ಶಿವರಾಜ್‌ ಕುಮಾರ್‌ ನಟನೆಯ ʻಭೈರವನ ಕೊನೆ ಪಾಠʼ ಫಸ್ಟ್‌ ಲುಕ್‌ ಔಟ್‌!
x
ಹೊಸ ಅವತಾರದಲ್ಲಿ ಶಿವಣ್ಣ

ಶಿವರಾಜ್‌ ಕುಮಾರ್‌ ನಟನೆಯ ʻಭೈರವನ ಕೊನೆ ಪಾಠʼ ಫಸ್ಟ್‌ ಲುಕ್‌ ಔಟ್‌!

ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ ನಟನೆಯ ನಿರ್ದೇಶಕ ಹೇಮಂತ್‌ ಎಂ ರಾವ್‌ ನಿರ್ದೇಶನದ ʻಭೈರವನ ಕೊನೆ ಪಾಠʼ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ.


ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ ನಟನೆಯ ನಿರ್ದೇಶಕ ಹೇಮಂತ್‌ ಎಂ ರಾವ್‌ ನಿರ್ದೇಶನದ ʻಭೈರವನ ಕೊನೆ ಪಾಠʼ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಈ ಪೋಸ್ಟರ್‌ನಲ್ಲಿ ಶಿವಣ್ಣ ಬಿಳಿ ಗಡ್ಡ-ಮೀಸೆಯ ಯೋಧನಾಗಿ ಕಾಣಿಸಿಕೊಂಡಿದ್ದಾರೆ.

ಭೈರವ ಲುಕ್‌ನಲ್ಲಿ ಶಿವಣ್ಣ ಅವರ ಗಡ್ಡ ಹಾಗೂ ಮೀಸೆ ಬೆಳ್ಳಗಾಗಿದೆ. ಅವನು ಬೆನ್ನಿಗೆ ಬಾಣಗಳನ್ನು ಇಟ್ಟುಕೊಂಡಿದ್ದಾರೆ. ‘ಭೈರವನ ಕೊನೆ ಪಾಠ’ ಎಂಬುದರ ಜೊತೆಗೆ ‘ರಾಜನಿಗೆ ಪಾಠಗಳು’ ಎಂದು ಇಂಗ್ಲಿಷ್​ನಲ್ಲಿ ಬರೆಯಲಾಗಿದೆ.

ಜುಲೈ 12ಕ್ಕೆ ನಟ ಶಿವರಾಜ್‌ಕುಮಾರ್ 62ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಬಾರಿ ಶಿವಣ್ಣ ಹುಟ್ಟುಹಬ್ಬಕ್ಕೆ ಸಾಕಷ್ಟು ಅಚ್ಚರಿಗಳು ಕಾದಿವೆ. ಅದಕ್ಕೂ ಮುಂಚೆಯೇ ಶಿವಣ್ಣ ಇದೀಗ ಹೊಸ ಲುಕ್‌ ಔಟ್‌ ಆಗಿದೆ.

ಸ್ಯಾಂಡಲ್‌ವುಡ್‌ನಲ್ಲಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’, ‘ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ʼಎʼ ಮತ್ತು ʼಬಿ’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಹೇಮಂತ್‌ ಎಂ ರಾವ್‌ ʻಭೈರವನ ಕೊನೆ ಪಾಠʼ ಸಿನಿಮಾಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಡಾ. ವೈಶಾಕ್ ಜೆ ಗೌಡ ಅವರು ತಮ್ಮ ನಿರ್ಮಾಣ ಸಂಸ್ಥೆಯಾದ ವಿಜೆಎಫ್– ವೈಶಾಕ್ ಜೆ ಫಿಲ್ಮ್ಸ್ ಅಡಿಯಲ್ಲಿ ‘ಭೈರವನ ಕೊನೆ ಪಾಠ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

Read More
Next Story