್ಜಿ ಸ್ಟುಡಿಯೋಸ್’ ‘ಶೋಧ’ಕ್ಕೆ ಬಂಡವಾಳ ಹೂಡಿದೆ. ಸುನಿಲ್ ಮೈಸೂರು ಈ ವೆಬ್ ಸರಣಿಗೆ ನಿರ್ದೇಶನ ಮಾಡಿದ್ದಾರೆ.
ಪರಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ವೆಬ್ ಸರಣಿಗಳು ನಿರ್ಮಾಣ ಅತ್ಯಲ್ಪ. ಆದರೂ, ಕೆಲವು ವೆಬ್ ಸರಣಿಗಳು ಮನೆ ಮಾತಾಗುತ್ತಿವೆ. ಈಗ ʼಜೀ ೫ ಒಟಿಟಿ ಪ್ಲಾಟ್‌ಫಾರಂನಲ್ಲಿ ʼಶೋಧ’ ಹೆಸರಿನ ವೆಬ್ ಸೀರಿಸ್ ಬಿಡುಗಡೆಯಾಗುತ್ತಿದೆ. ಇದರ ಟ್ರೇಲರ್ ಬಿಡುಗಡೆಯಾಗಿದ್ದು, ಸಸ್ಪೆನ್ಸ್ ಮೂಲಕ ಗಮನ ಸೆಳೆದಿದೆ.
ಈ ಹಿಂದೆ ʼಜೀ5 ' ಒಟಿಟಿಯಲ್ಲಿ ʼಅಯ್ಯನ ಮನೆ' ಎಂಬ ಮಿನಿ ವೆಬ್ ಸರಣಿ ಪ್ರಸಾರ ಮಾಡಿತ್ತು. ಇದು ಒಳ್ಳೆಯ ಯಶಸ್ಸು ಕಂಡಿತು.
ಕೆಆರ್ಜಿ ಸ್ಟುಡಿಯೋಸ್ ‘ಶೋಧ’ ವೆಬ್ ಸರಣಿಗೆ ಬಂಡವಾಳ ಹೂಡಿದೆ. ಸುನಿಲ್ ಮೈಸೂರು ಈ ವೆಬ್ ಸರಣಿಯನ್ನು ನಿರ್ದೇಶನ ಮಾಡಿದ್ದಾರೆ. ಖ್ಯಾತ ನಟ ಮತ್ತು ನಿರ್ದೇಶಕ ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ನಟ ಸಿರಿ ರವಿಕುಮಾರ್, ಸಪ್ತಮಿ ಗೌಡ, ಮತ್ತು ಅರುಣ್ ಸಾಗರ್ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಪವನ್ ಕುಮಾರ್ ಅವರು ಪೊಲೀಸ್ ಠಾಣೆಗೆ ಬಂದು ತಮ್ಮ ಪತ್ನಿ ಕಳೆದುಹೋಗಿದ್ದಾರೆಂದು ದೂರು ನೀಡುತ್ತಾರೆ. ಆದರೆ, ಪೊಲೀಸ್ ಪಾತ್ರದಲ್ಲಿ ನಟಿಸಿರುವ ಅರುಣ್ ಸಾಗರ್ ತನಿಖೆ ನಡೆಸಿದಾಗ, ಪವನ್ ಕುಮಾರ್ ಅವರ ಪತ್ನಿ ಸಿರಿ ಎಂದು ಗೊತ್ತಾಗುತ್ತದೆ. ಆದರೆ, ಆಕೆಯನ್ನು ತಮ್ಮ ಪತ್ನಿಯಲ್ಲ ಎಂದು ಪವನ್ ಕುಮಾರ್ ನಿರಾಕರಿಸುತ್ತಾರೆ. ಕಳೆದುಹೋದ ಪತ್ನಿ ಯಾರು, ಆಕೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆಯೇ ಎಂಬ ವಿಷಯಗಳೇ ಈ ವೆಬ್ ಸರಣಿಯ ಮುಖ್ಯ ಕಥಾವಸ್ತು. 'ಶೋಧ' ವೆಬ್ ಸರಣಿಯು ಇದೇ ಆಗಸ್ಟ್ 22 ರಿಂದ ಜೀ5 ಒಟಿಟಿಯಲ್ಲಿ ಪ್ರಸಾರವಾಗಲಿದೆ.